Breaking News

ಬೆಸ್ಕಾಂ |ಮೃತರ ಕುಟುಂಬದವರಿಗೆ ತಲಾ ₹1 ಕೋಟಿ ಪರಿಹಾರ: ಚೆಕ್‌ ವಿತರಿಸಿದ ಜಾರ್ಜ್‌

Spread the love

ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟಿರುವ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬವರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ತಲಾ ₹1 ಕೋಟಿ ಪರಿಹಾರದ ಚೆಕ್‌ ಅನ್ನು ಬುಧವಾರ ವಿತರಿಸಿದರು.

ವಿದ್ಯುತ್‌ ಆಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪ ವಿಭಾಗದ ಸಹಾಯಕ ಪವರ್‌ಮ್ಯಾನ್‌ ಉದಯ ಕುಮಾರ್‌ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪ ವಿಭಾಗದ ಪವರ್‌ಮ್ಯಾನ್‌ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪ ವಿಭಾಗದ ಪವರ್‌ ಮ್ಯಾನ್‌ ಅಮರನಾಥ್‌ ಅವರ ಪತ್ನಿ ಮುನಿರತ್ನಮ್ಮ ಅವರು ಸಚಿವರಿಂದ ಪರಿಹಾರದ ಚೆಕ್‌ ಸ್ವೀಕರಿಸಿದರು.

ಇಲಾಖೆಯ ಸಿಬ್ಬಂದಿ, ಪವರ್‌ಮ್ಯಾನ್‌ ಸುರಕ್ಷತೆಗೆ ರಕ್ಷಣಾ ಸಾಧನ ಒದಗಿಸಲಾಗುತ್ತಿದೆ. ಆದರೂ, ಅನಿರೀಕ್ಷಿತ ಘಟನೆಗಳಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ನೆರವು ನೀಡಲಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸೂಪರ್ ವೇತನ ಖಾತೆ ವಿಮಾ ಪ್ರಯೋಜನದಡಿ ಚೆಕ್ ಹಸ್ತಾಂತರಿಸಲಾಗಿದೆ’ ಎಂದು ಜಾರ್ಜ್‌ ತಿಳಿಸಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್‌ ಪ್ರಸಾತ್‌ ಮನೋಹರ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ವೇದವಿದ್ಯಾ ವಿಹಾರ ಗುರುಕುಲಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

Spread the loveರಾಮನಗರ: ಇಲ್ಲಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವೇದವಿದ್ಯಾ ವಿಹಾರ ಗುರುಕುಲಕ್ಕೆ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಶಂಕುಸ್ಥಾಪನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ