ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ 8.80 ಕೋಟಿ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಂದೇ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ , ಅಡುಗೆ ಅನಿಲ, ಪೆಟ್ರೋಲ್ ಸೇರಿದಂತೆ ಸುಮಾರು 15 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಸಂಬಂಧ 266 ಜನರನ್ನು ಬಂಧಿಸಲಾಗಿದೆ. ಅತೀ ಹೆಚ್ಚು ಜಪ್ತಿಯಾಗಿರುವುದು 8.80 ಕೋಟಿ ರೂ. ಮೌಲ್ಯದ 32,384 ಕ್ವಿಂಟಾಲ್ ಅಕ್ಕಿಯಾಗಿದೆ.
6.17 ಕೋಟಿ ರೂ. ಮೌಲ್ಯದ ಕಳ್ಳಸಾಗಣೆಗೆ ಬಳಸುತ್ತಿದ್ದ 220 ವಾಹನಗಳು, 1,817 ಎಲ್‌ಪಿಜಿ ಸಿಲಿಂಡರ್, 14,258 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಪ್ತಿ ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಅಕ್ಕಿ ಜಪ್ತಿ
ಕೋಲಾರ – 3.81 ಕೋಟಿ ರೂ.
ಬೆಳಗಾವಿ – 1.57 ಕೋಟಿ ರೂ.
ಕಲಬುರಗಿ – 1.49 ಕೋಟಿ ರೂ.
ವಿಜಯಪುರ – 1.02 ಕೋಟಿ ರೂ.
ಬಾಗಲಕೋಟೆ – 91.62 ಲಕ್ಷ ರೂ.
Laxmi News 24×7