Breaking News

ಕೇಸರಿ ಶಾಲು ಹಾಕೊಂಡು ಶಾಲಾ-ಕಾಲೇಜಿಗೆ ಬನ್ನಿ – ಬಿಜೆಪಿಗರಿಗೆ ಮಂಥರ್ ಗೌಡ ಸವಾಲ್‌

Spread the love

ಮಡಿಕೇರಿ: ಕೇಸರಿ ಶಾಲು ಹಾಕಿಕೊಂಡೆ ಶಾಲಾ-ಕಾಲೇಜಿಗೆ ಬನ್ನಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ  ಅಚ್ಚರಿಯ ಹೇಳಿಯನ್ನು ನೀಡಿದ್ದಾರೆ.

ಮೂರು ದಿನಗಳ ಹಿಂದಷ್ಟೇ ಹಿಜಬ್‌ಗೆ ಅವಕಾಶ ನೀಡಿ, ಕೇಸರಿ ಶಾಲು ಧರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಸಂಬಂಧ ರಾಜ್ಯಾದ್ಯಂತ ಪರ ವಿರೋಧಗಳು ಚರ್ಚೆ ನಡೆಯುತ್ತಿದೆ. ಇದರ ನಡುವೆ ಶಾಸಕ ಮಂಥರ್ ಗೌಡ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿ, ದಯವಿಟ್ಟು ಮಕ್ಕಳು ಶಾಲಾ-ಕಾಲೇಜುಗಳಿಗೆ ಕೇಸರಿ ಶಾಲು ಹಾಕಿಕೊಂಡೆ ಬನ್ನಿ ಎಂದಿದ್ದಾರೆ.

ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಅಭಿಪ್ರಾಯವಿದೆ. ಯಾರೂ ಯಾವ ರೀತಿಯಲ್ಲಿ ಬೇಕಾದರೂ ಹಾಕಿಕೊಂಡು ಹೋಗಲಿ. ದಯವಿಟ್ಟು ಮಕ್ಕಳು ಕಾಲೇಜಿಗೆ ಬನ್ನಿ. ಎಲ್ಲರೂ ಹಿಜಬ್ ಬಗ್ಗೆ ಮಾತ್ರ ಹೆಚ್ಚಾಗಿ ಚರ್ಚೆ ಮಾಡುತ್ತಿದ್ದಾರೆ. ಆದರೆ ನೀಟ್ ಪರೀಕ್ಷೆ ಬಗ್ಗೆ ಯಾರು ಮಾತನಾಡುತ್ತಿಲ್ಲ. ಯಾಕೆ ದಂಧೆ ನಡೆಯಿತು ಅಂತ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನೀಟ್ ಪರೀಕ್ಷೆ ಬಗ್ಗೆಯೇ ಅತೀ ದೊಡ್ಡ ಚರ್ಚೆಯಾಗಬೇಕು. ಒಳ್ಳೆಯ ಪಾಠವನ್ನು ಕಲಿಯಲು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುವಾಗ ಕೇಸರಿ ಶಾಲು ಹಾಕಿಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ.

ವಿರೋಧ ಪಕ್ಷಗಳು ಧರ್ಮದ ವಿಚಾರದ ಬಗ್ಗೆ ಮಾತಾನಾಡುತ್ತಿದ್ದಾರೆ. ಇತ್ತ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಅದರ ಬಗ್ಗೆ ಯಾಕೆ ಮಾತಾನಾಡುತ್ತಿಲ್ಲ. ಎಲ್ಲಾ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಸಾಧ್ಯವಾಗುತ್ತಾ? ನೂರಾರು ಸಮಸ್ಯೆಗಳು ಇದೆ. ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಪ್ಲ್ಯಾನ್‌ ಮಾಡಿಕೊಳ್ಳದೇ ಇರುವುದರಿಂದ ಇದೀಗ ಅದರ ಫಲಿತಾಂಶ ಕಾಣುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.


Spread the love

About Laxminews 24x7

Check Also

80ನೇ ಸ್ವಾತಂತ್ರ‍್ಯ ದಿನಾಚರಣೆ – ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ

Spread the loveಬೆಂಗಳೂರು: ಇಂದು ದೇಶದೆಲ್ಲೆಡೆ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ