Breaking News

ಬೈಲಹೊಂಗಲ: ಶಬ್ದ ಮಾಲಿನ್ಯಕ್ಕೆ ಕಡಿವಾಣ — ಟ್ರ್ಯಾಕ್ಟರ್‌ಗಳ ಸೌಂಡ್ ಸಿಸ್ಟಮ್ ವಶ

Spread the love

ಬೈಲಹೊಂಗಲ ಪಟ್ಟಣದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಟ್ರ್ಯಾಕ್ಟರ್‌ಗಳಲ್ಲಿ ಅನಧಿಕೃತವಾಗಿ ಸೌಂಡ್ ಸಿಸ್ಟಮ್ ಅಳವಡಿಸಿಕೊಂಡು ಭಾರೀ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ರಸ್ತೆ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ದವರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದ್ದಾರೆ.

ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಮಾಡುತ್ತಿರುವ ಟ್ರ್ಯಾಕ್ಟರ್‌ಗಳನ್ನು ಪತ್ತೆಹಚ್ಚಿ, ಅವುಗಳಲ್ಲಿ ಅಳವಡಿಸಿದ್ದ ಸೌಂಡ್ ಸಿಸ್ಟಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಶಬ್ದ ಮಾಲಿನ್ಯದಿಂದ ಜನರಿಗೆ ಆಗುವ ತೊಂದರೆಯನ್ನು ಮನಗಂಡು ಇಂತಹ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಹಾಗೂ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಿಂದ ದೂರವಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.


Spread the love

About Laxminews 24x7

Check Also

ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿರುವ ರಾಕ್ ಗಾರ್ಡನ್ ಲೋಕಾರ್ಪಣೆ ಮಲತಾಯಿ ಧೋರಣೆ

Spread the loveಬೈಲಹೊಂಗಲ: ವೀರವನಿತೆ ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿರುವ ರಾಕ್ ಗಾರ್ಡನ್ ಯಾರಿಗೂ ಹೇಳದೆ ಉದ್ಘಾಟನೆ ಮಾಡಿ, ಶಾಸಕರು ಮಲತಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ