Breaking News

ಸ್ಕ್ರೀನ್‌ ಶಾಟ್‌ ಸ್ಕ್ಯಾಮ್‌ – 5,000 ರೂ. ಕಳಿಸಿ ರೈತನ 13.78 ಲಕ್ಷ ರೂ. ದೋಚಿದ ಸೈಬರ್‌ ವಂಚಕರು!

Spread the love

ದಾವಣಗೆರೆ: ರೈತರೊಬ್ಬರಿಗೆ ಸೈಬರ್‌ ವಂಚಕರು 5,146 ರೂ. ಹಣ ಕಳಿಸಿ ಲಾಭದ ಆಸೆ ತೋರಿಸಿ ಅವರ ಅಕೌಂಟ್‌ನಲ್ಲಿದ್ದ 13.78 ಲಕ್ಷ ರೂ. ದೋಚಿದ ಘಟನೆ ದಾವಣಗೆರೆಯ  ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.

ಕೆಲವು ಉತ್ಪನ್ನಗಳನ್ನು ವಿಶ್‌ಲಿಸ್ಟ್‌ನಲ್ಲಿಟ್ಟು ಪ್ರತಿದಿನ 30 ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿದರೆ ಹಣ ಗಳಿಸಬಹುದು ಎಂದು ಟೆಲಿಗ್ರಾಮ್‌ನಲ್ಲಿ ನೇಹಾ ಅಗರ್‌ವಾಲ್ ಎಂಬಾಕೆ ರೈತನಿಗೆ ನಂಬಿಸಿದ್ದಳು. ಈ ಜಾಲಕ್ಕೆ ಸಿಲುಕಿದ ರೈತ, ಸ್ಕ್ರೀನ್‌ ಶಾಟ್‌ ಕಳುಹಿಸಿದ್ದ. ಪ್ರತಿ ಸ್ಕ್ರೀನ್‌ಶಾಟ್‌ಗೆ 50 ರೂ. ಹಣ ನೀಡುವುದಾಗಿ ಆಕೆ ನಂಬಿಸಿದ್ದಳು. ಅದರಂತೆ ಲಿಂಕ್‌ ಒಂದನ್ನು ಕಳಿಸಿ, ಅದರಲ್ಲಿ ಬ್ಯಾಂಕ್‌ ಅಕೌಂಟ್‌ ಮಾಹಿತಿ ಅಪ್‌ಲೋಡ್‌ ಮಾಡುವಂತೆ ಸೂಚಿಸಿದ್ದಳು. ರೈತ ಬ್ಯಾಂಕ್‌ ದಾಖಲೆಯ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದಾಗ ಅಕೌಂಟ್‌ಗೆ 5,146 ರೂ. ಹಣ ವರ್ಗಾವಣೆ ಮಾಡಿದ್ದರು.

ಹಣ ಕಳುಹಿಸಿ ರೈತನನ್ನು ತಮ್ಮ ದಾರಿಗೆ ಎಳೆದುಕೊಂಡ ವಂಚಕರು, ಹಣ (Money) ಹೂಡಿಕೆ ಮಾಡಿದರೆ ಮತ್ತಷ್ಟು ಲಾಭ ಬರಲಿದೆ ಎಂದು ನಂಬಿಸಿದ್ದರು. ಅವರ ಮಾತು ನಂಬಿದ ರೈತ ಜು. 19 ರಿಂದ ಸೆ. 26ರವರೆಗೆ ಒಟ್ಟು 13.78 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ವಂಚಕರು ಕಳುಹಿಸಿದ್ದ ಲಿಂಕ್‌ನಲ್ಲಿ ಹೂಡಿಕೆಯ ಮೊತ್ತ 15 ಲಕ್ಷ ಎಂದು ತೋರಿಸಿದ್ದು, ಈ ಹಣವನ್ನು ಪಡೆಯುವ ಪ್ರಯತ್ನ ಮಾಡಿದಾಗ 1.75 ಲಕ್ಷ ರೂ. ತೆರಿಗೆ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.

ತೆರಿಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ ವಂಚಕರು ಸಂಪರ್ಕ ಕಡಿದುಕೊಂಡಿದ್ದಾರೆ. ಸಂಪರ್ಕ ಕಡಿದುಕೊಂಡಾಗ ಇದು ವಂಚನೆಯ ಜಾಲ ಎಂದು ತಿಳಿದುಬಂದಿದೆ. ತಕ್ಷಣ ರೈತ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾ


Spread the love

About Laxminews 24x7

Check Also

ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಖಾಯಂ ಪ್ರಾಂಶುಪಾಲರ ನೇಮಕ: ಸಚಿವ ರಾಯರೆಡ್ಡಿ

Spread the loveಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ