Breaking News

Daily Archives: ಏಪ್ರಿಲ್ 28, 2026

ಗೋಮಾತಾ ಗೌರವ ದಿನದ ಪ್ರಯುಕ್ತ ಗೋ ಸಂರಕ್ಷಣೆಗಾಗಿ ಹಸುವಿನ ಸಮೇತ ಪ್ರತಿಭಟನೆ

 ಬೆಳಗಾವಿ : ಗೋಮಾತಾ ಗೌರವ ದಿನದ ಪ್ರಯುಕ್ತ ನಗರದಲ್ಲಿ ಸೋಮವಾರ ಗೋ ರಕ್ಷಣೆಯ ಜಾಗೃತಿಗಾಗಿ ಗೋವು ಸಮೇತ ರ‌್ಯಾಲಿ ಕೈಗೊಳ್ಳಲಾಯಿತು. ನಗರದ ಅಂಬೇಡ್ಕರ ಉದ್ಯಾನದಿಂದ ಆರಂಭಗೊಂಡ ಗೋ ಮಾತಾ ಗೌರವ ಅಭಿಯಾನ ಸಂಘಟನೆಯ ನೇತೃತ್ವದ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಗೋ ಭಕ್ತರು, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಚನ್ನಮ್ಮ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿದರು. ಗೋವುಗಳಿಗೆ ರಾಷ್ಟ್ರೀಯ ಗೌರವದ ಅಧಿಕೃತ ಸ್ಥಾನ ನೀಡಬೇಕು. ದೇಶಾದ್ಯಂತ ಗೋ ಹತ್ಯೆ …

Read More »

ಹಾಸ್ಯ ಬರಹಗಾರ ನರಸಿಂಹಮೂರ್ತಿಗೆ ಸನ್ಮಾನ

ಬೆಳಗಾವಿ: ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹ ಮೂರ್ತಿ ಅವರನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು. ಕನ್ನಡಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಂಗಸೃಷ್ಟಿ ಪದಾಧಿಕಾರಿಗಳು ನರಸಿಂಹಮೂರ್ತಿಯವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು, ಮಂಗಳವಾರ ಪ್ರದರ್ಶನವಾಗಲಿರುವ ಎಂ.ಎಸ್ ನರಸಿಂಹ ಮೂರ್ತಿ ಅವರ ರಚನೆಯ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕದ ರಂಗತಾಲೀಮು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಕೆಂಡ್ ಹ್ಯಾಂಡ್ ಸದಾಶಿವ ಅಮೇರಿಕದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡ ನಾಟಕವಾಗಿದ್ದು, ರಂಗಸೃಷ್ಟಿ ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದ್ದಾರೆ. …

Read More »

ನಟ ಶ್ಯಾಮ್: ಒಂದು ಪಾತ್ರಕ್ಕಾಗಿ 9 ದಿನ ನಿದ್ದೆಯಿಲ್ಲದೆ ಕಳೆದ ಸಾಹಸಿ

ಭಾರತೀಯ ಚಿತ್ರರಂಗದ ಖ್ಯಾತ ನಟ ಶ್ಯಾಮ್  ತಾವು ನಟಿಸಬೇಕಿದ್ದ ಒಂದು ವಿಶೇಷ ಪಾತ್ರಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಕಣ್ಣಿನ ಕೆಳಭಾಗದಲ್ಲಿ ನೈಸರ್ಗಿಕವಾಗಿ ಬಾತುಕೊಂಡಂತೆ ಕಾಣಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವರು ಸತತ 9 ದಿನಗಳ ಕಾಲ ನಿದ್ದೆ ಮಾಡದೆ ಕಳೆದಿದ್ದರು. ಯಾವುದೇ ಮೇಕಪ್ ಅಥವಾ ಕೃತಕ ತಂತ್ರಜ್ಞಾನ ಬಳಸುವ ಬದಲಾಗಿ, ಪಾತ್ರಕ್ಕೆ ಜೀವ ತುಂಬಲು ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದರು. ಆದರೆ ದುರದೃಷ್ಟವಶಾತ್, ಅವರ ಈ ಅಪ್ರತಿಮ ಪರಿಶ್ರಮ ಮತ್ತು ತ್ಯಾಗದ …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗಣತಿ ಪ್ರಗತಿ ಪರಿಶೀಲನಾ ಸಭೆ

ಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ವಿವಿಧ ಸ್ತರದ ಅಧಿಕಾರಿ ಮತ್ತು ಸಿಬ್ಬಂದಿ ನಿಗದಿತ ಅವಧಿ ಒಳಗೆ ಕಾರ್ಯವನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ ಎಂದು ಆಯುಕ್ತ ಕಾರ್ತಿಕ್.ಎಂ. ತಿಳಿಸಿದರು. ನಗರದ ಪಾಲಿಕೆ ಸಭಾಂಗಣದಲ್ಲಿ  ಜರುಗಿದ ಗಣತಿ ಕಾರ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಗಣತಿದಾರರ ಕಾರ್ಯ ವೇಗ ಪಡೆಯಲು ವಿವಿಧ ಸ್ತರದ ಮೇಲಾಧಿಕಾರಿ ಹಾಗೂ ಸಿಬ್ಬಂದಿ ನಿರಂತರ ಸಂಪರ್ಕ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಾಂತ್ರಿಕ ಸಮಸ್ಯೆ ನೆಪವೊಡ್ಡಿ …

Read More »

ಎಲ್ ಆ್ಯಂಡ್ ಟಿ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ

ಬೆಳಗಾವಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ  ಎಲ್ ಆ್ಯಂಡ್ ಟಿ ( ಲಾರ್ಸೆನ್ ಅಂಡ್ ಸೂರ್ಬೋ) ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕುಡಿಯುವ ನೀರಿನ ಮಾರ್ಗಕ್ಕೆ ಅಳವಡಿಸಿರುವ ಪೈಪ್‌ಲೈನ್ ಗುಣಮಟ್ಟ ಪರಿಶೀಲಿಸಬೇಕು ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು. ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸದಸ್ಯರು, ನಗರದಲ್ಲಿ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಹೆಸರಿನಲ್ಲಿ …

Read More »

SSLC ಫಲಿತಾಂಶದಲ್ಲಿ ಮತ್ತೊಂದು ಎಡವಟ್ಟು: ಕೇವಲ 12 ಅಂಕ ನಮೂದು; ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಕೊಪ್ಪಳ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್​​​ಎಸ್​ಎಲ್​​ಸಿ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್​ ಬಂದಿದೆ. ಆದರೆ ಮೌಲ್ಯಮಾಪಕರಿಂದ ಉಂಟಾಗಿರುವಂತಹ ಕೆಲ ಎಡವಟ್ಟುಗಳು ದಿನೇದಿನೆ ಬೆಳಕಿಗೆ ಬರುತ್ತಿವೆ. ಇದೀಗ ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆಯ ಎಡವಟ್ಟು ಒಂದು ಬೆಳಕಿಗೆ ಬಂದಿದ್ದು, ಅದರಿಂದ ಆಘಾತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ನಿವಾಸಿ ಸಂಜನಾ ಮಡಿವಾಳರ ಎಸ್​​​ಎಸ್​ಎಲ್​​ಸಿ ಪರೀಕ್ಷೆ …

Read More »

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

ದಾವಣಗೆರೆ: ಪಂಚಮಸಾಲಿ ಪೀಠದ  ಟ್ರಸ್ಟಿಗಳು ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳನ್ನು ಏಳೆದು ಹೊರ ಹಾಕುತ್ತೇವೆ ಎಂದು ಹೇಳಿದ್ದಾರೆ. ತಾಕತ್ ಇದ್ದರೆ ಬಂದು ಸ್ವಾಮೀಜಿಗಳನ್ನು  ಮುಟ್ಟಿ ನೋಡೋಣಾ‌ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಟ್ರಸ್ಟಿಗಳಿಗೆ ಎಚ್ಚರಿಕೆ ನೀಡಿದರು. ಟ್ರಸ್ಟಿಗಳಿಂದ ಲೆಕ್ಕ ಕೊಡುವ ಕಾರ್ಯಕ್ರಮದ ಹಿನ್ನೆಲೆ, ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ಮಾತನಾಡಿ, ಟ್ರಸ್ಟ್‌ನವರು ಪೊಲೀಸರ ರಕ್ಷಣೆಯಲ್ಲಿ ಬಂದು ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿದ್ದಾರೆ …

Read More »

ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಬೆಂಗಳೂರು: ಬಾಡಿಗೆ ಮನೆಯಲ್ಲಿ ಬೆತ್ತಲೆ ಹಾಗೂ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಪೂಜಾ ದತ್ತಾ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದಳು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜಾ ದತ್ತಾ ಜಾರ್ಖಂಡ್ ಮೂಲದವಳು. ಕಳೆದ ಎರಡೂವರೆ ವರ್ಷದಿಂದ ಆಡುಗೋಡಿಯಲ್ಲಿ ವಾಸವಿದ್ದಳು. ಈ ಹಿಂದೆ ಖಾಸಗಿ …

Read More »

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

ಮುಂಬೈ: ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಎಂಬ ಆದೇಶಕ್ಕೆ ಮಹಾರಾಷ್ಟ್ರ ಸರ್ಕಾರ  6 ತಿಂಗಳ ಬ್ರೇಕ್ ಹಾಕಿದೆ. ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್  ಅವರು ಮೇ.1ರಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಮಾತನಾಡುವುದು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಈ ಸಂಬಂಧ ಶಿವಸೇನಾ ನಾಯಕ ಸಂಜಯ್ ನಿರುಪಮ್  ಅವರು ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದಿದ್ದು, ಆರು ತಿಂಗಳಿಂದ ಒಂದು ವರ್ಷದವರೆಗೆ ಮುಂದೂಡುವಂತೆ …

Read More »

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ

ನವದೆಹಲಿ: ಹೇಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌  ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು  ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.‌ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 16.3 ಓವರ್‌ನಲ್ಲಿ 75 ರನ್‌ಗಳಿಸಿ ಆಲೌಟ್‌ ಆಯಿತು. 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 6.3 ಓವರ್‌ನಲ್ಲಿಯೇ 77 ರನ್‌ಗಳಿಸುವ ಮೂಲಕ ಗೆಲುವು ಸಾಧಿಸಿದೆ. ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಗೆಲುವಿನ ಭರವಸೆಯೊಂದಿಗೆ ಆಟ ಶುರು …

Read More »