ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.
ಇತ್ತಿಚಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ತೇಜೋವಧೆಗೆ ಕೆಲವರಿಂದ ಪ್ರಯತ್ನಗಳು ನಡೆಯುತ್ತಿರುವದನ್ನು ಖಂಡಿಸಿ ಇಂದು ಹುಕ್ಕೇರಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿತು.
ಪಟ್ಟಣದ ಅಡವಿಸಿದ್ದೇಶ್ವರ ಮಠದ ಆವಣರದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡುತ್ತಾ ಹಿಂದೂ ಸಂಪ್ರದಾಯಗಳ ದೇವಾಲಯಗಳ ಮೇಲೆ ಈ ರೀತಿ ಆರೋಪಗಳು ಮೇಲಿಂದ ಮೇಲೆ ಬಂದರೆ ಸುಮ್ಮನಿರಲ್ಲಾ, ಡಾ, ವೀರೆಂದ್ರ ಹೆಗ್ಗಡೆಯವರ ಜೋತೆ ಇಡಿ ದೇಶ ಇದೆ ಕಾರಣ ಅವರು ದೇಶಕ್ಕೆ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಮಾಡಿದ ಕಾರ್ಯಗಳು ಸಾಕ್ಷಿಯಾಗಿವೆ ಎಂದರು
ಹತ್ತರಗಿ ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳು ಮಾತನಾಡಿ ಎಲ್ಲ ಸಮಾಜದವರ ಭಕ್ತಿಯ ಕೇಂದ್ರ ಧರ್ಮಸ್ಥಳಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವದನ್ನು ಖಂಡಿಸಿ ಇಂದು ಹುಕ್ಕೇರಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುಲಾಗುತ್ತಿದೆ ಎಂದರು
ತಾಲೂಕಾ ಜೈನ್ ಅಸೋಸಿಯೇಷನ್ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ,ಮಹಿಳೆಯರು ಸೇರಿದಂತೆ ಸಾವಿರಾರು ಸಂಖೆಯಲ್ಲಿ ಜನರು ಘೋಷಣೆಯೊಂದಿಗೆ ಹೋಸ ಬಸ್ ನಿಲ್ದಾಣ ಮಾರ್ಗವಾಗಿ ಕೋರ್ಟ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ಬಂದ ಮಾಡಿ ಧರ್ಮಸ್ಥಳದ ಷಡ್ಯಂತ್ರ ವಿರುದ್ದ ಪ್ರತಿಭಟನೆ ಮಾಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಕ್ಯಾರಗುಡ್ಡದ ಮಂಜುನಾಥ ಮಹಾರಾಜರು ನಾಳೆಯಿಂದಲೆ ಕ್ಷೇತ್ರಕ್ಕೆ ಅಂಟಿಕೊಂಡಿರುವ ಕಳಂಕ ಕಳೆದು ಹೋಗಲೆಂದೆ ೮ಂದು ಹುಕ್ಕೇರಿ ನಗರದಲ್ಲಿ ಎಲ್ಲ ಮಠಾಧೀಶರ ಸಮ್ಮುಖದಲ್ಲಿ ಎಲ್ಲ ಸಮಾಜದ ಬಾಂಧವರು ಧರ್ಮಸ್ಥಳದ ಪರವಾಗಿ ಕೈ ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದರು
ಮಹಾವೀರ ಉದ್ಯೋಗ ಸಮೂಹಗಳ ಸಂಸ್ಥೆಗಳ ಅದ್ಯಕ್ಷ ಮಹಾವೀರ ನಿಲಜಗಿ
ಮಾತನಾಡಿ, ಯೂಟ್ಯೂಬ್ಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಿರುವ ಗಿರೀಶ ಮಟ್ಟೆನ್ನವರ, ಸಂತೋಷ ಶೆಟ್ಟಿ, ಸಮೀರ್, ತಿಮರೋಡಿ, ಜಯಂತ ಟಿ. ಮುಂತಾದವರು ಹೆಗ್ಗಡೆಜಿಯವರ ಬಗ್ಗೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಇಂತಹವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹುಕ್ಕೇರಿ ತಹಸಿಲ್ದಾರ ಬಲರಾಮ ಕಟ್ಟಮನಿ ಯವರಿಗೆ ನಿಡಸೋಸಿ ಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಮನವಿ ಸಲ್ಲಿಸಿದರು.
ಪ್ರತಿಭಟನೆ ಯಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಮಹಾವೀರ ನಿಲಜಗಿ, ಪೃಥ್ವಿ ಕತ್ತಿ, ಗುರುರಾಜ ಕುಲಕರ್ಣಿ, ಸುನಿಲ ಪರ್ವತರಾವ, ಬಾಹುಬಲಿ ಸೊಲ್ಲಾಪೂರೆ, ಬಿ ಬಿ ಕಂಠಿ, ಸುಭಾಷ ನಾಯಿಕ, ಶಿವರಾಜ ನಾಯಿಕ,ಬಸವರಾಜ ಪಾಟೀಲ, ಚನ್ನಪ್ಪ ಗಜಬರ, ಬಾಹುಬಲಿ ನಾಗನೂರಿ, ಅಶೋಕ ರಂಗೋಳಿ, ರಾಜು ಖೆಮಲಾಪುರೆ, ಎನ್ ಬಿ ತೇರದಾಳ , ಶೀತಲ ಬ್ಯಾಳಿ, ಅರವಿಂದ ದೇಶಪಾಂಡೆ ಸೇರಿದಂತೆ ವಕೀಲರು, ವೈದ್ಯರು ,ವ್ಯಾಪಾರಸ್ಥರು, ಜನಪ್ರತಿನಿಧಿಗಳು, ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
ಪ್ರತಿಭಟನೆ ಸಮಯದಲ್ಲಿ ಯಾವುದೆ ಅಹಿತಕರ ಘಟನೆ ಜರುಗದಂತೆ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಮಾಡಲಾಗಿತ್ತು.
Laxmi News 24×7