Breaking News

ಜನವರಿಯಲ್ಲಿ‌ ದರ್ಶನ್​ಗೆ ಬೇಲ್‌ ಸಿಗುವ ನಿರೀಕ್ಷೆಯಿದೆ: ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌

Spread the love

ಹಾವೇರಿ: ಜನವರಿಯಲ್ಲಿ ದರ್ಶನ್‌ಗೆ ಬೇಲ್ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಅವರು ಜೈಲಿನಿಂದ ಬಿಡುಗಡೆಯಾಗದಿದ್ದರೇ ನಾನೇ ವೈಯಕ್ತಿಕವಾಗಿ ಜೈಲ್‌ಗೆ ಹೋಗಿ ದರ್ಶನ್​ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ನಟ ಹಾಗೂ ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ತಿಳಿಸಿದರು.ZAID KHAN

ಹಾವೇರಿಯಲ್ಲಿ ಕಲ್ಟ್‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಚಿತ್ರಮಂದಿರಗಳಲ್ಲಿ ದರ್ಶನ್​ ಅಭಿನಯದ ಡೆವಿಲ್ ಚಿತ್ರ ಪ್ರದರ್ಶನ ಕಾಣುತ್ತಿದೆ. ನಮ್ಮ ಕಲ್ಟ್ ಚಿತ್ರ ಜನವರಿ 23 ರಂದು ತೆರೆಕಾಣಲಿದೆ. ಅದರ ಪರಿಣಾಮ ನಮ್ಮ ಚಿತ್ರದ ಮೇಲೆ ಬೀರುವುದಿಲ್ಲ. ಡೆವಿಲ್ ಸಿನಿಮಾ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ದರ್ಶನ್​ ಅವರ ಚಿತ್ರ ಚೆನ್ನಾಗಿ ಓಡುತ್ತಿರುವುದು ನನಗೆ ಖುಷಿ ತಂದಿದೆ ಎಂದರು.ನಾನು ಮೊದಲು ದರ್ಶನ್​ ಅಭಿಮಾನಿ, ನಂತರ ಅವರ ತಮ್ಮ. ನಾನು ಶುಕ್ರವಾರ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್​ ಅವರನ್ನು ಬಹಳ ಮಿಸ್ ಮಾಡಿಕೊಂಡೆ. ಧಾರವಾಡದಲ್ಲಿ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದು ನನಗೆ ಆಶ್ಚರ್ಯವಾಯಿತು. ಈ ರೀತಿ ಜನ ಸೇರಿದ್ದು ಯಾವ ಜನ್ಮದ ಋಣ ಗೊತ್ತಿಲ್ಲ. ಬನಾರಸ್ ಚಿತ್ರದ ಪ್ರೀ ರಿಲೀಸ್​ ಇವೆಂಟ್​ಗೂ ದರ್ಶನ್ ಬಂದಿದ್ದರು ಎಂದು ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ