ಚಾಮರಾಜನಗರ: ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಟೈಮ್‌ನಲ್ಲೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಕಾಂಪ್ರಮೈಸ್ ಅನಿವಾರ್ಯ ಎಂದರು. ಬೆಂಬಲಿಗರನ್ನು ಕಾಪಾಡುವ ವಿಚಾರದಲ್ಲಿ ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಹಾಗೆ ಅನ್ನಿಸುವುದಿಲ್ಲ, ರಾಜಕೀಯದಲ್ಲಿ ಕೆಲವೊಮ್ಮೆ ವೀಕ್ ಆಗಿರಬೇಕಾಗುತ್ತದೆ, ಮತ್ತೆ …
Read More »Daily Archives: ಏಪ್ರಿಲ್ 22, 2026
ಒಳಮೀಸಲು ಜಾರಿ ಮೊದಲೇ ಕೃಷಿ ಇಲಾಖೆ ನೇಮಕಾತಿಗೆ ಅವಕಾಶ ಕೊಡಲ್ಲ: ಎಚ್.ಆಂಜನೇಯ
ಚಿತ್ರದುರ್ಗ: ಒಳಮೀಸಲು ಜಾರಿಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕೃಷಿ ಇಲಾಖೆಯ ಅಧಿಕಾರಿಗಳ ಹುದ್ದೆ ಭರ್ತಿ ಮಾಡಲು ಮುಂದಾಗಿರುವ ಸರ್ಕಾರದ ನಡೆಗೆ ಅವಕಾಶ ಕೊಡುವುದಿಲ್ಲ. ಒಳ ಮೀಸಲು ಜಾರಿ ನಂತರವೇ ಹುದ್ದೆಗಳ ಹಂಚಿಕೆಯಾಗಿ ಪರೀಕ್ಷೆ ಮತ್ತು ನೇಮಕಾತಿ ನಡೆಯಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೊಳಿಸದೆ ಒಂದೆ ಒಂದು ಹುದ್ದೆಯನ್ನು ತುಂಬಲು ಬಿಡುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ …
Read More »37 ವರ್ಷದ ಮಹಿಳೆ 22ರ ಯುವಕನ ಪ್ರೀತಿಸಿ ಮದುವೆ
ಮೈಸೂರು: 37 ವರ್ಷದ ಮಹಿಳೆಯ ಮೇಲೆ 22 ವರ್ಷದ ಯುವಕನಿಗೆ ಪ್ರೇಮಾಂಕುರವಾಗಿದೆ. 1 ವರ್ಷದ ಪ್ರೀತಿಗಾಗಿ 14 ವರ್ಷದ ಮಗನ ಬಿಟ್ಟು ಬಂದ ಮಹಿಳೆಯು 22 ವರ್ಷದ ಯುವಕನನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತ ಆಗುತ್ತಿದ್ದಂತೆ ರಕ್ಷಣೆ ಕೋರಿ ಮೈಸೂರು ಎಸ್ಪಿ ಕಚೇರಿಗೆ ಈ ಜೋಡಿ ಮಂಗಳವಾರ ಭೇಟಿ ನೀಡಿದೆ. ಬೆಂಗಳೂರಿನ ಚಳ್ಳಘಟ್ಟ ನಿವಾಸಿ 37 ವರ್ಷದ ಕವಿತಾ ಮತ್ತು ಮೈಸೂರಿನ ರಮ್ಮನಹಳ್ಳಿ ನಿವಾಸಿ ಭಾಸ್ಕರ್ ಮದುವೆಯಾದವರು. …
Read More »ಧಾರವಾಡ ಜಿಲ್ಲೆಯ 15 ಹಳ್ಳಿಗೆ ನೀರಿನ ಬರ
ಹುಬ್ಬಳ್ಳಿ: ಬೇಸಿಗೆಯ ಬೇಗೆಯಿಂದ ಕುಡಿಯುವ ನೀರಿನ ತತ್ವಾರ ಶುರುವಾಗಿದ್ದು ಸದ್ಯ ಧಾರವಾಡ ಜಿಲ್ಲೆಯ 15 ಹಳ್ಳಿಗಳಲ್ಲಿ ಸಮಸ್ಯೆ ತಲೆದೋರಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಳ್ಳಿಗಳ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಾಗುವ ಆತಂಕ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಬೋರ್‌ವೆಲ್ ಗುರುತಿಸಿದ್ದು ಅಗತ್ಯ ಬಿದ್ದರೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಕಳೆದ 10 ವರ್ಷಗಳಲ್ಲೇ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಬಿಸಿಲು ಪ್ರಮಾಣ ಏರಿಕೆಯಾಗಿದೆ. 2016ರಲ್ಲಿ 40-41 ಡಿಗ್ರಿ ಸೆಲ್ಸಿಯಸ್ ಇದ್ದರೆ ಉಳಿದಂತೆ …
Read More »ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ
ಮೈಸೂರು: ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಚಾರ್ವಿ(15), ರಮ್ಯಾ(16) ಮೃತ ಬಾಲಕಿಯರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರಾ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಶಾಲೆಯಿಂದ ಪ್ರವಾಸಕ್ಕೆಂದು 72 ವಿದ್ಯಾರ್ಥಿಗಳು ತಲಕಾಡಿಗೆ ಆಗಮಿಸಿದ್ದರು ಎನ್ನಲಾಗಿದೆ. ಈಜಲು ಹೋಗಿ ಕಾವೇರಿ ನದಿ ಪಾಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 3 …
Read More »ರಾಯಚೂರಿನಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವು – ತೆಂಗಿನ ಮರ ಸುಟ್ಟು ಭಸ್ಮ
ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಮಿಂಚು ಸಹಿತ ಜೋರು ಮಳೆಯಾಗಿದ್ದು , ನಾನಾ ಅವಾಂತರ ಸಹ ಸೃಷ್ಟಿಯಾಗಿವೆ. ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿ ಬಸವನ ಬಗಡಿ ದೊಡ್ಡಿಯಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದ್ದಾರೆ. 40 ವರ್ಷದ ದುರುಗಮ್ಮ ಸಿಡಿಲಿಗೆ ಬಲಿಯಾದ ರೈತ ಮಹಿಳೆ. ಮಳೆ ಹಿನ್ನೆಲೆ ಬಣವೆಗೆ ತಾಡಪಾಲು ಹೊದಿಸುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿ ಬಂಧನ
ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗುಂತ ಕೊಲಮ್ಮನಹಳ್ಳಿ ಗ್ರಾಮದ ಪಾಲಯ್ಯ ಜಿ (58) ಬಂಧಿತ ಆರೋಪಿ. ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಹಾಗು ಚಳ್ಳಕೆರೆ ಉಪ ಡಿವೈಎಸ್ಪಿ ಸತ್ಯನಾರಾಯಣ ರಾವ್ ಮಾರ್ಗದರ್ಶನದಲ್ಲಿ, ತಳಕು ಪೊಲೀಸ್ ವೃತ್ತ ನಿರೀಕ್ಷಕ …
Read More »ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ
ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಎಂಬ ಯುವಕ ಕಣ್ಮರೆಯಾಗಿದ್ದಾನೆ. ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಯುವಕ ಮತ್ತು ಯುವತಿ ಒಟ್ಟಿಗೆ ವಾಸವಾಗಿದ್ದು, ಕೆಲ ದಿನಗಳ ಹಿಂದೆ ಯುವಕ ಚಿನ್ಮಯ್ ಮೊಬೈಲ್‌ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿತ್ತು. ಸೈಬರ್ ವಂಚಕರು, ಇನ್ನೂ ಹಲವು ಖಾಸಗಿ ಫೋಟೋಗಳಿವೆ. …
Read More »ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ಗೆ ಮನವಿ: ಬಂಗಾರಪೇಟೆ ನಾರಾಯಣಸ್ವಾಮಿ
ಬೆಂಗಳೂರು: ಸಂಪುಟ ಪುನರ್ ರಚನೆ ಮಾಡಬೇಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ. ದೆಹಲಿಗೆ ಶಾಸಕರು ಹೋಗಿದ್ದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದೇವೆ. ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳಿದ್ದೇವೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಮೇ ಮೊದಲ ವಾರದಲ್ಲಿ ಪುನಾರಚನೆ ಮಾಡುತ್ತೇವೆ ಎಂದಿದ್ದಾರೆ. ಸಂಪುಟ ಪುನಾರಚನೆ …
Read More »ನಾನು ಜೆಡಿಎಸ್‌ಗೆ ಹೋಗ್ತೀನಿ ಅನ್ನೋದು ಊಹಾಪೋಹ – ಜಮೀರ್ ಅಹ್ಮದ್ ಸ್ಪಷ್ಟನೆ
ಬೆಂಗಳೂರು: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ. ನಾನು ಯಾಕೆ ಜೆಡಿಎಸ್‌ಗೆ ಹೋಗಲಿ. ನಾನು ಜೆಡಿಎಸ್‌ಗೆ ಹೋಗುತ್ತೇನೆ ಅನ್ನೋದು ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಜಮೀರ್ ಜೆಡಿಎಸ್‌ಗೆ ಹೋಗುತ್ತಾರೆ, ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಥೂ..ಥೂ…ನಾನು ಯಾಕೆ ಜೆಡಿಎಸ್‌ಗೆ ಹೋಗಲಿ. ಇದೆಲ್ಲ ಊಹಾಪೋಹ ಸುದ್ದಿ ಎಂದರು. ನಾನು ಜೆಡಿಎಸ್ ಬಿಟ್ಟು ಬಂದು ಮತ್ತೆ ಯಾಕೆ ಹೋಗಲಿ? ಕಾಂಗ್ರೆಸ್ …
Read More »
Laxmi News 24×7