Breaking News

Yearly Archives: 2026

ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎನ್ನಲಿ, ಇಲ್ಲ ಬದಲಾವಣೆ ಮಾಡ್ತೀವಿ ಅಂತಾದ್ರೂ ಹೇಳಲಿ: ರಾಜಣ್ಣ

ಮೈಸೂರು: ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಕೊಡಲಿ, ಇಲ್ಲ ಬದಲಾವಣೆ ಮಾಡ್ತೀವಿ ಅಂತಾದ್ರೂ ಹೇಳಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ  ಹೇಳಿದ್ದಾರೆ. ಮೈಸೂರಿನಲ್ಲಿ  ಮಾತನಾಡಿದ ಅವರು, ನಾನು ಸಿಎಂ ಬದಲಾಗುತ್ತಾರೆ ಅಂತಾನೂ ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರರು ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಆದರೂ ಕೊಡಲಿ. ಇಲ್ಲ ಬದಲಾವಣೆ ಮಾಡುತ್ತೇವೆ ಎಂಬುದಾದರೂ ಹೇಳಲಿ. ಎರಡು …

Read More »

ಪ್ರವಾಹ ಎದುರಿಸಿದ್ದ ಕೃಷ್ಣೆಯ ಒಡಲು ಈಗ ಖಾಲಿ

ಯಾದಗಿರಿ: ಪ್ರವಾಹ ಎದುರಿಸಿದ್ದ ಕೃಷ್ಣಾ ನದಿಯ ಒಡಲು ಈಗ ರಣ ಬಿಸಿಲಿನಿಂದಾಗಿ ಖಾಲಿಯಾಗಿದೆ. ಯಾದಗಿರಿ ಜಿಲ್ಲೆಯ ರೈತರ ಜೀವನಾಡಿ ಕೃಷ್ಣಾ ನದಿ. ಮಳೆಗಾಲದಲ್ಲಿ ಪ್ರವಾಹ ಎದುರಿಸಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕೃಷ್ಣಾ ನದಿ ಒಡಲು ಬೇಸಿಗೆಯ ರಣ ಬಿಸಿಲಿಯಿಂದ ಖಾಲಿಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ  ಗ್ರಾಮದ ಮೌನೇಶ್ವರ ದೇಗುಲ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿದೆ. ಕೃಷ್ಣಾ ನದಿ ತೀರದಲ್ಲಿರುವ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸಿ, ನದಿಯಲ್ಲಿ ಪುಣ್ಯಸ್ನಾನ …

Read More »

ಎಲ್ಲಾ ಬಂಡವಾಳ ಗುಜರಾತ್‌ಗೆ ಹೋಗ್ತಿದೆ, ಐಪಿಎಲ್‍ ಸಹ ಹೈಜಾಕ್ ಮಾಡಿದ್ದಾರೆ: ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

ಬೆಂಗಳೂರು: ದೇಶದ ಎಲ್ಲಾ ಬಂಡವಾಳ ಗುಜರಾತ್‌ ರಾಜ್ಯಕ್ಕೆ ಹೋಗುತ್ತಿದೆ. ಐಪಿಎಲ್‍ನ್ನೂ ಸಹ ಹೈಜಾಕ್ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ  ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೆಂಗಳೂರಿನಲ್ಲಿ (ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಐಪಿಎಲ್ ಫೈನಲ್ ಪಂದ್ಯ ಶಿಫ್ಟ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಐಪಿಎಲ್ ಮ್ಯಾಚ್‍ಗಳು ಗುಜರಾತ್‌ಗೆ ಹೋಗ್ತಾ ಇದೆ. ಬಂಡವಾಳ ಗುಜರಾತ್‌ಗೆ ಹೋಗ್ತಾ ಇದೆ. ಬಿಸಿಸಿಐ, ಐಸಿಸಿನಲ್ಲಿ ಜೈ ಶಾ ಇದ್ದಾರೆ ಅವರಿಗೆ ಮನಸ್ಸಿಗೆ …

Read More »

ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಹಣ ದೋಚಿದ ಸೈಬರ್‌ ವಂಚಕರು!

ಚಿಕ್ಕಮಗಳೂರು: ಚಿನ್ನ ಅಡವಿಟ್ಟು ಪಡೆದ ಸಾಲ ಬ್ಯಾಂಕ್‌ ಖಾತೆಗೆ ಜಮೆಯಾದ ಒಂದೇ ಕ್ಷಣದಲ್ಲಿ ಸೈಬರ್‌ ವಂಚಕರು ಹಣ ಎಗರಿಸಿದ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ 99,584 ರೂ. ಹಣವನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಓಟಿಪಿ ಬಂದಿಲ್ಲ, ಎಪಿಕೆ ಲಿಂಕ್ ಕೂಡ ಬಂದಿಲ್ಲ ಹಣ ಮಾತ್ರ ಕಳ್ಳರ ಪಾಲಾಗಿದೆ. ಅಮೆಜಾನ್ …

Read More »

ಯೋಗೇಶ್ ಗೌಡ ಕೊಲೆ ಕೇಸ್ – ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿಯವರು  ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ಮುಂದೂಡಿದೆ. ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಪೊಲೀಸ್ ಅಧಿಕಾರಿ ಎ19 ಚೆನ್ನಕೇಶವ್ ಟೆಂಗರಿಕರ್ ಹಾಗೂ ಚಂದ್ರಶೇಖರ್ ಇಂಡಿ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಮತ್ತು ನ್ಯಾ.ರಾಜೇಶ್ …

Read More »

ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕ ಆಸಿಫ್ (ರಾಜು) ಸೇಠ್

ಶಾಸಕ ಆಸಿಫ್ (ರಾಜು) ಸೇಠ್, ಅಮನ್ ನಗರ 4ನೇ, 5ನೇ, 6ನೇ ಮತ್ತು 7ನೇ ಕ್ರಾಸ್‌ಗೆ ಅಂಕಿತ್ ರಾಜೇಂದ್ರ ಸೇರಿದಂತೆ ನಿಗಮದ ಅಧಿಕಾರಿಗಳು, ಹೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಭೇಟಿ ನೀಡಿ, ಈ ಪ್ರದೇಶದಲ್ಲಿ ನಡೆಯುತ್ತಿರುವ ಚರಂಡಿ, ಬೀದಿ ದೀಪ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಶಾಸಕರು ಸ್ಥಳೀಯ ನಿವಾಸಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಒಳಚರಂಡಿ, ರಸ್ತೆ ಪರಿಸ್ಥಿತಿಗಳು ಮತ್ತು …

Read More »

ಚುನಾವಣಾ ರಾಜಕೀಯಕ್ಕೆ ಹೆಚ್ ವಿಶ್ವನಾಥ್ ಗುಡ್ ಬೈ

ಮೈಸೂರು: ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಎಂಎಲ್‌ಸಿ ಹೆಚ್ ವಿಶ್ವನಾಥ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಆದರೆ ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು 50 ಕೋಟಿ ರೂ. ಹಣ ಬೇಕು. …

Read More »

ಡಿಜಿಪಿ ರಾಮಚಂದ್ರರಾವ್ ಅಮಾನತು ವಾಪಸ್ ಸಿಎಂ ನಿರ್ಧಾರ: ಪರಮೇಶ್ವರ್

ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ ಅಮಾನತು ವಾಪಸ್ ನಿರ್ಧಾರ ಸಿಎಂ ಸಿದ್ದರಾಮಯ್ಯನವರದ್ದು  ಎಂದು ಗೃಹ ಸಚಿವ ಪರಮೇಶ್ವರ್  ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮಚಂದ್ರರಾವ್ ಅವರ ಅಮಾನತನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ವಾಪಸ್ ಪಡೆದಿದೆ. ರಾಮಚಂದ್ರರಾವ್ ಈ ತಿಂಗಳ ಕೊನೆಗೆ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರ ಅನುಮತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಮಾನತು ವಾಪಸ್ ಪಡೆದಿದ್ದು ಸರಿ ತಪ್ಪು ಎಂದು ನಾನು …

Read More »

ಬಿಜೆಪಿಯವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ: ಪರಮೇಶ್ವರ್ ಕಿಡಿ

ಬೆಂಗಳೂರು: ತಮಿಳುನಾಡಿನಲ್ಲಿ ವಿಜಯ್‌  ಅವರ ತಮಿಳಿ ವೆಟ್ರಿ ಕಳಗಂಕಾಂಗ್ರೆಸ್ ಬೆಂಬಲ ನೀಡಿದ್ದನ್ನು ಗೃಹ ಸಚಿವ ಪರಮೇಶ್ವರ್ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರುಎಷ್ಟು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಅವರು ಭಾರತದಲ್ಲಿ ಎಲ್ಲೆಲ್ಲಿ ಚೂರಿ ಹಾಕಿದ್ದಾರೆ ಅದನ್ನು ಮರೆತು ಬಿಡುತ್ತಾರೆ. ಬಿಜೆಪಿ ಅವರಿಗೆ ಜಾಣ ಕುರುಡು ಮರೆತು ಹೋಗಿ ಬಿಡುತ್ತಾರೆ ಎಂದು ಕಿಡಿಕಾರಿದರು. ರಾಜಕೀಯದಲ್ಲಿ ಎಲ್ಲವೂ ಸಾಧ್ಯವಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಬೇಕಿದೆ. ಈ ಕಾರಣಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ. …

Read More »

ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ, 2019ರ ನನ್ನ ಸೋಲು ಪಕ್ವತೆ ಕಲಿಸಿದೆ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ನನ್ನ ರಾಜಕೀಯ ಪ್ರವೇಶ ಮಂಡ್ಯ  ಜಿಲ್ಲೆಯಿಂದಲೇ ಆಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಜನ ತೋರಿಸುವ ಪ್ರೀತಿ ಮರೆಯಲಾಗದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ  ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಜನರೊಂದಿಗೆ ಜನತಾದಳ ಮತ್ತು ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ …

Read More »