Breaking News

ಜಗಳ ಬಿಡಿಸಲು ಬಂದಿದ್ದವನಿಗೆ ಚಾಕು ಇರಿತ – ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವು

Spread the love

ನೆಲಮಂಗಲ: ಕ್ಷುಲ್ಲಕ ಕಾರಣಕ್ಕಾಗಿ ಜಗಳ ಬಿಡಿಸಲು ಬಂದಿದ್ದವನ ಮೇಲೆಯೇ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪೈಪ್ ಲೈನ್ ರೋಡ್  ಟಿ.ದಾಸರಹಳ್ಳಿಯಲ್ಲಿ  ನಡೆದಿದೆ.

ಜೀವನ್ (29) ಮೃತ ವ್ಯಕ್ತಿ. ಮಹಮದ್ ಗೌಸ್ ಹಾಗೂ ವಸೀಂ ಆರೋಪಿಗಳು ಎಂದು ಗುರುತಿಸಲಾಗಿದೆ.

ನಾಲ್ಕು ದಿನದ ಹಿಂದೆ ಬಾರ್‌ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಜೀವನ್ ಗಲಾಟೆ ಬಿಡಿಸಿ ಕಳುಹಿಸಿದ್ದ. ಅದಾದ 10 ನಿಮಿಷದ ಬಳಿಕ ಅದೇ ಬಾರ್ ಮುಂದೆ ಜೀವನ್ ನಿಂತಿದ್ದ. ಈ ವೇಳೆ ಗೌಸ್ ಹಾಗೂ ವಾಸೀಂ ಬೈಕ್‌ನಲ್ಲಿ ಬಂದಿದ್ದು, ಏಕಾಏಕಿ ಕೊಲೆ ಮಾಡುವ ಉದ್ದೇಶದಿಂದಲೇ ಜೀವನ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ಚಾಕುವಿನಿಂದ ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೀವ ಭಯದಲ್ಲೇ ಜೀವನ್ ಸ್ಥಳದಿಂದ ಓಡಿಹೋಗಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಬಳಿಕ ಹುಟ್ಟೂರು ಕೊಡಗಿಗೆ ಮೃತದೇಹ ರವಾನೆ ಮಾಡಲಿದ್ದಾರೆ.


Spread the love

About Laxminews 24x7

Check Also

ರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆ

Spread the loveಬೆಂಗಳೂರು: ತೀವ್ರ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ