Breaking News

ಸಚಿವ ಸತೀಶ್ ಜಾರಕಿಹೊಳಿ ಮನಸ್ಸು ಮಾಡಿದರಷ್ಟೇ ಹುಕ್ಕೇರಿ ತಾಲೂಕು ನೀರಾವರಿ ಸಾಧ್ಯ: ಚೂನ್ನಪ್ಪಾ ಪೂಜಾರಿ

Spread the love

ಹುಕ್ಕೇರಿ: ದಶಕಗಳಿಂದ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಹುಕ್ಕೇರಿ ತಾಲೂಕಿನ ಅಭಿವೃದ್ಧಿ ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪಾ ಪೂಜಾರಿ ಪ್ರತಿಪಾದಿಸಿದ್ದಾರೆ.

ಕಳೆದ 60 ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಪ್ರಮುಖ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕತ್ತಿ ಕುಟುಂಬಸ್ಥರು ಸತತ 45 ವರ್ಷಗಳ ಕಾಲ ಈ ಭಾಗದ ಶಾಸಕರಾಗಿದ್ದರೂ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ, ಪ್ರಭಾವಿ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಅವರು ವೈಯಕ್ತಿಕವಾಗಿ ಗಮನ ಹರಿಸಿ, ಮನಸ್ಸು ಮಾಡಿದರೆ ಮಾತ್ರ ಹುಕ್ಕೇರಿ ತಾಲೂಕನ್ನು ಸಮಗ್ರವಾಗಿ ನೀರಾವರಿಗೊಳಪಡಿಸಲು ಸಾಧ್ಯವಿದೆ. ತಾಲೂಕಿನ ರೈತರ ದಶಕಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.

ಹುಕ್ಕೇರಿ ತಾಲೂಕು ಬಂದ್ ಯಶಸ್ವಿಗೊಳಿ: ಕಳೆದ 60 ವರ್ಷಗಳಿಂದ ನೀರಾವರಿಯಿಂದ ವಂಚಿತವಾಗಿರುವ ಹುಕ್ಕೇರಿ ತಾಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಬೇಕೆಂದು ಆಗ್ರಹಿಸಿ ಇಂದು ಹಮ್ಮಿಕೊಳ್ಳಲಾಗಿದ್ದ ‘ಹುಕ್ಕೇರಿ ಬಂದ್’ ಕರೆ ಸಂಪೂರ್ಣ ಯಶಸ್ವಿಗೊಳಿಸುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪಾ ಪೂಜಾರಿ ಅವರು ಇದೇ ವೇಳೆ ಕರೆ ನೀಡಿದ್ದಾರೆ.


Spread the love

About Laxminews 24x7

Check Also

ಕುಡಿದ ಮತ್ತಲ್ಲಿ ಟ್ರಾಫಿಕ್‌ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ವಿಡಿಯೋ ವೈರಲ್‌

Spread the loveಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಟ್ರಾಫಿಕ್ ಪೊಲೀಸರ  ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ  ರೈಲ್ವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ