Breaking News

ಆಸ್ಪತ್ರೆಯಲ್ಲಿದ್ದ ಸೋಂಕಿತ ಪತಿಗೆ ಕದ್ದು ಮುಚ್ಚಿ ಎಣ್ಣೆ ತಂದುಕೊಟ್ಟ ಪತ್ನಿ

Spread the love

ಚೆನ್ನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತಿಗೆ 38 ವರ್ಷದ ಮಹಿಳೆಯೊಬ್ಬರು ಮದ್ಯ ತಂದುಕೊಟ್ಟು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ತಮಿಳುನಾಡಿನ ಕುದ್ದಲೂರಿನ ಚಿದಂಬರಂನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪತಿಗೆ ಮದ್ಯ ತಂದುಕೊಟ್ಟಿದ್ದಕ್ಕೆ ಮಹಿಳೆಯನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಹಿಳೆಯ ಪತಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಟಿ.ಮುತ್ತುಕುಮಾರ್(48) ಅವರಿಗೆ ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. ನಂತರ ಚಿಕಿತ್ಸೆಗಾಗಿ ಆರ್‍ಎಂಎಂಎಂಸಿಎಚ್ ಗೆ ದಾಖಲಾಗಿದ್ದರು. ಬುಧವಾರ ಇವರ ಪತ್ನಿ ಎಂ.ಕಲೈಮಂಗೈ ಅವರು ಆಸ್ಪತ್ರೆಗೆ ಊಟದ ಬ್ಯಾಗ್ ನೀಡಲು ಬಂದಿದ್ದಾರೆ. ಪತ್ನಿ ಊಟ ನೀಡಿ ಮನೆಗೆ ತೆರಳಿದ ಕೆಲವೇ ಹೊತ್ತಿನಲ್ಲಿ ಮುತ್ತುಕುಮಾರನ್ ಆಸ್ಪತ್ರೆಯ ವಾರ್ಡ್‍ನಲ್ಲಿ ಗಲಾಟೆ ಮಾಡಿದ್ದಾನೆ. ಇದರಿಂದ ಇತರೆ ರೋಗಿಗಳಿಗೆ ತೊಂದರೆಯಾಗಿದ್ದು, ಈ ಕುರಿತು ರೋಗಿಗಳು ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

ಇತರೆ ರೋಗಿಗಳು ಮಾಹಿತಿ ನೀಡುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ವಿಎ ವಾರ್ಡ್‍ಗೆ ತೆರಳಿದ್ದು, ಈ ವೇಳೆ ಮುತ್ತುಕುಮಾರ್ ಕೂಗಾಟ, ಚೀರಾಟ ಮಾಡುತ್ತಿದ್ದುದು ಕಂಡಿದೆ. ಈ ವೇಳೆ ವಿಚಾರಣೆ ನಡೆಸಿದಾಗ ಪತ್ನಿ ನೀಡಿದ ಊಟದ ಬ್ಯಾಗ್‍ನಲ್ಲಿ ಮದ್ಯವನ್ನೂ ನೀಡಿರುವುದಾಗಿ ತಿಳಿಸಿದ್ದಾನೆ. ನಂತರ ವಿಎ ಚಿದಂಬರಂ ಅಣ್ಣಾಮಲೈ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ