Breaking News

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

Spread the love

ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ. ಲಿಖಿತ ರೂಪದ ಆದೇಶ ಬೇಕು ಅನ್ನೋದು ನಮ್ಮ ಬೇಡಿಕೆಯಾಗಿತ್ತು. ಲಿಖಿತ ಆದೇಶ ಬರೋವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಆಶಾ ಕಾರ್ಯಕರ್ತೆಯರ ಸಂಘಟನಾ ಕಾರ್ಯದರ್ಶಿ ನಾಗಲಕ್ಷ್ಮಿ ಹೇಳಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಲಿಖಿತ ರೂಪದಲ್ಲಿ ಆದೇಶ ಬೇಕು ಅನ್ನೋದೂ ಬೇಡಿಕೆ ಆಗಿತ್ತು. ಮುಖ್ಯಮಂತ್ರಿಗಳು ನನ್ನ ಮಾತೇ ಲಿಖಿತ ಎಂದಿದ್ದಾರೆ. ಆದ್ರೆ ಆಶಾ ಕಾರ್ಯಕರ್ತೆಯರು ಲಿಖಿತ ರೂಪದ ಆದೇಶ ಬೇಕು ಅಂದಿದ್ದಾರೆ. ಆದೇಶ ಪ್ರತಿ ಬರೋವರೆಗೆ ನಮ್ಮ ಆಹೋರಾತ್ರಿ ಧರಣಿ ಮುಂದುವರಿಯುತ್ತೆ ಎಂದಿದ್ದಾರೆ.

ಸಿಎಂ ಕಚೇರಿಯಲ್ಲೇ ಶಾಲು, ಹೂಗುಚ್ಛ ಕೊಟ್ರು
ಇನ್ನೂ ಸಿಎಂಗೆ ಶಾಲು ಹಾಕಿ ಸನ್ಮಾನಿಸಿದ್ದರ ನಗ್ಗೆ ಕೆಲವರು ತಪ್ಪಾಗಿ ಅರ್ಥ ಕಲ್ಪಿಸುತ್ತಿದ್ದಾರೆ. ಶಾಲು ಹಾಕಿರೋದು ನಾವೆಲ್ಲ, ನಾವು ಶಾಲು, ಹೂಗುಚ್ಛ ತೆಗೆದುಕೊಂಡು ಹೋಗಿರಲಿಲ್ಲ. ಸಿಎಂ ಕಚೇರಿಯಲ್ಲೇ ಕೊಟ್ಟರು. ಇದರ ಬಗ್ಗೆ ತಪ್ಪು ಸಂದೇಶ ಹೋಗಬಾರದು. ನಾವು ಸಿಎಂ ಭರವಸೆಗೆ ಧನ್ಯವಾದ ಸಲ್ಲಿಸಿದ್ದೇವೆ ಅಷ್ಟೇ. ಗುಟ್ಟಾಗಿ ಯಾವುದು ಮಾಡೋ ಅವಶ್ಯಕತೆ ಇಲ್ಲ. ನಾವು ತಪ್ಪು ಮಾಡಿದ್ರೆ ನಾಡಿನ ಜನತೆಗೆ ಕ್ಷಮೆ ಕೇಳೋಕೆ ಹಿಂಜರಿಯಲ್ಲ ಅಂತಾ ಹೇಳಿದ್ದಾರೆ.

ಏನಾಗಿದ್ರೂ ತಪ್ಪಾಗಿದ್ರೆ ಸಾಕ್ಷಿ ಸಮೇತ ತಂದು ಕೊಡಿ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಾಗಿ ಬಳಸಬೇಡಿ. ನಮ್ಮ ಬೇಡಿಕೆಗಳು ಸ್ಪಷ್ಟ, ಲಿಖಿತ ರೂಪದ ಆದೇಶ ಕೈ ಸೇರೋ ತನಕ ಹಿಂದೆ ಸರಿಯಲ್ಲ. ಹೋರಾಟದಲ್ಲಿ ಆಶಾ ಸಹೋದರಿಯರು ಇರೋ ತನಕ ನಾವು ಜೊತೆ ಇರುತ್ತೇವೆ. ಜೀವ ಹೋದ್ರೂ ಪರ್ವಾಗಿಲ್ಲ ಅಂದಿದ್ದಾರೆ.


Spread the love

About Laxminews 24x7

Check Also

ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಖಾಯಂ ಪ್ರಾಂಶುಪಾಲರ ನೇಮಕ: ಸಚಿವ ರಾಯರೆಡ್ಡಿ

Spread the loveಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ