ಬೆಂಗಳೂರು: ಈ ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದರು. ಆದರೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ಅಬ್ಬರಿಸಿದ್ದಾರೆ. ಆರ್‌ಸಿಬಿ ಬೌಲರ್‌ಗಳ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಲಕ್ನೋ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನೂ 29 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 149 ರನ್ ಹೊಡೆದು ವಿಜಯ ಸಾಧಿಸಿತು. ಈ ಜಯದೊಂದಿಗೆ 1.503 ನೆಟ್ ರನ್‌ರೇಟ್‌ನೊಂದಿಗೆ ಆರ್‌ಸಿಬಿ 3ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿದರೆ ಲಕ್ನೋ 7ನೇ ಸ್ಥಾನದಲ್ಲೇ ಮುಂದುವರಿದಿದೆ.
ಆರಂಭದಲ್ಲೇ ಫಿಲ್ ಸಾಲ್ಟ್ 7 ರನ್, ಪಡಿಕಲ್ 10 ರನ್ ಗಳಿಸಿ ಔಟಾದರೂ ಇಂಪ್ಯಾಕ್ಟ್ ಪ್ಲೇಯರ್ ಅಗಿ ಕಣಕ್ಕೆ ಇಳಿದ ಕೊಹ್ಲಿ ಇನ್ನಿಂಗ್ಸ್ ಕಟ್ಟತೊಡಗಿದರು. ಆದರೆ ಅರ್ಧಶತಕಕ್ಕೆ 1 ರನ್ ಬೇಕಿದ್ದಾಗ 49 ರನ್(34 ಎಸೆತ, 6 ಬೌಂಡರಿ, 1 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಆರ್‌ಸಿಬಿ ಬೌಲರ್‌ಗಳು ಅಕ್ಷರಶ: ಲಕ್ನೋ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದ್ದರು. ಮಿಚೆಲ್ ಮಾರ್ಶ್ 40 ರನ್(32 ಎಸೆತ,3 ಬೌಂಡರಿ, 2 ಸಿಕ್ಸ್) , ಅಯುಶ್ ಬದೋನಿ 38 ರನ್(24 ಎಸೆತ, 4 ಬೌಂಡರಿ, 1 ಸಿಕ್ಸ್), ಮುಕುಲ್ ಚೌಧರಿ 39 ರನ್(28 ಎಸೆತ,3 ಬೌಂಡರಿ, 2 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ರಾಸಿಖ್ ದಾರ್ 24 ರನ್ ನೀಡಿ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ 27 ರನ್ ನೀಡಿ 3 ವಿಕೆಟ್ ಪಡೆದರು. ಕೃನಾಲ್ ಪಾಂಡ್ಯ 2 ವಿಕೆಟ್, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು. 71 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಲಕ್ನೋ ನಂತರದ 75 ರನ್‌ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದಕೊಂಡಿದ್ದು ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.
Laxmi News 24×7