Breaking News
Home / ರಾಜ್ಯ / 65 ವರ್ಷದ ಹರೀಶ್ ಸಾಳ್ವೆ ಎರಡನೇ ಮದುವೆಗೆ ಸಿದ್ಧತೆ

65 ವರ್ಷದ ಹರೀಶ್ ಸಾಳ್ವೆ ಎರಡನೇ ಮದುವೆಗೆ ಸಿದ್ಧತೆ

Spread the love

ನವದೆಹಲಿ : ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ 1 ರೂ ಶುಲ್ಕ ಪಡೆಯುವ ಮೂಲಕ ಸುದ್ದಿಯಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ಲಂಡನ್ ಮೂಲದ ಕಲಾವಿದೆಯೊಂದಿಗೆ ಎರಡನೆಯ ಮದುವೆಗೆ ಸಿದ್ಧತೆ ನಡೆಸಿದ್ದಾರೆ.

65 ವರ್ಷದ ಹರೀಶ್ ಸಾಳ್ವೆ, 38 ವರ್ಷಗಳ ವೈವಾಹಿಕ ಜೀವನದ ಬಳಿಕ ಮೀನಾಕ್ಷಿ ಸಾಳ್ವೆ ಅವರಿಂದ ಜೂನ್ ತಿಂಗಳಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.

ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದರು.

ಸುಪ್ರೀಂಕೋರ್ಟ್‌ನ ಉನ್ನತ ಮಟ್ಟದ ಪ್ರಕರಣಗಳಲ್ಲಿ ಪ್ರತಿನಿಧಿಸುತ್ತಿರುವ ಸಾಳ್ವೆ, ಕೊರೊನಾ ವೈರಸ್ ಪಿಡುಗಿನ ಸಂಕಷ್ಟದ ಸಮಯದಲ್ಲಿಯೂ ಅತ್ಯಂತ ಬ್ಯುಸಿ ವಕೀಲರಲ್ಲಿ ಒಬ್ಬರಾಗಿದ್ದರು.

ಅಕ್ಟೋಬರ್ 28ರಂದು ನಡೆಯಲಿರುವ ವಿವಾಹದಲ್ಲಿ ಲಂಡನ್ ಮೂಲದ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರನ್ನು ಚರ್ಚ್‌ನಲ್ಲಿ ವರಿಸಲಿದ್ದಾರೆ. ಸಾಳ್ವೆ ಅವರು ಉತ್ತರ ಲಂಡನ್‌ನಲ್ಲಿ ನೆಲೆಸಿದ್ದು, ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ.

ಬ್ರಿಟನ್‌ನಲ್ಲಿ ಜನಿಸಿ ಕ್ಯಾರೋಲಿನ್ ಅವರಿಗೆ 18 ವರ್ಷದ ಮಗಳಿದ್ದಾಳೆ. ಕಲೆಯ ಜತೆಗೆ ತಮ್ಮಿಬ್ಬರಿಗೂ ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಒಂದೇ ರೀತಿಯ ಅಭಿರುಚಿ ಇದೆ ಎಂದು ಸಾಳ್ವೆ ತಿಳಿಸಿದ್ದಾರೆ. ಲಂಡನ್‌ನಲ್ಲಿ 15 ಜನರು ಮಾತ್ರವೇ ಸೇರಲು ಅವಕಾಶ ಇರುವುದರಿಂದ ಈ ಮದುವೆ ಅತ್ಯಂತ ಸರಳವಾಗಿ ನಡೆಯಲಿದೆ. ಕ್ಯಾರೋಲಿನ್ ಅವರ ಕುಟುಂಬ ಹಾಗೂ ಬ್ರಿಟನ್‌ನಲ್ಲಿನ ಖ್ಯಾತ ಹೋಟೆಲ್ ಉದ್ಯಮಿಗಳಾದ ಕ್ಯಾಮೆಲ್ಲಿಯಾ ಮತ್ತು ನಮಿತಾ ಪಂಜಾಬಿ ಸಾಳ್ವೆ ಅವರ ಅತಿಥಿಗಳಾಗಿ ಮದುವೆಯಲ್ಲಿ ಭಾಗವಹಿಸಲಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ