ಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ ಪ್ರತಿ ತಿಂಗಳು 5 ಲಕ್ಷ ಗ್ರಾಮೀಣರಿಗೆ ಉದ್ಯೋಗ ನೀಡಿ, 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ ಮಾಡುವಷ್ಟು ಅನುದಾನವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಮೊದಲ ತ್ರೈಮಾಸಿಕಕ್ಕೆ 1,700 ಕೋಟಿ ರೂ. ರಾಜ್ಯ ಸರ್ಕಾರ 1,200 ಕೋಟಿ ರೂ. ಹಣವನ್ನು ನೀಡಿದೆ. ಈ ಮೂಲಕ ಪ್ರತಿ ತಿಂಗಳು 5 ಲಕ್ಷ ಗ್ರಾಮೀಣರಿಗೆ ಉದ್ಯೋಗ ನೀಡಿ, 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ ಮಾಡುವಷ್ಟು ಅನುದಾನವಿದೆ ಎಂದಿದ್ದಾರೆ.
ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಗೆ ಹಣದ ಕೊರತೆ ಇಲ್ಲ. ಪ್ರಥಮ ತ್ರೈಮಾಸಿಕಕ್ಕೆ 2900 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ, ಕೆರೆ ಕಾಲುವೆ ಅಭಿವೃದ್ಧಿ, ಚೆಕ್ ಡ್ಯಾಂ ಇತ್ಯಾದಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಕೈಗೊಳ್ಳಲು ಅವಕಾಶವಿದ್ದು, ಉದ್ಯೋಗ ಕೇಳಿ ಬರುವ ಪ್ರತಿಯೊಬ್ಬರಿಗೂ, ಇರುವಲ್ಲೇ ಉದ್ಯೋಗ ನೀಡುವಂತೆ ಸಿಇಓಗಳಿಗೆ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Laxmi News 24×7