Breaking News

ಬಿರಿಯಾನಿ ತಿನ್ನಲು ತೆರಳುತ್ತಿದ್ದಾಗ ಬೈಕಿಗೆ ಲಾರಿ ಡಿಕ್ಕಿ – ಇಬ್ಬರು ಯುವಕರು ಬಲಿ

Spread the love

ಬೆಂಗಳೂರು: ತಾಯಿ ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರೊಂದಿಗೆ ಬಿರಿಯಾನಿ ತಿನ್ನಲು ತೆರಳುತ್ತಿದ್ದ ವೇಳೆ ಬೈಕಿಗೆ ಲಾರಿ  ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನೆಲಮಂಗಲ ನಗರದ ಬಿನ್ನಮಂಗಲ ಬಳಿ ಹೆದ್ದಾರಿಯಲ್ಲಿ ನಡೆದಿದೆ.

ಆಲೂರು ನಿವಾಸಿ ದಿಲೀಪ್ (20), ಹಾರೋಕ್ಯಾತನಹಳ್ಳಿಯ ಚೇತನ್ (21) ಮೃತ ಯುವಕರು. ದಿಲೀಪ್ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಈ ವೇಳೆ ಚೇತನ್ ತಾಯಿ ಹುಟ್ಟುಹಬ್ಬ ಹಿನ್ನೆಲೆ ಚೇತನ್, ದಿಲೀಪ್ ಸೇರಿದಂತೆ ಸ್ನೇಹಿತರಿಗೆ ಬಿರಿಯಾನಿ ಕೊಡಿಸಲು ಎಲ್ಲರನ್ನು ಕರೆತಂದಿದ್ದ. ಗೆಳೆಯರು ನೆಲಮಂಗಲದಲ್ಲಿ ಖಾಸಗಿ ಹೋಟೆಲ್‌ಗೆ ಬಿರಿಯಾನಿ ತಿನ್ನಲು ಬಂದಿದ್ದರು. ದೀಲಿಪ್ ಹಾಗೂ ಚೇತನ್ ಒಂದೇ ಬೈಕ್ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ.

ಅಪಘಾತದ ಪರಿಣಾಮ ಸ್ಥಳದಲ್ಲೇ ಚೇತನ್ ಮೃತಪಟ್ಟಿದ್ದು, ದೀಲಿಪ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರ ಮೃತದೇಹಗಳನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.


Spread the love

About Laxminews 24x7

Check Also

ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ ಸಾವು

Spread the loveಮುಂಬೈ: ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ (Boy) ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ