Breaking News

ಇಂದಿನಿಂದ ನಂದಿನಿ ಮೊಸರಿನ ದರ 2 ರೂ. ಇಳಿಕೆ

Spread the love

ಬೆಂಗಳೂರು: ನಂದಿನಿ ಮೊಸರಿನ ದರ ಇಂದಿನಿಂದ ಇಳಿಕೆಯಾಗಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ  ಮೊಸರಿನ ದರವನ್ನು 1 ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1 ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಿ ಏರಿಕೆ ಮಾಡಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆ ಮಾಡುವಂತೆ ಸಿಎಂ ಡಿಕೆ ಶಿವಕುಮಾರ್‌ ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಸಿಎಂ ಈ ನಿರ್ದೇಶನದಂತೆ ಕೆಎಂಎಫ್ ಇದೀಗ ದರ ಕಡಿತಗೊಳಿಸಿದೆ.

ದರ ಎಷ್ಟು?
ಅರ್ಧ ಲೀಟರ್‌ ಪ್ಯಾಕ್: ಪ್ರಸ್ತುತ 34 ರೂ. ಇದ್ದ ದರವನ್ನು 33 ರೂ.ಗೆ ಇಳಿಸಲಾಗಿದೆ.
1 ಲೀಟರ್‌ ಪ್ಯಾಕ್:ಪ್ರಸ್ತುತ 68 ರೂ. ಇದ್ದ ದರವನ್ನು 66 ರೂ.ಗೆ ಕಡಿತಗೊಳಿಸಲಾಗಿದೆ.

ನಂದಿನಿ ಮೊಸರಿನ ದರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 14 ರೂ. ಮತ್ತು ಅರ್ಧ ಲೀಟರ್‌ಗೆ 6 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ 1 ಲೀಟರ್ ಮೊಸರು 54 ರಿಂದ 68 ರೂ.ಗೆ ಏರಿಕೆಯಾಗಿದ್ದರೆ ಅರ್ಧ ಲೀಟರ್ ಮೊಸರಿನ ಬೆಲೆ 28 ರಿಂದ 34 ರೂ.ಗೆ ಹೆಚ್ಚಳ ಮಾಡಲಾಗಿತ್ತು.


Spread the love

About Laxminews 24x7

Check Also

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

Spread the love ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ