Breaking News

ನಾವು ಜಗಳವೇ ಆಡಿಲ್ಲ, ಮುನಿಸು ಎಲ್ಲಿಂದ ಬಂತು? – ಸಿದ್ದು ಮನೆಯಲ್ಲಿ ಮಹದೇವಪ್ಪ ಮಾತು

Spread the love

ಮೈಸೂರು: ಕಳೆದ ನಾಲ್ಕು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಡಾ. ಹೆಚ್‌.ಸಿ. ಮಹದೇವಪ್ಪ ಅವರು ಇಂದು ಮೈಸೂರಿನ ಕುವೆಂಪುನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ.

ಗುರುವಾರ(ನ.26) ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಸಿದ್ದರಾಮಯ್ಯ ಅವರು ಇಂದು ಸಂಜೆಯೇ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರ ನಿವಾಸಕ್ಕೆ ಭೇಟಿ ನೀಡಿದ ಡಾ. ಎಚ್.ಸಿ. ಮಹದೇವಪ್ಪ ಕೆಲಕಾಲ ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ, ಭಿನ್ನಾಭಿಪ್ರಾಯದ ವದಂತಿಗಳನ್ನು ತಳ್ಳಿಹಾಕಿದರು.Once a friend is always a friend (ಒಮ್ಮೆ ಸ್ನೇಹಿತನಾದವನು ಎಂದೆಂದಿಗೂ ಸ್ನೇಹಿತನೇ), ನಾನು ಮತ್ತು ಸಿದ್ದರಾಮಯ್ಯ ಯಾವತ್ತೂ ಜಗಳವೇ ಆಡಿಲ್ಲ. ಜಗಳ ಆಡಿಲ್ಲದ ಮೇಲೆ ಅಂತರ, ಮುನಿಸು ಎಲ್ಲಿಂದ ಬಂತು? ಜಗಳ ಆಡಿಲ್ಲದ ಮೇಲೆ ಮತ್ತೆ ಒಂದಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಸಿದ್ದರಾಮಯ್ಯ ಮನೆಗೆ ನಾನು ಬರುವುದು ಹೊಸದೇನಲ್ಲ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲವೂ ಕೇವಲ ಊಹಾಪೋಹಗಳಷ್ಟೇ. ನಮ್ಮದು 40 ವರ್ಷಗಳ ಸುದೀರ್ಘ ಸ್ನೇಹ. ಅದು ಅಷ್ಟು ಬೇಗ ಬಿರುಕು ಬಿಡುವುದಿಲ್ಲ. ಸಂವಿಧಾನ ದಿನಾಚರಣೆ ವಿಚಾರದಲ್ಲೂ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಭೇಟಿಯ ಬಳಿಕ, ಪಕ್ಕದಲ್ಲೇ ಇದ್ದ ಜಮೀರ್ ಅಹಮದ್ ಖಾನ್ ಅವರು ಇಬ್ಬರೂ ಕೈ ಹಿಡಿದುಕೊಂಡು ಥ್ಯಾಂಕ್ಸ್ ಹೇಳುವಂತೆ ಮಹದೇವಪ್ಪ ಅವರಿಗೆ ಸೂಚಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಮಹದೇವಪ್ಪ, ನಮ್ಮಲ್ಲಿ ಆ ತರಹದ ಯಾವುದೇ ಫಾರ್ಮಾಲಿಟೀಸ್ ಇಲ್ಲ. ನಾವು ಯಾವತ್ತೂ ಫಾರ್ಮಾಲಿಟಿ ಮಾಡಿಕೊಂಡವರೇ ಅಲ್ಲ ಎಂದರು.

ಇದೇ ವೇಳೆ ಮಹದೇವಪ್ಪ ಅವರ ಆಪ್ತ ಸಹಾಯಕನನ್ನು ಕಂಡು ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ, ಇವನು ನಮ್ಮ ಕ್ಷೇತ್ರದವನು, ಆದರೆ ಇರೋದು ಮಾತ್ರ ಮಹದೇವಪ್ಪನ ಜೊತೆ ಎಂದು ನಗೆಯಾಡಿದರು.


Spread the love

About Laxminews 24x7

Check Also

ತೋಟದಲ್ಲಿ AI ಚಿರತೆ ಸೃಷ್ಟಿಸಿ ಪುಂಡಾಟ – ಕಿಡಿಗೇಡಿಗಾಗಿ ಪೊಲೀಸರ ಹುಡುಕಾಟ

Spread the loveದಾವಣಗೆರೆ: ಕಿಡಿಗೇಡಿಯೊಬ್ಬ ತೋಟದಲ್ಲಿ ಚಿರತೆ ಓಡಾಡುವಂತೆ AI ಚಿತ್ರ ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸಿದ ಘಟನೆ ಚನ್ನಗಿರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ