Breaking News
Home / Uncategorized / ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ; ಕೇಂದ್ರದ ವಿರುದ್ಧ ರಮೇಶ್​ ಕುಮಾರ್

ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ; ಕೇಂದ್ರದ ವಿರುದ್ಧ ರಮೇಶ್​ ಕುಮಾರ್

Spread the love

ಕೋಲಾರ (ಜನವರಿ 29); ಜನವರಿ 26ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿರುವ ಗಲಭೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ರೈತ ಹೋರಾಟವನ್ನೇ ಮರೆ ಮಾಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, “ರೈತರು ಹಾಗೂ ಸೈನಿಕರನ್ನು ಗೌರವಿಸದ ದೇಶ ದೇಶವೇ ಅಲ್ಲ. ಭಾರತದಲ್ಲಿ ಇದೀಗ ಇಂತಹ ಪರಿಸ್ಥಿತಿ ಬಂದೊದಗಿದೆ. ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೆ ತೋರಿಸ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು. ಆದರೆ, ಇದೇ ವೇಳೆ ಲಕ್ಷಾಂತರ ರೈತರು ತಮಗೆ ಪೊಲೀಸರು ಗೊತ್ತುಪಡಿಸಿದ ರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದಾರೆ. ಆದರೆ, ಕೆಂಪುಕೋಟೆ ಗಲಭೆಯ ಸುದ್ದಿ ಮಾತ್ರ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದೆ. ಇನ್ನೂ ಇದೇ ವಿಚಾರವನ್ನು ಮುಂದಿಟ್ಟು ಕೇಂದ್ರ ಸರ್ಕಾರ ಸಹ ರೈತರ ಹೋರಾಟವನ್ನು ಹಣಿಯಲು ಮುಂದಾಗಿದೆ.

ಈ ಕುರಿತು ಕೋಲಾರದಲ್ಲಿ ಇಂದು ಮಾತನಾಡಿರುವ ಮಾಜಿ ಸ್ಪೀಕರ್​ ರಮೇಶ್ ಕುಮಾರ್​, “​ದೆಹಲಿ ಹೊರ ವಲಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಲಕ್ಷಗಟ್ಟಲೆ ಜನ ಟ್ರಾಕ್ಟರ್ ನಲ್ಲಿ ಬಂದು ಹೋರಾಟದ ಭಾಗವಾಗಿದ್ದಾರೆ. ಈ ಸಂಖ್ಯೆಯ ಜನ ರೈತ ಹೋರಾಟದ ಕಣಕ್ಕೆ ಧುಮುಕಿದ್ದಾರೆ ಎಂದರೆ ಅವರ ಆಕ್ರೋಶ ಎಷ್ಟಿರಬಹುದು? ಈ ವೇಳೆ ಕೆಲ ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೇ ತೋರಿಸುತ್ತಿವೆ. ಈ ಮೂಲಕ ರೈತರ ಹೋರಾಟವನ್ನು ಮರೆಮಾಚುವ ಕೆಲಸ ನಡೆಯುತ್ತಿದೆ. ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ