ಬೈಲಹೊಂಗಲ: ಬಸವ ತತ್ತ್ವದಡಿ ನಡೆಯುವ ಮೂಲಕ ಸದಸ್ಯರ ಅಭಿವೃದ್ಧಿ ಜತೆಗೆ ಅಲ್ಪಾವಧಿಯಲ್ಲೇ ಹೆಮ್ಮರವಾಗಿ ಬೆಳೆದಿರುವ ನಗರದ ಬಸವ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ ಮಾದರಿಯಾಗಿದೆ ಎಂದು ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಬಸವ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಸ್ಥಳಾಂತರಿಸಿದ ನೂತನ ಕಚೇರಿ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಸಂಘದ ಸಂಸ್ಥಾಪಕ ವಿಜಯ ಮೆಟಗುಡ್ಡ ಹಿಡಿದ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬುದಕ್ಕೆ ಸಂಘದ ಅಭಿವೃದ್ಧಿಯೇ ಸಾಕ್ಷಿಯಾಗಿದೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಸದಸ್ಯರ ಸಹಕಾರ ಸದಾ ಇರುತ್ತದೆ ಎಂದರು.
ಕರಾಸೌಸಂಸ ನಿರ್ದೇಶಕ ಜಗದೀಶ ಕವಟಗಿಮಠ ಮಾತನಾಡಿ, ಬಸವ ಸಹಕಾರ ಸಂಘ ಸುಮಾರು 70 ಕೋಟಿ ರೂ. ಬಂಡವಾಳ ಹೊಂದಿ, 1.51 ಕೋಟಿ ರೂ. ಲಾಭ ಗಳಿಸಿರುವ ಸಾಧನೆ ಅನುಕರಣೀಯವಾಗಿದೆ ಎಂದರು. ಸಂಘದ ಸಂಸ್ಥಾಪಕ ವಿಜಯ ಮೆಟಗುಡ್ಡ ಮಾತನಾಡಿ, ಸದಸ್ಯರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಸಂಘದಿಂದ ಹಲವಾರು ಯೋಜನೆ ಜಾರಿಗೊಳಿಸಿದೆ ಎಂದರು.
ಕರಾಸೌಸಂಸ ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ, ಡಾ.ಬಸವರಾಜ ಮಹಾಂತಶೆಟ್ಟಿ, ಡಾ.ಎ.ಎನ್.ಬಾಳಿ, ವಿಶ್ವನಾಥ ಹಿರೇಮಠ, ಮಹಾಂತೇಶ ವಾಲಿ, ಬಸವರಾಜ ಸಾಲಿಮಠ, ಸತೀಶ ಮೆಟಗುಡ್ಡ, ಅಶೋಕ ಶೆಟ್ಟರ, ಸಹಕಾರದ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ನಿರ್ದೇಶಕರಾದ ರಾಜೇಂದ್ರ ಸಂಗೊಳ್ಳಿ, ಮಹಾಂತೇಶ ತಟವಾಟಿ, ಅನಿಲಕುಮಾರ ಇಂಚಲ, ಬಸವರಾಜ ತಳವಾರ, ದಯಾನಂದ ಪರಾಳಶೆಟ್ಟರ, ಪ್ರುಲ್ ಪಾಟೀಲ, ಮಹಾಂತೇಶ ಜಿಗಜಿನ್ನಿ, ಶಂಭುಲಿಂಗ ಹೂಲಿ, ದುಂಡಯ್ಯ ಸುಂಕದ, ಉಮೇಶ ಬೋಳಣ್ಣವರ, ರವಿಚಂದ್ರ ಹೊಸೂರ, ಶಿವಲೀಲಾ ಸಾಲಿಮಠ, ಪ್ರೀತಿ ಬೆಲ್ಲದ, ಸುನೀಲ ಮರಕುಂಬಿ, ಸಲಹಾ ಸಮಿತಿ ಸದಸ್ಯರಾದ ಸೋಮಲಿಂಗಪ್ಪ ಬೋರಕನವರ, ಮಹಾಂತೇಶ ಹೊಸಮನಿ, ಸಂತೋಷ ರಾಯರ, ಅನಿತಾ ಹೋಟಿ, ವೀರಪ್ಪ ಖಾನಾಪುರ ಇತರರಿದ್ದರು. ಸಹಕಾರಿ ಅಧ್ಯಕ್ಷ ಶಿವಾನಂದ ಬಡ್ಡಿಮನಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಬಸವರಾಜ ನಂಜಣ್ಣವರ ನಿರೂಪಿಸಿದರು. ಉದಯ ಹುಲಕುಂದ ವಂದಿಸಿದರು.
Laxmi News 24×7