Breaking News

ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ – ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ

Spread the love

ದಾವಣಗೆರೆ: ಮಾನಸಿಕ ಅಸ್ವಸ್ಥ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ, 40 ಸಾವಿರ ದಂಡ ಹಾಗೂ ಕೃತ್ಯಕ್ಕೆ ಸಹಕರಿಸಿದ ದಂಪತಿಗೆ 3 ವರ್ಷ ಜೈಲು, 15 ಸಾವಿರ ದಂಡ ವಿಧಿಸಿ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ದಾವಣಗೆರೆ ಚನ್ನಗಿರಿ ತಾಲ್ಲೂಕಿನ ತೌಸಿಫ್ ಅಹಮ್ಮದ್ 7 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾದ ಅಪರಾಧಿ. ಸೈಯ್ಯದ್ ಅಬ್ಬು ಸಾಲೇಹ ಹಾಗೂ ಅಮೀನ್ ಖಾನಂ ದಂಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಅಪರಾಧಿ ದಂಪತಿ 24 ವರ್ಷದ ಯುವತಿಯನ್ನು ಪುಸಲಾಯಿಸಿ ಅಪಹರಿಸಿದ್ದರು. ಚಿತ್ರದುರ್ಗಕ್ಕೆ ಕರೆದೊಯ್ದು ತೌಸಿಫ್‌ಗೆ ಒಪ್ಪಿಸಿದ್ದರು. ಅಲ್ಲಿಂದ ಬೆಂಗಳೂರಿಗೆ ಕರೆದೊಯ್ದ ಅಪರಾಧಿ, ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಚಿತ್ರದುರ್ಗಕ್ಕೆ ಕರೆತಂದು ಬಿಟ್ಟು ಪರಾರಿಯಾಗಿದ್ದನು. ಈ ಸಂಬಂಧ 2020ರ ಆ.8ರಂದು ಸಂತೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 55,000 ರೂ. ನೀಡುವಂತೆ ಕೋರ್ಟ್‌ ಆದೇಶಿಸಿದೆ.


Spread the love

About Laxminews 24x7

Check Also

ಕಾಂಪೌಂಡ್ ಕುಸಿದು 7 ಜನರ ಸಾವಿನಿಂದ ಆಘಾತ: ಡಿಕೆಶಿ

Spread the loveಬೆಂಗಳೂರು: ಕಾಂಪೌಂಡ್ ಕುಸಿದು  ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ