Breaking News

ಮತ್ತೊಂದು ಶುಲ್ಕ ಏರಿಕೆ ಶಾಕ್ – ಪಿಯುಸಿ ಪರೀಕ್ಷಾ ಶುಲ್ಕ ಶೇ.50ರಷ್ಟು ಹೆಚ್ಚಳ | ಯಾವುದು ಎಷ್ಟು ಏರಿಕೆ?

Spread the love

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಶುಲ್ಕ ( ಪರಿಷ್ಕರಣೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ಪದವಿ ಪೂರ್ವ ವಿದ್ಯಾರ್ಥಿಗಳಿಗೂ ಶುಲ್ಕ ಹೆಚ್ಚಳದ ಶಾಕ್ ನೀಡಿದೆ.

ಪರೀಕ್ಷಾ ಶುಲ್ಕಸೇರಿದಂತೆ ಒಟ್ಟು 26 ಬಗೆಯ ವಿವಿಧ ಸೇವೆಗಳ ದರವನ್ನು ಶೇ. 50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಪರಿಷ್ಕೃತ ದರಗಳು 2026-27ನೇ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿವೆ.

ಕಳೆದ 8 ವರ್ಷಗಳಿಂದ ಯಾವುದೇ ಶುಲ್ಕ ಏರಿಕೆ ಮಾಡಿರದ ಕಾರಣ ಪ್ರಸ್ತುತ ದರ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಶೈಕ್ಷಣಿಕ ವೆಚ್ಚಗಳು, ಮುದ್ರಣ ಮತ್ತು ಪರೀಕ್ಷಾ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದಾಗ್ಯೂ, ಏಕಾಏಕಿ ಶೇ. 50ರಷ್ಟು ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹೊರೆ ಹೆಚ್ಚಿಸಲಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.


Spread the love

About Laxminews 24x7

Check Also

ರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆ

Spread the loveಬೆಂಗಳೂರು: ತೀವ್ರ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ