Breaking News

ಭೂ ಕಬಳಿಕೆ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್‌ಗೆ ನೋಟಿಸ್ ಜಾರಿ

Spread the love

ಬೀದರ್: ಭೂ ಕಬಳಿಕೆ ಸಂಬಂಧ ಶಾಸಕ ಪ್ರಭು ಚೌಹಾಣ್‌ಗೆ  ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯದಿಂದ ನೋಟಿಸ್  ಜಾರಿಯಾಗಿದೆ.

2027 ಜನವರಿ 19ರ ಒಳಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಸೂಚನೆ ನೀಡಲಾಗಿದೆ. ಬೀದರ್ ತಾಲೂಕಿನ ಕೊಳ್ಳಾರ ಗ್ರಾಮದ ಸರ್ವೆ ನಂಬರ್ 102ರಲ್ಲಿ 3 ಎಕರೆ ಜಾಗ ಕಬಳಿಕೆ ಆರೋಪ ಕೇಳಿ ಬಂದಿದ್ದು, ಕಮಲ ನಗರ ತಾಲೂಕಿನ ಚೌಂದೋರಿ ಗ್ರಾಮದ ಗ್ರಾ.ಪಂ ಅಧ್ಯಕ್ಷ ದೀಪಕ್ ಪಾಟೀಲ್ ಕೋರ್ಟ್‌ಗೆ ದಾವೆ ಹೂಡಿದ್ದರು.

ದಾಖಲೆಗಳ ಪ್ರಕಾರ ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಈ ಹಿಂದೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ದೀಪಕ್ ಪಾಟೀಲ್ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.


Spread the love

About Laxminews 24x7

Check Also

ಹೃದಯಾಘಾತಕ್ಕೆ LLB ವಿದ್ಯಾರ್ಥಿ ಬಲಿ

Spread the loveಧಾರವಾಡ: ಹೃದಯಾಘಾತದಿಂದ  ಎಲ್‌ಎಲ್‌ಬಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ  ನಡೆದಿದೆ. ಸಮರ್ಥ್ ದೇಶಪಾಂಡೆ (22) ಮೃತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ