ಚಿಕ್ಕೋಡಿ:ಬಡ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನಾಥ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶದಿಂದ ತಾಲೂಕಿನ ಶಮನೇವಾಡಿಯ ಗುಣಧರ ತೀರ್ಥದಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮುನಿ ಮಹಾರಾಜರು ತಿಳಿಸಿದರು. ತಾಲೂಕಿನ ಶಮನೇವಾಡಿ ಗುಣಧರ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಮಹತ್ವದ್ದಾಗಿದೆ. ಎಸ್‌ಡಿಎಂ ಜೈನಮಠ ಟ್ರಸ್ಟ್ ವತಿಯಿಂದ ಬಡ ಹಾಗೂ ಅನಾಥ …
Read More »Daily Archives: ಮೇ 23, 2026
ಕಳೆದು ಹೋದ 24 ಮೋಬೈಲ್ ಪತ್ತೆ ಮಾಡಿದ ಅಥಣಿ ಪೊಲೀಸರು
ಬೆಳಗಾವಿ: ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಇತ್ತಿಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ ಮೊಬೈಲ್ ಪೋನಗಳು ಕಳೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲು ಮತ್ತು ಕಳೆದು ಹೋದ ಮೊಬೈಲ್‌ಗಳನ್ನು ಪತ್ತೆ ಮಾಡಲು ಆತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸದರಿ ಕಳೆದು ಹೋದ ಮೊಬೈಲಗಳನ್ನು …
Read More »ಮಗುವಿನ ವಿದ್ಯಾಭ್ಯಾಸಕ್ಕೆ ಸ್ಪಂದಿಸಿದ ಅಕ್ಕ ಪಡೆ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಅಕ್ಕಾ ಪಡೆ ಅನೇಕ ಅಪರಾಧಗಳನ್ನು ತಡೆಯಲು ಯಶಸ್ವಿಯಾಗಿದ್ದು, ಇದೀಗ ಗಂಡ ಹೆಂಡತಿ ಜಗಳದಲ್ಲಿ ತೊಂದರೆ ಅನುಭವಿಸುತ್ತಿದ್ದ ಕುಟುಂಬಕ್ಕೆ ಆಸರೆ ಆಗಿದೆ. ಬೆಳಗಾವಿ ಜಿಲ್ಲೆಯ ಕುರಿಹಾಳ ಗ್ರಾಮದ ದೀಪಾಲಿ ವಿಲಾಸ್ ಕುದನೂರುಕರ್ ರವರು ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಗಂಡ ಹೆಂಡತಿಯೊಂದಿಗೆ ಜಗಳ ಮಾಡಿದ ಕಾರಣಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದಾನೆಂದು ದೂರು ನೀಡಿದ ಕಾರಣ, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ (ಪಿಐ) …
Read More »ನಿಲಣ್ಣವರ್ ನಿಂದ ಐಶಾರಾಮಿ ಕಾರ್ ಗಿಪ್ಟ್ ಪಡೆದ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್
ಬೆಳಗಾವಿ: ಹೆಚ್ಚಿನ ಬಡ್ಡಿ ನೀಡುವದಾಗಿ ಜನರಿಗೆ ಸಾವಿರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಐಡಿ ವಶದಲ್ಲಿ ಇರುವ ಶಿವಂ ಅಸೋಶಿಯೇಟ್ ಮಾಲೀಕ ಶಿವಾನಂದ ನಿಲಣ್ಣವರ್ ಪ್ರಕರಣದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ ಅವರಿಗೆ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಕರವೇ ಜಿಲ್ಲಾಧ್ಯಕ್ಷನಿಗೆ ಶಿವಾನಂದ ನಿಲಣ್ಣವರ ಐಶಾರಾಮಿ ಕಾರು ಗಿಪ್ಟ್ ಕೊಟ್ಟಿರುವ ಕಾರಣ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕರವೇ (ಪ್ರವೀಣ್ ಶೆಟ್ಟಿ ಬಣ) ಬೆಳಗಾವಿ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ಶಿವಾನಂದ …
Read More »ಪ್ರಾದೇಶಿಕ ಆಯುಕ್ತರಿಂದ “From Land to Layout” ಪುಸ್ತಕ ಬಿಡುಗಡೆ
ಬೆಳಗಾವಿ: ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಇಂದು ಬೆಳಗಾವಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಡಾ. ನಜ್ಜಾ ಪೀರ್‌ಜಾದೆ ಅವರು ರಚಿಸಿರುವ “From Land to Layout: Practical Guidance for Real Estate” ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಪೀರ್‌ಜಾದೆ ಅವರು ಬೆಳಗಾವಿ ವಿಭಾಗದ ಮಾಜಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಹಾಗೂ ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ 28 ವರ್ಷಗಳ ಸುದೀರ್ಘ ಸೇವೆ …
Read More »ಸಂಶೋಧನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳು ಅಗತ್ಯ: ಪ್ರೊ. ಪಿ.ಜಿ. ತಡಸದ
ಬೆಳಗಾವಿ: ನಾವು ಯಾವುದೇ ಕೆಲಸದಲ್ಲಿ ತೊಡಗಿಕೊಂಡಾಗ ನೈತಿಕತೆ ಮತ್ತು ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಂಶೋಧನೆಯು ವೈಜ್ಞಾನಿಕ ಪ್ರಕ್ರಿಯೆ ಆಗಿರುವುದರಿಂದ ನಾವು ಸಂಶೋಧನೆಯ ಚೌಕಟ್ಟಿನೊಳಗೆ ಅಗತ್ಯವಾದ ಮಾರ್ಗಸೂಚಿಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ.ಜಿ. ತಡಸದ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ, ಆಂತರಿಕ ಗುಣಮಟ್ಟ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗ “ಸಂಶೋಧನೆ …
Read More »ಒಪಿಡಿ ಚೀಟಿ ತರಲು ಹೇಳಿದ್ದಕ್ಕೆ ಬ್ರಿಮ್ಸ್ ವೈದ್ಯರ ಮೇಲೆ ಹಲ್ಲೆ – 7 ಜನ ಅರೆಸ್ಟ್
ಬೀದರ್: ಒಪಿಡಿ ಚೀಟಿ ತರಲು ಹೇಳಿದ್ದಕ್ಕೆ ಜಿಲ್ಲೆಯ ಬ್ರಿಮ್ಸ್ ವೈದ್ಯರ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ವಿಜಯ್ ಸಿಂಗ್ ಎಂಬಾತನನ್ನು ಸ್ನೇಹಿತರು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಒಪಿಡಿ ಚೀಟಿ ತರದೇ ಚಿಕಿತ್ಸೆ ಕೊಡಲು ಆಗಲ್ಲ ಅಂತ ನೈಟ್‌ಶಿಫ್ಟ್ ವೈದ್ಯ ತುಕಾರಾಂ ಅವರು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗಾಯಾಳು ಜೊತೆಗಿದ್ದ ಸ್ನೇಹಿತರು ಒಪಿಡಿ ಚೀಟಿ ಮತ್ತು ಎಂಎಲ್‌ಸಿಗೆ (ಮೆಡಿಕೋ ಲೀಗಲ್ …
Read More »ವಿಳಾಸ ಕೇಳುವ ನೆಪದಲ್ಲಿ ಬಾಲಕನಿಗೆ ಇಂಜೆಕ್ಷನ್ ಹಾಕಿ ಮುಸುಕುಧಾರಿಗಳು ಎಸ್ಕೇಪ್
ಹುಬ್ಬಳ್ಳಿ: ವಿಳಾಸ ಕೇಳುವ ನೆಪದಲ್ಲಿ ಬಾಲಕನಿಗೆ ಇಂಜೆಕ್ಷನ್ ಹಾಕಿ ಮುಸುಕುಧಾರಿಗಳು ಎಸ್ಕೇಪ್ ಆಗಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆದಿದೆ. ಮಣಿಕಂಠ ಗಾಣಿಗೇರ (10) ಎಂಬ ಬಾಲಕನಿಗೆ ಇಂಜೆಕ್ಷನ್ ಹಾಕಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಮಣಿಕಂಠನನ್ನು ತಡೆದು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಗಟ್ಟಿಯಾಗಿ ಬಾಯಿ ಹಿಡಿದು ಇಂಜೆಕ್ಷನ್ ಚುಚ್ಚಿ ಎಸ್ಕೇಪ್ ಆಗಿದ್ದಾರೆ. ಕೂಡಲೇ ಬಾಲಕನನ್ನು ಪೋಷಕರು ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಕರೆದೊಯ್ದು ಪ್ರಾಥಮಿಕ …
Read More »ಸೋತರೂ ಆರ್‌ಸಿಬಿ ಟೇಬಲ್ ಟಾಪರ್ – ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ
ಹೈದರಾಬಾದ್: ಕಳಪೆ ಫೀಲ್ಡಿಂಗ್, ಕಳಪೆ ಬೌಲಿಂಗ್‌ನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 255 ರನ್ ಹೊಡೆಯಿತು. ಸವಾಲಿನ ಮೊತ್ತ ಇದಾಗಿದ್ದರೂ ಆರ್‌ಸಿಬಿ 166 ರನ್‌ಗಳಿಸಿದರೆ ಟಾಪ್ 2 ಅರ್ಹತೆ ಪಡೆಯುವ ಟಾರ್ಗೆಟ್ ಸಿಕ್ಕಿದ್ದರಿಂದ ಈ ಮೊತ್ತವನ್ನು …
Read More »ಕಾಕ್ರೋಚ್ ಜನತಾ ಪಕ್ಷದಿಂದ ಮಾನವ ಸರಪಳಿ ಕರೆ – ಬೆಂಗಳೂರು ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಕಾಕ್ರೋಚ್ ಕರ್ನಾಟಕ ಜನತಾ ಪಾರ್ಟಿ ವತಿಯಿಂದ ಪ್ರತಿಭಟನಾ ಕರೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಿದೆ. ಬರುವ ಮೇ 24 ರಂದು ಬೆಂಗಳೂರಿನ ಟೌನ್‌ಹಾಲ್ ಮುಂಭಾಗದಲ್ಲಿ ‘ಶಾಂತಿಯುತ ಮಾನವ ಸರಪಳಿ’ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ. ಆದರೆ ಈ ಪ್ರತಿಭಟನೆಗೆ ಯಾವುದೇ ಕಾನೂನುಬದ್ಧ ಅನುಮತಿ …
Read More »
Laxmi News 24×7