Breaking News
Home / ರಾಜಕೀಯ / ಜಲ ಜೀವನ ಮಿಷನ್‌ ಕಾಮಗಾರಿಗೆ ₹88.05 ಕೋಟಿ ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

ಜಲ ಜೀವನ ಮಿಷನ್‌ ಕಾಮಗಾರಿಗೆ ₹88.05 ಕೋಟಿ ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ: ‘ಆರ್‌ಡಿಪಿಆರ್‌ ಇಲಾಖೆಯಿಂದ ಅರಭಾವಿ ಮತಕ್ಷೇತ್ರದ ಜಲ ಜೀವನ್ ಮಿಷನ್‌ (ಜೆಜೆಎಂ) ಕಾಮಗಾರಿಗೆ ₹88.05 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಮುನ್ಯಾಳ ತೋಟದಲ್ಲಿ ಜಲ ಜೀವನ ಮಿಷನ್‌ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮದಲಮಟ್ಟಿ, ಶಿವಾಪೂರ, ರಂಗಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ ತೋಟ, ಶಿವಾಪೂರ ತೋಟ, ಡೋಣಿ ತೋಟ, ಸ್ವಾಮಿ ತೋಟ ಮುನ್ಯಾಳ ಗ್ರಾಮದ ಸಾರ್ವಜನಿಕರಿಗೆ ಜೆಜೆಎಂ ಅಡಿಯಲ್ಲಿ ಮನೆ ಮನೆಗೆ ನೀರು ಸರಬರಾಜು ಆಗಲಿದೆ ಎಂದು ಹೇಳಿದರು.

ಕ್ಷೇತ್ರದ ಎಲ್ಲ ಭಾಗಗಳಿಗೆ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಡಲಾಗುತ್ತಿದೆ. ಜನರ ಮೂಲ ಸಮಸ್ಯೆಗಳನ್ನು ನೀಗಿಸಲು ಪ್ರಯತ್ನಿಸಲಾಗುತ್ತಿದೆ. ಸಾರ್ವಜನಿಕರ ಸಂಚಾರಕ್ಕಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಮೂಡಲಗಿ-ಮುನ್ಯಾಳ ರಸ್ತೆಯಿಂದ ಲಂಗೋಟಿ ತೋಟದ ವರೆಗಿನ 2 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ₹1 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಮುಖಂಡರಾದ ಸಂಗಪ್ಪ ಸೂರನ್ನವರ, ಗೋವಿಂದ ವಂಟಗುಡಿ, ಆನಂದ ನಾಯ್ಕ, ಸಚೀನ ಕುಲಕರ್ಣಿ, ಮಹಾದೇವ ಗೋಡಿಗೌಡರ, ಮಲ್ಲಯ್ಯ ಹಿರೇಮಠ, ರಮೇಶ ಗೋಡಿಗೌಡರ, ಲಕ್ಕಪ್ಪ ಲಂಗೋಟಿ, ಅಂಬರೀಶ ನಾಯ್ಕ, ಶಿವಬಸು ಡೊಂಬರ, ಧರೆಪ್ಪ ಕುಡಚಿ, ಶಿವಪ್ಪ ಖಾನಟ್ಟಿ, ಮಹಾದೇವ ಮಾಸನ್ನವರ, ಸಂಗಯ್ಯ ಹಿರೇಮಠ, ಮಹಾದೇವ ಬಾಗೋಜಿ, ಮುತ್ತೆಪ್ಪ ಬಿದರಿ, ಅಶೋಕ ಹುಕ್ಕೇರಿ, ಬಸಯ್ಯ ಹಿರೇಮಠ, ಮಹಾದೇವ ಬೆಳಗಲಿ, ಆರ್‌ಡಿಪಿಆರ್ ಎಸ್‌ಒ ಐ.ಎಂ. ದಪೇದಾರ ಇದ್ದರು.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ