Breaking News

ಕೊನೆ ಓವರ್‌ನಲ್ಲಿ ಭುವನೇಶ್ವರ್‌ ಸಿಕ್ಸರ್‌; ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್‌ ರೇಸ್‌ನಿಂದ ಮುಂಬೈ ಔಟ್‌

Spread the love

ರಾಯ್ಪುರ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ 2 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಒಂದು ಸಿಕ್ಸರ್‌ ಸಿಡಿಸುವ ಮೂಲಕ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ರಾಯ್ಪುರದಲ್ಲಿ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆ ಮೂರು ಬಾಲ್‌ಗೆ 9 ರನ್‌ ಬೇಕಿತ್ತು. ಶೆಫರ್ಡ್‌ ಔಟಾದ ಬಳಿಕ ಕ್ರೀಸ್‌ಗೆ ಬಂದ ಭುವನೇಶ್ವರ್‌ ಕುಮಾರ್‌ ಸಿಕ್ಸರ್‌ ಸಿಡಿಸಿದರು. ಎರಡು ಬಾಲ್‌ಗೆ ಮೂರು ರನ್‌ ಬೇಕಿತ್ತು. ಈ ವೇಳೆ ಒಂದು ಸಿಂಗಲ್‌ ತೆಗೆದುಕೊಂಡರು. ಕೊನೆ ಬಾಲ್‌ಗೆ ರಸಿಕ್ ಸಲಾಂ ಎರಡು ರನ್‌ ಪಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ತಂಡದ ಮೊತ್ತ ಕೇವಲ 28 ರನ್‌ ಇರುವಾಗಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಮನ್‌ ಧೀರ್‌ ಮತ್ತು ತಿಲಕ್‌ ವರ್ಮಾ ಜವಾಬ್ದಾರಿಯುತ ಆಟವಾಡಿ ತಂಡದ ರನ್ 150ರ ಗಡಿ ದಾಟಲು‌ ನೆರವಾದರು. ಅಂತಿಮವಾಗಿ ಮುಂಬೈ 7 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿತು.

ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಕಮಾಲ್‌ ಮಾಡಿದರು. ನಾಲ್ಕು ವಿಕೆಟ್‌ ಕಿತ್ತು ಭುವಿ ಮಿಂಚಿದರು. ಜೋಶ್‌ ಹ್ಯಾಜಲ್‌ವುಡ್‌, ರಾಶಿಕ್‌ ಸಲಾಂ, ರೊಮಾರಿಯೋ ಶೆಫರ್ಡ್‌ ತಲಾ 1 ವಿಕೆಟ್‌ ಪಡೆದರು.

ನಂತರ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಆರಂಭದಲ್ಲಿ ಫ್ಯಾನ್ಸ್‌ಗೆ ಆಘಾತ ನೀಡಿತು. ವಿರಾಟ್‌ ಕೊಹ್ಲಿ ಇಂದು ಕೂಡ ಡಕೌಟ್‌ ಆಗಿ ಪೆವಿಲಿಯನ್‌ ಸೇರಿದ್ದು ನಿರಾಸೆ ಮೂಡಿಸಿತು. ದೇವದತ್‌ ಪಡಿಕ್ಕಲ್‌ 12, ಕ್ಯಾಪ್ಟನ್‌ ರಜತ್‌ ಪಾಟೀದಾರ್‌ 8 ರನ್‌ಗೆ ಔಟಾಗಿ ಶಾಕ್‌ ಕೊಟ್ಟರು. ಜಾಕೋಬ್ ಬೆಥೆಲ್ 27 ರನ್‌ ಗಳಿಸಿ ಔಟಾದರು. ಈ ನಡುವೆ ಕೃಣಾಲ್‌ ಪಾಂಡ್ಯ ಜವಾಬ್ದಾರಿಯುತ ಆಟವಾಡಿದರು. 46 ಬಾಲ್‌ಗೆ 73 ರನ್‌ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಜಿತೇಶ್‌ ಶರ್ಮಾ 18 ರನ್‌ ಗಳಿಸಿದರು. ಟಿಮ್‌ ಡೇವಿಡ್‌ ಶೂನ್ಯ ಸುತ್ತಿ ಹೊರ ನಡೆದಿದ್ದು, ಫ್ಯಾನ್ಸ್‌ಗೆ ಆಘಾತ ನೀಡಿತು. ಕೊನೆ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ ರೋಚಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.


Spread the love

About Laxminews 24x7

Check Also

ಪಾಕ್‌ ವಿರುದ್ಧ ದಾಖಲೆಯ ಜಯ, ಇತಿಹಾಸ ನಿರ್ಮಾಣ – ಸೂಪರ್‌ 8ಕ್ಕೆ ಭಾರತ ಎಂಟ್ರಿ

Spread the loveಕೊಲಂಬೋ: ಪಾಕಿಸ್ತಾನದ ವಿರುದ್ಧ ಟಿ20 ಯುದ್ಧದಲ್ಲಿ ನಿರೀಕ್ಷೆಯಂತೆ 61 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಇತಿಹಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ