Breaking News

ಹಾವೇರಿಯಲ್ಲಿ ಸಿನಿಮಾದಲ್ಲಿ ಬಳಸುವ ನಕಲಿ ನೋಟುಗಳ ಚಲಾವಣೆಗೆ ಯತ್ನ..! ಎಟಿಎಂ ಯಂತ್ರಕ್ಕೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಖದೀಮರು..!

Spread the love

ಹಾವೇರಿ ಜಿಲ್ಲೆಯಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಬಳಸುವ ನಕಲಿ ನೋಟುಗಳನ್ನು ನೈಜ ಹಣದಂತೆ ಚಲಾವಣೆ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ರಾಷ್ಟ್ರೀಯ ಬ್ಯಾಂಕ್‌ನ ಎಟಿಎಂ ಯಂತ್ರದ ಮೂಲಕ ಜಮೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 76 ನಕಲಿ ನೋಟುಗಳನ್ನು ಎಟಿಎಂ ಮೂಲಕ ಜಮೆ ಮಾಡಲು ಆರೋಪಿಗಳು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇನ್ನು ಎಟಿಎಂ ಯಂತ್ರಕ್ಕೆ ನಕಲಿ ನೋಟುಗಳನ್ನು ಹಾಕುತ್ತಿದ್ದಂತೆ ಯಂತ್ರದಲ್ಲಿದ್ದ ವ್ಯವಸ್ಥೆ ನೋಟುಗಳನ್ನು ಗುರುತಿಸಿ ಬ್ಯಾಂಕ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ. ತಕ್ಷಣ ಅಲರ್ಟ್ ಆದ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರಾಣೆಬೆನ್ನೂರು ಶಹರ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿ, ಪ್ರಕರಣದ ಬೆನ್ನತ್ತಿದ್ದಾರೆ. ಈ ವೇಳೆ ಸಿನಿಮಾಗಳಲ್ಲಿ ಬಳಸುವ ಪ್ರಾಪ್ ಮನಿ ಮಾದರಿಯ ನೋಟುಗಳು ಪತ್ತೆಯಾಗಿವೆ. ಅಲ್ಲದೆ, ‘ಚಿರ್ಲರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಹೆಸರಿನ ನಕಲಿ ನೋಟುಗಳಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಮೇಡ್ಲೇರಿ ಗ್ರಾಮದ ಸುರೇಶ ಬಿಲ್ಲಾಳ ಮತ್ತು ಮಾಲತೇಶ ಮೈಲಾರ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ 500 ರೂಪಾಯಿ ಮುಖಬೆಲೆಯ ಒಟ್ಟು 1,000 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಬ್ಯಾಂಕ್‌ನ ಎಟಿಎಂ ಮೂಲಕವೇ ನಕಲಿ ನೋಟುಗಳನ್ನು ಚಲಾವಣೆಗೆ ತರುವ ಪ್ರಯತ್ನ ಮಾಡಿದ್ದ ಆರೋಪಿಗಳ ಯೋಜನೆ ಬ್ಯಾಂಕ್‌ನ ಎಚ್ಚರಿಕೆ ವ್ಯವಸ್ಥೆಯಿಂದಾಗಿ ವಿಫಲವಾಗಿದೆ.
ಈ ಸಂಬಂಧ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಕಲಿ ನೋಟುಗಳನ್ನು ಎಲ್ಲಿಂದ ತಂದಿದ್ದರು? ಇವುಗಳನ್ನು ಬೇರೆಡೆ ಚಲಾವಣೆ ಮಾಡಲು ಯತ್ನಿಸಿದ್ದರಾ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ ಸಿನಿಮಾದಲ್ಲಿ ಬಳಸುವ ನೋಟುಗಳನ್ನೇ ನೈಜ ಹಣದಂತೆ ಚಲಾವಣೆ ಮಾಡಲು ಹೊರಟ ಖದೀಮರಿಗೆ ಎಟಿಎಂ ಯಂತ್ರವೇ ಬಿಸಿ ಮುಟ್ಟಿಸಿದೆ!

Spread the love

About Laxminews 24x7

Check Also

ಮಾಜಿ ಸಚಿವ ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್; ಆರೋಪಿಯಲ್ಲ ಈಗ ಸಾಕ್ಷಿ!

Spread the loveಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಬಹುಕೋಟಿ ಭ್ರಷ್ಟಾಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ