ತುಮಕೂರು: 30 ಸಾವಿರ ಲಂಚ ಸ್ವೀಕರಿಸುವಾಗ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಪೌತಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 35 ಸಾವಿರ ರೂ. ನೀಡಲಾಗಿತ್ತು. ಎರಡನೇ ಕಂತಿನ 30 ಸಾವಿರ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಲೋಕಾಯುಕ್ತ ಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಪಿಐಗಳಾದ ರಾಜು, ನಿರ್ಮಲಾದೇವಿ ಹಾಗೂ ಶಾಂತಿನಾಥ್ ಹೊನ್ನೂರು ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Laxmi News 24×7