Breaking News

ಪ್ರಜಾಪ್ರಭುತ್ವ ಉಳಿಸೋ ನಿಟ್ಟಿನಲ್ಲಿ ಹೋರಾಟ, ಒಂದು ಮತವನ್ನೂ ಕಿತ್ತಾಕೋಕೆ ಬಿಲ್ಲ – ದಿಲ್ಲಿಯಲ್ಲಿ ಡಿಕೆಶಿ ಗುಡುಗು

Spread the love

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ನಾನು ಅಕ್ರಮ ಬಯಲಿಗೆ ತಂದಿದ್ದೇನೆ, ಒಂದೇ ಒಂದು ಮತವನ್ನೂ ತೆಗೆದು ಹಾಕಲು ಬಿಡಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌  ತಿಳಿಸಿದರು.

ದೆಹಲಿಯಲ್ಲಿ ಇಂಡಿ ಒಕ್ಕೂಟದ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ, ನಾವು ಈ ರೀತಿ ಅನುಮತಿ ಕೊಟ್ಟಿಲ್ಲ ಅಂತ. ಮತದಾನದ ಹಕ್ಕನ್ನು ಉಳಿಸಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಮತದಾರರಿಗೆ ತಮ್ಮ ಹಕ್ಕನ್ನು ಕೊಡಬೇಕು. ಬ್ಯಾಲೆಟ್ ಪೇಪರ್ ಉಳಿಸಬೇಕು. ಸಂವಿಧಾನದ ಹಕ್ಕನ್ನು ಕಾಪಾಡಬೇಕು ಅಂತಾ ಹೋರಾಟ ಮಾಡ್ತಾ ಇದ್ದೇವೆ. ಪ್ರತಿ ರಾಜ್ಯದಲ್ಲೂ ಒಂದೊಂದು ಕೋಟಿ ಮತದಾರರನ್ನ ತೆಗೆಯುತ್ತಿದ್ದಾರೆ. ಬಡವರು, ಅಲ್ಪಸಂಖ್ಯಾತರ ಮತಗಳನ್ನ ತೆಗೆಯುತ್ತಿದ್ದಾರೆ. ಈ ರೀತಿ ಮಾಡಿ ಚುನಾವಣೆ ಗೆಲ್ಲೋದು ಸರಿಯಲ್ಲ. ನಮ್ಮ ರಾಜ್ಯದಲ್ಲಿ ನಾನು ಅಕ್ರಮ ಬಯಲಿಗೆ ತಂದಿದ್ದೇನೆ, ಇದಕ್ಕೆ ಹೈಕಮಾಂಡ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ ಸಿಎಂ ಆಗಿ ಹೋರಾಟ ಮಾಡ್ತಾ ಇದ್ದೀನಿ, ಒಂದೇ ಒಂದು ಮತವನ್ನ ಕಿತ್ತಾಕೋಕೆ ಬಿಲ್ಲ ಎಂದು ಹೇಳಿದರು.

ಪ್ರತಿ ರಾಜ್ಯದಲ್ಲೂ ಬಡವರು, ದಲಿತರು, ಅಲ್ಪ ಸಂಖ್ಯಾತರ ಮತ ಅಳಿಸಿ ಚುನಾವಣೆ ಗೆಲ್ಲೋದು ಸರಿಯಲ್ಲ. ಇದಕ್ಕಾಗಿ ನಾವು ಇವತ್ತು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟ ಹೋರಾಟ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಏನಾಗಿದೆ ಅಂತ ನಾನೇ ಬೆಳಕಿಗೆ ತಂದಿದ್ದೇನೆ. ನಾವು ಹೋರಾಟ ಮಾಡಿದ್ದು ಒಂದು ಪಕ್ಷವಾಗಿ ಅಲ್ಲ. ಓರ್ವ ಮುಖ್ಯಮಂತ್ರಿ ಆಗಿ, ಮತದಾರರ ಹಕ್ಕು ರಕ್ಷಣೆ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ನಾವು ಹೋರಾಟ ಮುಂದುವರಿಸ್ತೇವೆ. ಕೇಂದ್ರದಲ್ಲಿ ಇರುವ ಭ್ರಷ್ಟ ಸರ್ಕಾರ, ವೋಟ್ ಚೋರಿ ಮಾಡಿ ಬಂದಿರೋ ಸರ್ಕಾರ ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಆಯೋಗದವರೇನು ದೇವ್ರಾ? ಯಾಕೆ ಖರ್ಗೆ ಹಾಗೂ ರಾಹುಲ್ ಗಾಂಧಿ ಅವ್ರಿಗೆ ಕೊಡಲ್ಲ. ನಮ್ಮ ರಾಜ್ಯದಲ್ಲಿ ದಳದವ್ರು, ಬಿಜೆಪಿಯವ್ರು ಹೋಗಿ ಭೇಟಿ ಮಾಡಿದ್ರು, ಏನಾದ್ರೂ ತಪ್ಪಾ? ಎಲೆಕ್ಷನ್ ಕಮಿಷನ್ ನಲ್ಲಿ ಇರೋರು ಎಲ್ಲರನ್ನ ಸಮಾನವಾಗಿ ನೋಡಬೇಕು. ಜ್ಞಾನೇಶ್ ಕುಮಾರ್ ನಾನೇನು ತಪ್ಪು ಮಾಡಿಲ್ಲ ಅಂತ ಹೇಳಬೇಕಲ್ವಾ? ಯಾಕೆ ಹೇಳ್ತಿಲ್ಲ ಎಂದು ಪ್ರಶ್ನೆ ಮಾಡಿದರು.


Spread the love

About Laxminews 24x7

Check Also

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the loveಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ