Breaking News

Daily Archives: ಏಪ್ರಿಲ್ 27, 2026

ಡಿ.ಸುಧಾಕರ್‌ ಸ್ಥಿತಿ ಗಂಭೀರ – ಕೆಲ‌ವರು ಇಂತಹ ಸಂದರ್ಭ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎಕ್ಸ್‌ಪರ್ಟ್‌ ಎಂದ ಹೆಚ್‌ಡಿಕೆ

ಚಿತ್ರದುರ್ಗ: ಸಚಿವ ಡಿ.ಸುಧಾಕರ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೆಲ‌ವರು ಇಂತಹ ಸಂದರ್ಭ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎಕ್ಸ್‌ಪರ್ಟ್ ಇದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್  ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ  ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ  ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅವರು ಮಾತನಾಡಿದರು. ಈ ವೇಳೆ ಸಚಿವ‌ ಸುಧಾಕರ್ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ. ಈ ವೇಳೆ ನಾನು ಜೆಡಿಎಸ್ ಸ್ಥಾನದ ಬಗ್ಗೆ ಚರ್ಚೆ ಮಾಡಲ್ಲ. ಹಿರಿಯೂರು ಸೇರಿದಂತೆ ಬೇರೆ …

Read More »

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಮಂಗಳೂರು: ರೈಲಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ  ನೀಡಿದ ಘಟನೆ ಮಂಗಳೂರು-ಬೆಂಗಳೂರು ರೈಲಿನಲ್ಲಿ  ನಡೆದಿದೆ. ಮಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ತುಂಬು ಗರ್ಭಿಣಿಗೆ  ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರಿಲ್ಲದೇ 30 ನಿಮಿಷದವರೆಗೂ ಕಾದ ಜನ ಬಳಿಕ ಹೆರಿಗೆಗಾಗಿ ಪರದೆ ಕಟ್ಟಿ ರೈಲಿನಲ್ಲಿದ್ದ ಮಹಿಳೆಯರೇ ಹೆರಿಗೆ ಮಾಡಿಸಿದ್ದಾರೆ. ವೈದ್ಯಕೀಯ ಸೌಲಭ್ಯವಿಲ್ಲದೆ ತೀವ್ರ ರಕ್ತ ಸಾವ್ರದಿಂದ ಬಳಲುತ್ತಿದ್ದ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ (BC …

Read More »

ನಾಳೆ ‌ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟ: ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ತಾಕೀತು

ದಾವಣಗೆರೆ: ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ  ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್​.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ …

Read More »

ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ

ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲ ಅಂತ ಅಪ್ಪ  ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು  ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಯುವತಿಗೆ ಅಪ್ಪ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಸಾಂಬಾರ್ ಏಕೆ ಮಾಡಿಲ್ಲ ಎಂದು ಅಪ್ಪ ಬೈದಿದ್ದಾರೆ. ಮಗಳಿಗೆ ಬೈದ ಅಪ್ಪ ಸಾಂಬಾರ್ ತರಲು ಪಕ್ಕದ …

Read More »

ಇಂದು ನಿಶ್ಚಿತಾರ್ಥ, ನಿನ್ನೆ ರಾತ್ರಿ ಇಬ್ರಾಹಿಂ ಜೊತೆ ಪರಾರಿ – ಲವ್‌ ಜಿಹಾದ್‌ ಆರೋಪ

ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಯುವತಿಯು ರಾತ್ರೋರಾತ್ರಿ ಯುವಕನೋರ್ವನ ಜೊತೆ ಪರಾರಿಯಾಗಿ ಶಾಕ್ ನೀಡಿದ ಘಟನೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಲವ್ ಜಿಹಾದ್  ಆರೋಪ ಕೇಳಿಬಂದಿದೆ. ಗ್ರಾಮದ ನಿವಾಸಿ ಶಂಕ್ರಮ್ಮ ಇಂದು (ಏ.26 ರಂದು) ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಕುಟುಂಬಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಮೇ 11ಕ್ಕೆ ವಿವಾಹ ಮುಹೂರ್ತ ಕೂಡ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ …

Read More »

ಪ್ರೀತಿಯ ವಿದ್ಯಾರ್ಥಿಗಳೆ ನಿಮಗೆ ವಿದಾಯ ಎಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಮಡಿಕೇರಿ: ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಶಿಕ್ಷಕಿಯೊಬ್ಬರು  ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ  ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಆತ್ಮಹತ್ಯೆಗೆ ಶರಣಾದ ಶಿಕ್ಷಕಿ. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಕೋವಿಯಿಂದ ಗುಂಡು ಹೊಡೆದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Read More »

ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ – ಮಗಳು ಓದುತ್ತಿದ್ದ ಮೊದಲ ಮಹಡಿಯೇ ಟಾರ್ಗೆಟ್‌

ಬೆಳಗಾವಿ: ನಗರದ  ಮಂಡೋಳಿ ರಸ್ತೆಯಲ್ಲಿರುವ ವಕೀಲೆಯೊಬ್ಬರ  ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಆತಂಕಕಾರಿ ಘಟನೆ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಮನೆ ಮೇಲೆ ದಾಳಿ ನಡೆದಿದೆ. ಏ.25ರ ರಾತ್ರಿ 1ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಮನೆಯ ಮೊದಲ ಮಹಡಿಯಲ್ಲಿ ಪುತ್ರಿ ಓದುತ್ತಿದ್ದಳು. ಈ ವೇಳೆ ದಾಳಿ ನಡೆದಿದೆ. ಮನೆಯ ಗ್ಲಾಸ್ ಮೇಲೆ ಫೈರಿಂಗ್ …

Read More »

ಸಚಿವರ ತವರಲ್ಲೇ ಸರಾಯಿ ಸದ್ದು: ಬಯಲಾಯ್ತು ಮಂತ್ರಿ ಆಪ್ತರ ಅಸಲಿ ಮುಖವಾಡ! 

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಮದ್ಯದ ಮಳೆ! 🍻 ಸಣ್ಣದುದಾರರಿಗೆ ಹಪ್ತಾ ಕಾಟ, ಮಂತ್ರಿ ಬೆಂಬಲಿಗರಿಗೆ ರಾಜಾತಿಥ್ಯ? ಅಚ್ಚರಿಯ ವಿಷಯ ಅಂದ್ರೆ, ಈ ಅಕ್ರಮದಲ್ಲಿ ಪತ್ರಕರ್ತನೂ ಭಾಗಿ! ಮಾಧ್ಯಮ ರಂಗಕ್ಕೆ ಅಂಟಿದ ಈ ಸರಾಯಿ ಕಳಂಕದ ಕರಾಳ ಸತ್ಯವನ್ನು ‘ಅಸಲಿ ಸುದ್ದಿ’ ತಂಡ ರಿಯಾಲಿಟಿ ಚೆಕ್ ನಡೆಸಿ ಬಯಲಿಗೆಳೆದಿದೆ. ಸಚಿವರ ಕೃಪಾಕಟಾಕ್ಷ ಯಾರ ಮೇಲಿದೆ? ಹಪ್ತಾ ಹಣ ಎಲ್ಲಿಗೆ ತಲುಪುತ್ತಿದೆ? ಸಚಿವರ ಜಿಲ್ಲೆಯ ಈ …

Read More »

ʻಕೈʼಗೆ ಶಕ್ತಿ ತುಂಬಿದ ಅಹಿಂದ: ಸಚಿವ ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿ: ಅಹಿಂದ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಟ್ಟಿದ್ದು, ಮುಂದೆಯೂ ಶೋಷಿತ ವರ್ಗಗಳ ಹಿತರಕ್ಷಣೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಇಲ್ಲಿನ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಅಹಿಂದ ಕರ್ನಾಟಕ ಹೋರಾಟ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಅಹಿಂದ 25 ಹೋರಾಟ ಸಾಧನೆ, ಸಂಕಲ್ಪ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ’ ವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಹಿಂದ …

Read More »

ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ – ಪಂಚಮಸಾಲಿ ಪೀಠದ ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಸವಾಲು

ದಾವಣಗೆರೆ: ಪಂಚಮಸಾಲಿ ಮಠದ ವಿವಾದ ಭಾರೀ ಭುಗಿಲೆದ್ದಿದೆ. ಮಠದ ಟ್ರಸ್ಟಿಗಳ ವಿರುದ್ಧ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್  ಆಕ್ರೋಶ ಹೊರಹಾಕಿದ್ದು, 2008 ರಲ್ಲಿ ಪಂಚಮಸಾಲಿ ಮಠ ಆರಂಭವಾಗಿದೆ. ಕೋಟ್ಯಂತರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಲೆಕ್ಕ ಕೊಡಿ ಎಂದರೆ ಟ್ರಸ್ಟ್‌ನವರು ಯಾಕೆ ಕೊಡಬೇಕು ಎನ್ನುತ್ತಿದ್ದಾರೆ. ಅದರೆ ತರಾತೂರಿಯಲ್ಲಿ ಈಗ ಲೆಕ್ಕ ಕೊಡಲು ಮುಂದಾಗಿದ್ದಾರೆ. ನೀವು ಪ್ರಾಮಾಣಿಕವಾಗಿದ್ದರೆ ಕೊಟ್ಟೂರು ಅಥವಾ ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡಿ. ನಾವು ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ. …

Read More »