Breaking News

ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೆಇಎ – PGCET ಚಾಯ್ಸ್ ದಾಖಲಿಸಲು ಅವಕಾಶ

Spread the love

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ  ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ  ತಿಳಿಸಿದ್ದಾರೆ.

ಈ ಸಂಬಂಧ ಕೆಇಎ  ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಅ.13ರಂದು ಬೆಳಿಗ್ಗೆ 10 ಗಂಟೆವರೆಗೆ ಚಾಯ್ಸ್ ಹಾಕಬಹುದು. ಈಗಾಗಲೇ ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಹಾಗೂ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡವರಿಗೆ ಚಾಯ್ಸ್-2 ದಾಖಲಿಸಿ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅವಕಾಶ ನೀಡಲಾಗಿದೆ. ಅಲ್ಲದೆ ಅ.13ರಂದು ಮಧ್ಯಾಹ್ನ 2ರಿಂದ ಅ.15ರ ಬೆಳಿಗ್ಗೆ 10ಗಂಟೆವರೆಗೆ ಆಪ್ಷನ್ಸ್ ಅನ್ನು ಮೇಲೆ-ಕೆಳಗೆ ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಪಿಜಿಸಿಇಟಿಗೆ ಇನ್ನೂ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲು ಅವಕಾಶ ನೀಡಬೇಕೆಂದು ಹಾಗೂ ಯುಜಿ ಮತ್ತು ಪಿಜಿ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕ ವೇಳಾಪಟ್ಟಿ ನೀಡಲು ಎಐಸಿಟಿಎಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ತೀರ್ಮಾನದವರೆಗೆ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.

ಚಾಯ್ಸ್-1 ದಾಖಲಿಸಿದರೆ ಕಾಲೇಜಿಗೆ ಪ್ರವೇಶ ಪಡೆಯಬೇಕು. ಚಾಯ್ಸ್-2 ದಾಖಲಿಸಿದರೆ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅನುವು ಮಾಡುತ್ತದೆ. ಚಾಯ್ಸ್-3 ಹಾಕಿದರೆ ಸಿಕ್ಕಿರುವ ಸೀಟು ಬೇಡ ಎಂದು ಹಾಗೂ ಚಾಯ್ಸ್-4 ಹಾಕಿದರೆ ಯಾವುದೂ ಬೇಡ ಎಂದು ಇಡೀ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಅವಕಾಶ ನೀಡುತ್ತದೆ. ಎರಡನೇ ಸುತ್ತು ಸೀಟು ಹಂಚಿಕೆ ಮಾಡುವಂತೆ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆ ಪ್ರತಿಭಟನೆ ಮಾಡಿತ್ತು. ಈಗ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೆಇಎ ಮಣಿದು ಚಾಯ್ಸ್ ದಾಖಲೆಗೆ ಅವಕಾಶ ನೀಡಿದೆ.


Spread the love

About Laxminews 24x7

Check Also

ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ – ಗಣಿಗ ರವಿಗೆ ವಿಜಯೇಂದ್ರ ಟಾಂಗ್

Spread the loveವಿಜಯಪುರ:ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ ಎಂದು ಶಾಸಕ ಗಣಿಗ ರವಿ  ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ