Breaking News

ಮೇಡಂ ಸೆಕ್ಸ್ ಅವೈಲೆಬಲ್ ಇದ್ಯಾ? – ಬೈಕ್ ಟ್ಯಾಕ್ಸಿ ಸವಾರನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ

Spread the love

ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ  ಸವಾರನೋರ್ವನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸ್ವತಃ ಯುವತಿ ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಹಂಚಿಕೊಂಡು, ಆರೋಪಿಸಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಿಂದ ಯುವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಸವಾರ ಲೋಕೇಷನ್‌ಗೆ ಬಂದು ಕಾಲ್ ಮಾಡದೇ, ಮೆಸೇಜ್ ಕೂಡ ಮಾಡದೇ ವಾಪಸ್ಸಾಗಿದ್ದಾನೆ.

ವಾಪಸ್ಸಾಗಿದ್ದ ವಿಷಯ ತಿಳಿದು ಯುವತಿ ಕಾಲ್ ಮಾಡಿದಾಗ, ಬೈಕ್ ಸವಾರ ಸೆಕ್ಸ್ ಅವೈಲೆಬಲ್ ಇದ್ಯಾ ಎಂದು ಕೇಳಿದ್ದಾನೆ. ಈ ಬಗ್ಗೆ ಯುವತಿ ಅಸಾಮಾಧಾನ ಹೊರಹಾಕಿದ್ದಾರೆ.

ಇಂತಹವರಿಂದ ಬೇರೆ ಡ್ರೈವರ್‌ಗಳಿಗೆ ಕೆಟ್ಟ ಹೆಸರು. ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಟೂ ವೀಲ್ಹರ್ ಬುಕ್ ಮಾಡಬೇಡಿ, ಹೆಣ್ಮಕ್ಕಳ ಸೇಫ್ಟಿ ವಿಚಾರವಾಗಿ ಹೇಳ್ತಿದ್ದೀನಿ. ಯಾರೇ ಆದ್ರೂ ನೋಡಿಕೊಂಡು ಬುಕ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಬಸ್ಸಿನ ಮುಂಭಾಗದ ಚಕ್ರದ ನಟ್ ಕಿತ್ತಿ ಹೊಲಕ್ಕೆ ನುಗ್ಗಿದ ಬಸ್ – ತಪ್ಪಿದ ದುರಂತ

Spread the love ಕೊಪ್ಪಳ: ಕನಕಗಿರಿ  ಮಾರ್ಗವಾಗಿ ಕೊಪ್ಪಳಕ್ಕೆ  ತೆರಳುತ್ತಿದ್ದ ಬಸ್ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ