Breaking News

ನಾಯಿಯ ಮೇಲೆ ಅತ್ಯಾಚಾರ ನಡಸಿದ ಅಲ್ಲದೆ, ನಾಯಿಯ ಗುಪ್ತಾಂಗಕ್ಕೆ 11 ಇಂಚಿನ ಕೋಲನ್ನು ತುರುಕಿದ್ದಾನೆ

Spread the love

ಮುಂಬೈ :ಈ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರಾಣಿಪ್ರಿಯರು ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಸ್ಥಳೀಯರಾದ ನೂರಿ ಎಂಬ ಮಹಿಳೆ ಅಕ್ಟೋಬರ್ 22ರಂದು ಶಾಪಿಂಗ್ ಕಾಂಪ್ಲೆಕ್ಸ್​ನ ಪಾರ್ಕಿಂಗ್​ನಲ್ಲಿ ಇರುವ ಹೆಣ್ಣು ನಾಯಿಗೆ ಊಟ ಕೊಡಲು ಬಂದಾಗ ಆ ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೈತುಂಬ ಗಾಯಗೊಂಡಿದ್ದ ಆ ನಾಯಿಯನ್ನು ಅನಿಮಲ್ ಕೇರ್ ಸೆಂಟರ್​ ಆಫ್​ ವರ್ಲ್ಡ್​ ಫಾರ್ ಆಲ್​ಗೆ ಕರೆದುಕೊಂಡು ಬಂದರು ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಮೊದಲು ಯಾವುದೋ ಇನ್ನೊಂದು ನಾಯಿ ಕಚ್ಚಿರಬಹುದು ಎಂದುಕೊಂಡಿದ್ದೆವು. ಆದರೆ, ಅದರ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿತ್ತು. ವೈದ್ಯರು ಪರಿಶೀಲಿಸಿದಾಗ ನಾಯಿಯ ಗುಪ್ತಾಂಗದಲ್ಲಿ ಕೋಲು ತುರುಕಿರುವುದು ಗೊತ್ತಾಯಿತು. ಬಳಿಕ, 11 ಇಂಚಿನ ಕೋಲನ್ನು ನಾಯಿಯ ಗುಪ್ತಾಂಗದಿಂದ ಹೊರ ತೆಗೆಯಲಾಯಿತು. ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಕೆಲಸ ಮಾಡುತ್ತಿರುವ ಅಥವಾ ಅಲ್ಲೇ ಸುತ್ತಮುತ್ತ ವಾಸಿಸುತ್ತಿರುವ ಯಾರೋ ಸೈಕೋ ನಾಯಿಯ ಮೇಲೆ ಅತ್ಯಾಚಾರ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಬಾಂಬೆ ಅನಿಮಲ್ ರೈಟ್ಸ್​ ತಂಡದ ಹೋರಾಟಗಾರ ವಿಜಯ್ ಕಿಶೋರ್ ಹೇಳಿದ್ದಾರೆ.

ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ, ಅಪರಾಧಿಯನ್ನು ಪತ್ತೆಹಚ್ಚುವ ಪ್ರಯತ್ನ ನಡೆದಿದೆ. ಮುಂಬೈನ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಅಪರಿಚಿತ ವ್ಯಕ್ತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Spread the loveಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ