Breaking News

ರೈತರ ಜೊತೆಗೆ ಬಿಜೆಪಿ ಇದ್ದು, ರೈತರ ಸಲುವಾಗಿ ಹೋರಾಟ ನಡೆಸಲಿದೆ: ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ*

Spread the love

ರಾಜ್ಯದಲ್ಲಿ ಸುರಿದ ಬಾರಿ ಮಳೆಯಿಂದ ಆಗಿರುವ ಬೆಳೆಹಾನಿಯ ಕುರಿತು ತಂಡ ರಚನೆ ಮಾಡಿ ಸರ್ವೇ ಆಗಬೇಕಿದೆ. ರಾಜ್ಯ ಸರ್ಕಾರ ತಕ್ಷಣ ಸರ್ವೇ ಮಾಡಿ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದರೂ ಸರ್ಕಾರ ಸಿಎಂ, ಸಚಿವರು ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲಾ ಎಂದು ಬಿಜೆಪಿ ರಾಜ್ಯ ರೈತ ಮೊರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಕಷ್ಟಕ್ಕೆ ಪರಿಹಾರ ಕೊಡಬೇಕಿದ್ದ ಸರ್ಕಾರ ರೈತರಿಗೆ ಒಂದು ಭರವಸೆ ಕೂಡ ಕೊಟ್ಟಿಲ್ಲ. ರೈತರ ಜೊತೆಗೆ ಬಿಜೆಪಿ ಇದೆ, ರೈತರ ಪರವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದರು.
ಇನ್ನೂ ೨೦೧೯ರಲ್ಲಿ ಪ್ರವಾಹ ಬಂದಾಗ ಅಂದಿನ ಸಿಎಂ ಯಡಿಯೂರಪ್ಪ ನವರು ಕೇಂದ್ರದ ಜೊತೆಗೆ ೧೦ ಸಾವಿರ ಹೆಚ್ಚುವರಿ ಪರಿಹಾರ ಕೊಟ್ಟಿದ್ದರು ಎಂದು ಸ್ಮರಿಸಿದರು. ಇನ್ನೊಂದು ವಾರದಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು. ಕೇಂದ್ರದಿಂದ ಕೊಡಬೇಕಿರುವ ಎಲ್ಲ ಪರಿಹಾರವೂ ಬರಲಿದೆ, ಹಾನಿಯ ಕುರಿತು ರಾಜ್ಯ ಸರ್ಕಾರ ವರದಿ ಕಳಿಸಬೇಕಿದೆ ಎಂದರು. ಇನ್ನೂ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಡ್ಯಾಂಗೆ ಹೆಚ್ಚಿನ ನೀರು ಹರಿದುಬಂದರೆ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಲಿದೆ.
ವಿಜಯಪುರ ಹಾಗೂ ಬಾಗಲಕೋಟ ಜಿಲ್ಲಾಧಿಕಾರಿಗಳು ಮೀಟಿಂಗ್ ಮಾಡಿ, ತಕ್ಷಣವೇ ಸ್ಥಳೀಯವಾಗಿ ತಂಡಗಳನ್ನು ರಚನೆ ಮಾಡಿ ಕ್ರಮ ಕೈಗೊಳ್ಖಬೇಕು. ಪ್ರವಾಹದಿಂದ ಹಾನಿಗೊಳಗಾದವರನ್ನು ಸ್ಥಳಾಂತರ ಮಾಡಬೇಕು ಎಂದಾದರೆ, ಅದನ್ನೂ ಮಾಡಬೇಕು ಎಂದರು. ಇನ್ನೂ ಸ್ಪಿಂಕ್ಲರ್, ತಾಡಪಾತ್ರಿ, ಕೃಷಿಹೊಂಡ, ವಿದ್ಯುತ್ ಕನೆಕ್ಷನ್ ಸೇರಿದಂತೆ ರೈತರಿಗೆ ಸರ್ಕರದಿಂದ ಬರಬೇಕಿದ್ದ ಸೌಲಭ್ಯಗಳನ್ನು ಕಟ್ ಮಾಡಿದ್ದು, ಬೀಜದ ದರ ಹೆಚ್ಚಿಸಿದ್ದಾರೆ. ಕಳೆದ ಬಾರಿ ತೊಗರಿ ಬೆಳೆ ಹಾನಿ ಆದಾಗ ಕೇವಲ‌ ಕಲಬುರಗಿಗೆ ಮಾತ್ರ ಪರಿಹಾರ ಬಂದಿದೆ, ಉಳಿದೆಡೆ ಬರಲಿಲ್ಲ. ಕಳೆದ ಬಾರಿ ತೊಗರಿ ಬೆಳೆ ಬಂದು ಮೂರು ತಿಂಗಳಾದ ಮೇಲೆ ತೊಗರಿ ಖರೀದಿ ಕೇಂದ್ರ ತೆಗೆದಿದ್ದು,
ರೈತರಿಗೆ ಸಹಾಯವಾಗಿಲ್ಲ. ಜೋಳ ಖರೀದಿ ಕೇಂದ್ರದಲ್ಲಿ ಜೋಳ‌ ನೀಡಿದ ರೈತರಿಗೆ ನಾಲ್ಕು ತಿಂಗಳಾದರೂ ಹಣ ಕೊಟ್ಟಿಲ್ಲ‌ ಎಂದು ಆರೋಪಿಸಿದರು. ಎನ್ ಡಿ ಆರ್ ಎಫ್ ನಾರ್ಮ್ಸ್ ಪ್ರಕಾರ ಕೇಂದ್ರ ಕೊಡುವ ಹಣಕ್ಕೆ ಹೆಚ್ಚುವರಿಯಾಗಿ ೨೫ ಸಾವಿರ ಹಣವನ್ನು ರೈತರಿಗೆ ರಾಜ್ಯ ಸರ್ಕಾರ ಕೊಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ೨೦ ಸಾವಿರ ಕೋಟಿ ಪರಿಹಾರ ಕೊಡಲಾಗಿತ್ತು ಎಂದರು. ಸದನದಲ್ಲಿ ರೈತರ ಬಗ್ಗೆ, ನೀರಾವರಿ ಬಗ್ಗೆ ಚರ್ಚೆ ಆಗಬೇಕಿದೆ, ಆದರೆ ಅದು ಆಗುತ್ತಿಲ್ಲ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗುತ್ತಿವೆ ಎಂದರು.
ಇನ್ನೂ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ, ಇದೆಲ್ಲವೂ ತನಿಖೆಯಾಗಿ ಇವರ ಹಿಂದೆ ಇರುವವರ ಬಗ್ಗೆ ಸತ್ಯಾಸತ್ಯತೆ ಬಯಲಾಗಬೇಕು. ಈ ಅನಾಮಿಕ ಹಾಗೂ ಆತನ ಹಿಂದಿರುವವರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಡಾ. ಸುರೇಶ ಬಿರಾದಾರ, ಸಂಜಯ ಕನಮಡಿ, ಎಸ್.ಎ.ಪಾಟೀಲ, ಈರಣ್ಣ ರಾವೂರ, ವಿಜಯ ಜೋಶಿ, ಸಾಬು ಮಾಶ್ಯಾಳ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ