Breaking News

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ: ಹೆಚ್ಚಿನ ಬಡ್ಡಿ ಆಸೆ ತೋರಿಸಿ ತಾಯಿ-ಮಗನಿಂದ ಮೋಸ: ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್

Spread the love

ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಜನರಿಗೆ ತಾಯಿ-ಮಗ ವಂಚನೆಯೆಸಗಿದ್ದಾರೆ.

ಈ ತಾಯಿ ಮಗನ ಮಾತಿಗೆ ಮರುಳಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಜನರು 133 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂಬುದು ಗೊತ್ತಾಗಿದೆ. ನಿಪ್ಪಾಣಿಯ ನಂದಾ ಪಾಟೀಲ್, ಪುತ್ರ ಪ್ರಸಾದ್ ಪಾಟೀಲ್‌ ಪ್ರಮುಖ ಆರೋಪಿಗಳು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಚೇರಿಗಳನ್ನ ತೆರೆದಿದ್ದ ಆರೋಪಿಗಳು ನಂದಾ ಟ್ರೇಡರ್ಸ್, ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್‌ ಮತ್ತು ಸೆಲ್ಯೂಷನ್ ಪ್ರೈವೇಟ್‌ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.

1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವ ಆಮಿಷವನ್ನು ಆರೋಪಿಗಳು ಹೂಡಿಕೆದಾರರಿಗೆ ಒಡ್ಡಿದ್ದರು. ಬಳಿಕ ಲಾಭಾಂಶ ಬಿಡಿ ಅಸಲು ಕೇಳಿದರೂ ಧಮ್ಕಿ ಹಾಕುತ್ತಿದ್ದರು. ಮೊದಲು ಶಿವಾನಂದ ನೀಲಣ್ಣನವರ ಜತೆ ಕೆಲಸ ಮಾಡ್ತಿದ್ದ ನಂದಾ ಪಾಟೀಲ್, ವ್ಯವಹಾರಿಕ ಮನಸ್ತಾಪ ಬಳಿಕ ನಿಪ್ಪಾಣಿಯಲ್ಲಿ ಕಚೇರಿ ಓಪನ್‌ ಮಾಡಿದ್ದರು. ಹೂಡಿಕೆ ಹಣದಲ್ಲೇ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಳಗಾವಿ, ಪುಣೆ, ನಾಸಿಕ್ ಹಾಗೂ ಮುಂಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

ಹೂಡಿಕೆ ಮಾಡಿದವರ ಪೈಕಿ ಮಹಾರಾಷ್ಟ್ರದ‌ ನಾಸಿಕ್ ಜಿಲ್ಲೆಯ ಜನರೇ ಅತಿ ಹೆಚ್ಚು ಎಂದು ತಿಳಿದುಬಂದಿದೆ. ವಂಚನೆಗೆ ಸಂಬಂಧಿಸಿದಂತೆ ನಂದಾ, ಪ್ರಸಾದ್, ಸೌರಬ್ ಮಾಳಿ ಸೇರಿ 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೋಲಿಸ್ ಚೌಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

ಆರೋಪಿಗಳ ಪತ್ತೆಗೆ ಬೆಳಗಾವಿ ಎಸ್ ಪಿ ರಾಮರಾಜನ್ ವಿಶೇಷ ತಂಡ ರಚಿಸಿದ್ದಾರೆ.


Spread the love

About Laxminews 24x7

Check Also

ಹೃದಯಾಘಾತಕ್ಕೆ LLB ವಿದ್ಯಾರ್ಥಿ ಬಲಿ

Spread the loveಧಾರವಾಡ: ಹೃದಯಾಘಾತದಿಂದ  ಎಲ್‌ಎಲ್‌ಬಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ  ನಡೆದಿದೆ. ಸಮರ್ಥ್ ದೇಶಪಾಂಡೆ (22) ಮೃತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ