Breaking News

ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ: ಶಾಸಕ ಯತ್ನಾಳ್ ಕಿಡಿ

Spread the love

ವಿಜಯಪುರ: ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ, ಎರಡೂ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿ ಮಾಡ್ಕೊಂಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ದಾವಣಗೆರೆ ಪಂಚಮಸಾಲಿ ಪೀಠದ ಬಗ್ಗೆ ಮಾತನಾಡಿದ ಅವರು, ಎರಡು ಪೀಠದ ಟ್ರಸ್ಟ್‌ಗಳು ನಂಬಿಕೆ ಕಳೆದುಕೊಂಡಿವೆ. ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ. ಎರಡು ಕಡೆ ಇದೇ ನಡೆಯುತ್ತಿದೆ. ಇದನ್ನ ಖಾಸಗಿ ಆಸ್ತಿ ಮಾಡಿಕೊಂಡವರಿದ್ದಾರೆ. ಇವರಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಪ್ರಾಮಾಣಿಕರು, ಸಮಾಜಕ್ಕಾಗಿ ಕೆಲಸ ಮಾಡುವವರು ಯಾರು ಟ್ರಸ್ಟ್‌ನಲ್ಲಿ ಇಲ್ಲ. ಉಚ್ಚಾಟನೆ ಮಾಡಿದವರು, ಮಾಡಿಸಿಕೊಂಡವರು ಎಲ್ಲರೂ ಒಂದೇ ರೀತಿಯಾಗಿದ್ದಾರೆ. ಸಾಮಾಜಿಕ ಕಳಕಳಿಯಿಲ್ಲ, ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಈ ಟ್ರಸ್ಟ್‌ಗಳು ಇದ್ದಂತೆ ಆಗಿದೆ ಎಂದರು.
ಇನ್ನು ಹಿಂದೆ ಯಡಿಯೂರಪ್ಪ ಸರ್ಕಾರವಿದ್ದಾಗ 11 ಕೋಟಿ ರೂ. ಹಣ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ಪಿಡಿಓ ಸಹಿ ಕೂಡ ನಕಲಿ ಮಾಡಿದ್ದಾರೆ. ಹೀಗಿದ್ದಾಗ ಈ ಟ್ರಸ್ಟ್‌ನ್ನು ಹೇಗೆ ನಂಬುತ್ತೀರಿ, ಇವರು ಹೇಗೆ ಸಮಾಜಕ್ಕೆ ಒಳ್ಳೆಯದು ಮಾಡ್ತಾರೆ. ಈ ಕೂಡಲಸಂಗಮ ಟ್ರಸ್ಟ್ ಕೂಡ ಅದು ಒಂದು ಖಾಸಗಿ ಆಸ್ತಿ ಆಗಿದೆ. ಈ ಎರಡು ಟ್ರಸ್ಟ್‌ಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಧಾನಸಭೆಯಲ್ಲಿ ಇದನ್ನ ಪ್ರಸ್ತಾಪ ಮಾಡಬೇಕು ಅಂದುಕೊಂಡೆ. ಆದರೆ ನಮ್ಮದೇ ಸರ್ಕಾರ ಇದ್ದರೂ ಸ್ಪೀಕರ್‌ಗೆ ಹೇಳಿ ಇದು ಚರ್ಚೆಗೆ ಬಾರದಂತೆ ತಡೆದರು. ಈ ಟ್ರಸ್ಟ್ನವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಮ್ಮ ಸಮಾಜದವರ 1 ಕೋಟಿ ಮತಗಳಿವೆ ಎಂದು ಬ್ಲ್ಯಾಕ್ ಮೇಲ್ ಮಾಡಿದರು ಎಂದು ತಿಳಿಸಿದರು.
ಜಯಮೃತ್ಯುಂಜಯ ಶ್ರೀಗಳ ವಿರುದ್ದ ದಾಖಲಾಗಿದ್ದ ದೂರಿನ ಬಗ್ಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಯ ಎರಡು ಟ್ರಸ್ಟ್‌ನಲ್ಲಿ ಇದೆ ನಡೆದಿದೆ. ನಾನು ಸಂತ್ರಸ್ತೆಯ ವಿಡಿಯೋ ನೋಡಿದ್ದೇನೆ. ದೂರೇ ಕೊಟ್ಟಿಲ್ಲ ಅಂದ ಮೇಲೆ ತನಿಖೆ ಆಗಲಿ. ಅದು ಯಾರ ಸಹಿ, ಡುಪ್ಲಿಕೇಟ್ ಇದೆಯಾ? ಇಲ್ಲವಾ? ಎನ್ನೋದು ತನಿಖೆಯಿಂದ ಹೊರಬರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಾನು ಯಾರ ಪರವಾಗಿಯೂ ಮಾತನಾಡಲ್ಲ. ಶ್ರೀಗಳು ಬಂದಿರುವ ಆಪಾದನೆಯಿಂದ ಮುಕ್ತರಾಗಬೇಕು. ಅವರು ಏನು ಮಾಡಿಲ್ಲ ಅನ್ನೋದನ್ನ ಸಮಾಜಕ್ಕೆ ಹೇಳಬೇಕು ಎಂದರು.
ಈಗಾಗಲೇ ಎಫ್‌ಐಆರ್ ಆಗಿದೆ, ಪೊಲೀಸರು ಈಗ ತನಿಖೆ ನಡೆಸಿದ್ದಾರೆ, ವರದಿ ಏನು ಬರುತ್ತೆ ನೋಡೋಣ. ಆದರೆ ಸ್ವಾಮೀಜಿಗಳಿಗೆ ಹೇಳುವುದೊಂದೇ ಸಮಾಜದಲ್ಲಿ ನಿಮ್ಮ ಬಗ್ಗೆ ಸಂಶೆಯ ಮೂಡಿದೆಯಲ್ಲ ಅದರಿಂದ ನೀವು ಹೊರಬರಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು


Spread the love

About Laxminews 24x7

Check Also

ಬೇಸಿಗೆ ಹಿನ್ನೆಲೆ, ಏರುತ್ತಿದೆ ತಾಪಮಾನ; ಈಜುಕೊಳದತ್ತ ಮುಖ ಮಾಡಿದ ವಿಜಯಪುರದ ಜನರು…

Spread the loveಈ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಿಲಿನ ತಾಪ ತಣಿಸಿಕೊಳ್ಳಲು ಜನರು ಈಜುಕೊಳದತ್ತ ಮುಖ ಮಾಡಿದ್ದಾರೆ. ಸರ್ಕಾರದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ