Breaking News

IFFI 2026 Winners | ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ರಿಷಬ್

Spread the love

ಗೋವಾ: 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದೊಂದಿಗೆ ತೆರೆಕಂಡಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಹಲವು ಅತ್ಯುತ್ತಮ ಚಿತ್ರಗಳು ಹಾಗೂ ಕಲಾವಿದರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಬಾರಿಯ ಪ್ರಮುಖ ಪ್ರಶಸ್ತಿಗಳಲ್ಲಿ ಕನ್ನಡದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ  ಅವರು ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ (ಪುರುಷ) ವಿಭಾಗದ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು. ಮತ್ತೊಂದೆಡೆ, ‘ಹನುಮಾನ್ ಅಂಶ್’ ಚಿತ್ರ ನಿರ್ದೇಶನಕ್ಕಾಗಿ ವಿಶಾಲ್ ಚತುರ್ವೇದಿ ಅವರು ಭಾರತೀಯ ಚಲನಚಿತ್ರ ವಿಭಾಗದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು.

ಇನ್ನು ಪೋರ್ಚುಗೀಸ್-ಫ್ರೆಂಚ್ ಚಿತ್ರ ‘Aquí’ ಅತ್ಯುತ್ತಮ ಚಿತ್ರದ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಟಿಯಾಗೊ ಗುಡೆಸ್ ನಿರ್ದೇಶನದ ಈ ಚಿತ್ರ ಅಂತಾರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆಯಿತು

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
* ಅತ್ಯುತ್ತಮ ಚಿತ್ರ – ಗೋಲ್ಡನ್ ಪೀಕಾಕ್: ‘Aquí’ – ನಿರ್ದೇಶನ: ಟಿಯಾಗೊ ಗುಡೆಸ್
* ಅತ್ಯುತ್ತಮ ನಿರ್ದೇಶಕ – ಸಿಲ್ವರ್ ಪೀಕಾಕ್: ವೋಲ್ಕರ್ ಶ್ಲೊಂಡಾರ್ಫ್ – ‘Visitation’
* ಸ್ಪೆಷಲ್‌ ಮೆನ್ಷನ್‌ (ವಿಶೇಷ ಉಲ್ಲೇಖ): ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’
* ಅತ್ಯುತ್ತಮ ಚೊಚ್ಚಲ ಚಿತ್ರ – ಸಿಲ್ವರ್ ಪೀಕಾಕ್: ‘The Golden Age’ – ಬೆರೆಂಜರ್ ಥೌಯಿನ್
* ವಿಶೇಷ ತೀರ್ಪುಗಾರರ ಪ್ರಶಸ್ತಿ – ಸಿಲ್ವರ್ ಪೀಕಾಕ್: ‘The River Train’
* ಅತ್ಯುತ್ತಮ ನಟಿ – ಸಿಲ್ವರ್ ಪೀಕಾಕ್: ಮಾಯಾ ಓ’ರೂರ್ಕ್ – ‘The Meltdown’
* ಅತ್ಯುತ್ತಮ ನಟ – ಸಿಲ್ವರ್ ಪೀಕಾಕ್: ರಿಷಬ್ ಶೆಟ್ಟಿ – ‘ಕಾಂತಾರ: ಚಾಪ್ಟರ್ 1’
* ಅತ್ಯುತ್ತಮ ವೆಬ್ ಸರಣಿ OTT ಪ್ರಶಸ್ತಿ: ‘Made In India: A Titan Story’ – ನಿರ್ದೇಶನ: ರಾಬಿ ಗ್ರೆವಾಲ್
* ಅತ್ಯುತ್ತಮ ಚೊಚ್ಚಲ ನಿರ್ದೇಶಕ: ವಿಶಾಲ್ ಚತುರ್ವೇದಿ – ‘ಹನುಮಾನ್ ಅಂಶ್’


Spread the love

About Laxminews 24x7

Check Also

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

Spread the love ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ