Breaking News

ಹುಕ್ಕೇರಿ ಶಾಸಕರೇ, ಗೃಹಲಕ್ಷ್ಮಿ ಹಣ ಕೂಡಿಟ್ಟು ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡ್ತೀರಾ?

Spread the love

ನಿಖಿಲ್ ಕತ್ತಿಯವರರೇ.. ಹಾಗಿದ್ದರೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ.

ಹುಕ್ಕೇರಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡೋ ವಿಷಯ ಬಂದಾಗ ಜನರ ಹತ್ತಿರ ಗೃಹಲಕ್ಷೀ ಹಣ ಕೇಳ್ತಿದ್ದಿರಿ. ನೆಪ ಹೇಳುತ್ತಿದ್ದೀರಿ. ಹಾಗಿದ್ದರೆ ಗೃಹಲಕ್ಷ್ಮಿ ಯೋಜನೆ ಇಲ್ಲದೇ ಇದ್ದಾಗ ಉಳಿದ 45 ವರ್ಷದ ಹಿಂದೆ ಈ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡೋದಕ್ಕೆ ನಿಮ್ಮ ಕುಟುಂಬಕ್ಕೆ ಏನು ಸಮಸ್ಯೆ ಇತ್ತು ಹೇಳುತ್ತೀರಾ..

ಹುಕ್ಕೇರಿ ತಾಲೂಕಿನಲ್ಲಿ ಹಿಡಕಲ್ ಜಲಾಶಯ, ಮಾರ್ಕಂಡೇಯ ಜಲಾಶಯ ಸೇರಿದಂತೆ ಒಟ್ಟು 2 ಡ್ಯಾಂಗಳಿಗೆ. 50ವರ್ಷಗಳ ಕಾಲ ನಿಮ್ಮ ಕುಟುಂಬವೇ ಹುಕ್ಕೇರಿಯನ್ನ ಆಳಿದೆ. ಆದರು ಯಾಕೆ ನಿಮಗೇ ಹುಕ್ಕೇರಿ ಕ್ಷೇತ್ರವನ್ನ ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡೋಕೆ ಆಗ್ಲಿಲ್ಲ ಉತ್ತರಿಸಿ

50 ವರ್ಷಗಳಿಂದ ಹುಕ್ಕೇರಿಯನ್ನ ನಿಮ್ಮ ತಾತ, ನಿಮ್ಮ ತಂದೆ, ನಿಮ್ಮ ಚಿಕ್ಕಪ್ಪ ಮತ್ತು ಈಗ ನೀವು ಆಳುತ್ತಿದ್ದರು, ತಾಲೂಕಿನಲ್ಲಿ ಎರಡೆರಡು ಡ್ಯಾಂಗಳಿದ್ದರು ಇಂದಿಗೂ ಕೂಡ ಹುಕ್ಕೇರಿ ತಾಲೂಕಿನ ಕೆಲ ಹಳ್ಳಿಗಳ ಜನ ಕೃಷಿ ಚಟುವಟಿಕೆಗಳಿಗೆ ಬಿಡಿ, ಕುಡಿಯವ ನೀರಿಗೂ ಒದ್ದಾಡುತ್ತಿದ್ದಾರೆ. ಯಾಕೆಂದು ತಿಳಿಸುತ್ತಿರಾ?

5ವರ್ಷ ಸಂಸದರಾಗಿದ್ದ ನಿಮ್ಮ ಚಿಕ್ಕಪ್ಪ ರಮೇಶ್ ಕತ್ತಿಯವರು ಹುಕ್ಕೇರಿ ತಾಲೂಕಿನಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶದಿಂದ ನೀರಾವರಿಗಾಗಿ ಎಷ್ಟು ಶ್ರಮವಹಿಸಿದ್ದಾರೆ, ಎಷ್ಟು ಯೋಜನೆಗಳನ್ನ ತಂದಿದ್ದಾರೆ ತಿಳಿಸುವಿರಾ?

ಹುಕ್ಕೇರಿ ತಾಲೂಕಿನ ರೈತರು, ಸ್ಥಳಿಯ ಕಾಂಗ್ರೇಸ್ ಮುಖಂಡರ ಹೋರಾಟದ ಫಲವಾಗಿ ತಾಲೂಕಿನ ಸುಮಾರು 1,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾದ ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಯನ್ನ (ಅಂದಾಜು 70ಕೋಟಿ ರೂಪಾಯಿ) ಮಂಜೂರಾತಿ ಮಾಡಿಸಿ ತಂದರು. ಹಾಗಾದರೆ ನಿಮ್ಮ ಕುಟಂಬದ ಕೊಡುಗೆ ಏನು ಈ ಕ್ಷೇತ್ರಕ್ಕೆ? ಈ ತಾಲೂಕಿಗೆ?

ಗೃಹಲಕ್ಷ್ಮಿ ಹಣ ಎರಡೆರಡು ಸಾವಿರ ರೂಪಾಯಿ ಕೂಡಿಸಿ ಕೊಡಿ ಅದರೊಟ್ಟಿಗೆ MLA Fund ಹಾಕಿ ಯೋಜನೆ ಜಾರಿ ಮಾಡ್ತೀನಿ ಎನ್ನುವುದಾರೆ. ನಾವೆಲ್ಲ ಗೃಹಲಕ್ಷಿ ಹಣ ಕೂಡಿಟ್ಟು ಕೊಡುತ್ತೇವೆ, ನೀವು ನಿಮ್ಮ ಒಡೆತನದ VSL Sugars, ನಿಮ್ಮ 5 Star Hotel ಆದ UK-27 ಹಾಗೂ ಇನ್ನಿತರ ಆಸ್ತಪಾಸ್ತಿಗಳನ್ನ ಮಾರಿ ಬಂದ ಹಣದಲ್ಲಿ ಯೋಜನೆ ಜಾರಿಗೆ ತರುತ್ತಿರಾ?

ಹುಕ್ಕೇರಿ ಕ್ಷೇತ್ರದ ಕೆಲವೊಂದು ಹಳ್ಳಿಗಳು ಪ್ರತಿ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಮತ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗು ಕೂಡ ಅವುಗಳು ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವಂತೆ ನಿಮ್ಮ ಕುಟಂಬ ಯಾಕೆ ಸೇಡಿನ ರಾಜಕಾರಣ ಮಾಡಿತು. ಮತ ಹಾಕದ ಗ್ರಾಮಗಳಿಗೆ ಅಭಿವೃದ್ಧಿ ಶೂನ್ಯವೇ? ಇದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ ತಿಳಿಸಿ?

ನೀವು, ನಿಮ್ಮ ಚಿಕ್ಕಪ್ಪ, ನಿಮ್ಮ ಇಬ್ಬರು ಸಹೋದರರು ಕೂಡಿಕೊಂಡು ಹುಕ್ಕೇರಿ ಕ್ಷೇತ್ರದ ನಾಲ್ಕು ದಿಕ್ಕುಗಳಿಗೂ ನಾಲ್ಕು ಜನ ಕಾವಲುಗಾರರಾಗಿ ನಿಲ್ಲುತ್ತೇವೆ ಅಂತ ಹೇಳಿದ್ರಿ. ಹಾಗಿದ್ದರೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ, ಮಾರ್ಕಾಂಡೇಯ ಜಲಾಶಯದಿಂದ ತಾಲೂಕಿಗೆ ಮೊದಲು ಪ್ರಾಧಾನ್ಯತೆ ಕೊಡೋದು ಬಿಟ್ಟು ದೂರದ ವಿಜಯಪುರದವರೆಗೆ, ಧಾರವಾಡದವರೆಗೆ, ನೀರು ಹೇಗೆ ಹರಿಬಿಟ್ಟಿರಿ ಹೇಳುತ್ತೀರಾ? ಇದೇನಾ ಕಾವಲುಗಾರರ ಲಕ್ಷಣ.


Spread the love

About Laxminews 24x7

Check Also

3 ಲಕ್ಷದವರೆಗೆ ಆದಾಯ ಮಿತಿ ಹೆಚ್ಚಳ – ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ಮುನಿಯಪ್ಪ

Spread the loveಬೆಂಗಳೂರು: ಬಿಪಿಎಲ್  ಕಾರ್ಡ್‌ಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ವರೆಗೆ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ