Breaking News

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the love

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ;
20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

• ಬೃಹತ್ ಕಳ್ಳತನ ಜಾಲ ಬೇಧಿಸಿದ ಬೆಳಗಾವಿ ಪೊಲೀಸರು
• ಮೂವರು ಬೈಕ್ ಕಳ್ಳರ ಬಂಧನ ಯಶಸ್ವಿ
• 20 ಬೈಕ್ ವಶ; 11 ಲಕ್ಷ ಮೌಲ್ಯ
• ಯಳ್ಳೂರ ಬೈಕ್ ಕಳ್ಳತನ ಪ್ರಕರಣ ಸುಖಾಂತ್ಯ

ಯಳ್ಳೂರ ಗ್ರಾಮದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫಕೀರಪ್ಪ ಕರಿಗಾರ (25), ರಮೇಶ್ ಪಾಟೀಲ (23) ಮತ್ತು ಕಮಲಪ್ಪ ಗುಂಡ್ಯಾಗೋಳ (38) ಬಂಧಿತ ಆರೋಪಿಗಳು.
ಹೊನಗಾ ತಾಜಿ ನಿವಾಸಿ ದಿಲೀಪ ತುಕಾರಾಮ ಜಾಧವ ಬೈಕ್ ಕಳ್ಳತನವಾಗಿರುವ ಕುರಿತು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ

.
ಯಳ್ಳೂರ, ಮಾರ್ಕಂಡೇಯನಗರ ಸೇರಿದಂತೆ ಟಿಳಕವಾಡಿ, ಶಹಾಪೂರ ಹಾಗೂ ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ಯಮಹಾ, ಹೀರೋ ಸ್ಪ್ಲೆಂಡರ್, ಟಿವಿಎಸ್, ಸುಜುಕಿ ಸೇರಿದಂತೆ ವಿವಿಧ ಕಂಪನಿಗಳ ಒಟ್ಟು 20 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 11.73 ಲಕ್ಷವಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ