Breaking News

ನಶೆಯಲ್ಲಿ ಪತಿಯೇ ಪತ್ನಿಯನ್ನ ಒನಕೆಯಿಂದ ಹೊಡೆದು ಕೊಲೆ

Spread the love

ಚಿಕ್ಕಬಳ್ಳಾಪುರ: ನಶೆಯಲ್ಲಿ ಪತಿಯೇ ಪತ್ನಿಯನ್ನ ಒನಕೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಭದ್ರೆಪಲ್ಲಿ ಎಂಬಲ್ಲಿ ನಡೆದಿದೆ35 ವರ್ಷದ ರತ್ನಮ್ಮ ಕೊಲೆಯಾದ ಮಹಿಳೆ. ಕೊಲೆಯ ಬಳಿಕ ಆರೋಪಿ ಆದಿನಾರಾಯಣಪ್ಪ ಪರಾರಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಆದಿನಾರಾಯಣಪ್ಪ ಬೆಳಗ್ಗೆ ಪತ್ನಿಗೆ 500 ರೂಪಾಯಿ ನೀಡಿದ್ದನು. ಮಧ್ಯಾಹ್ನ ವೇಳೆ ಕಂಠಪೂರ್ತಿ ಕುಡಿದು ಬಂದ ಆದಿನಾರಾಯಣಪ್ಪ ತಾನು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾನೆ.

ರತ್ಮಮ್ಮ ಹಣ ನೀಡಲು ಒಪ್ಪದಿದ್ದಾಗ ಮನೆಯಲ್ಲಿದ್ದ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ದಂಪತಿಗೆ ಮೂರು ಮಕ್ಕಳು ಇವೆ.

ಪರಾರಿಯಾಗಿರುವ ಆರೋಪಿಯನ್ನ ಬಂಧಿಸಲಾಗುವುದು. ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆ

Spread the loveಹಾಸನ: ಜೈಲಿನೊಳಗೇ ವಿಚಾರಣಾಧೀನ ಕೈದಿಗಳ ನಡುವೆ  ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ