Breaking News

Daily Archives: ಏಪ್ರಿಲ್ 29, 2026

ಪಾಲಿಕೆ ಆಯುಕ್ತರಿಂದ ಪುಟ್‌ಪಾತ್ ತೆರವು ಕಾರ್ಯಾಚರಣೆ

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರ್‌ಪಿಡಿ ವೃತ್ತದಿಂದ ಗೋಮಟೇಶ ವಿದ್ಯಾಪೀಠದ ವರಗಿನ ರಸ್ತೆಯ ಎರಡು ಬದಿಗಳಲ್ಲಿ ಪುಟ್‌ಪಾತ್ ತೆರವು ಕಾರ್ಯಾಚರಣೆ ಮಂಗಳವಾರ ಪಾಲಿಕೆ ಅಧಿಕಾರಿಗಳು ನಡೆಸಿದರು.  ರಸ್ತೆಯ ಎರಡು ಕಡೆಯಲ್ಲಿ ಅಂಗಡಿಕಾರರು ಪುಟ್‌ಪಾತ್  ಒತ್ತುವರಿ ಮಾಡಿಕೊಂಡಿದ್ದರು. ತಳ್ಳುವ ಗಾಡಿಯವರು ಪುಟ್‌ಪಾತ್ ಮೇಲೆ ಹಣ್ಣು ಹೂವು, ತರಕಾರಿ, ಎಗ್ಗರೈಸ್ ಹೀಗೆ ವಿವಿಧ ಅಂಗಡಿಕಾರರ ವ್ಯಾಪಾರು ವಹಿವಾಟು ನಡೆಸುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಯಂತ್ರಗಳ ಮೂಲಕ …

Read More »

ಕುಡಿಯುವ ನೀರಿಗಾಗಿ ಖಾಸಗಿಯವರ ಕೊಳವೆ ಬಾವಿ ಗುರುತಿಸಿ

ಬೆಳಗಾವಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವಂತ ಗ್ರಾಮಗಳಲ್ಲಿ ಕನಿಷ್ಠ ಮೂರು ಖಾಸಗಿ ಕೊಳವೆ ಬಾವಿ ಗುರುತಿಸಿಕೊಳ್ಳಬೇಕು. ಜಾನುವಾರಗಳಿಗೆ ನೀರು, ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಎಚ್ಚರಿಕೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ  ಕುಡಿಯುವ ನೀರು ಹಾಗೂ ಮೇವು ಪೂರೈಕೆ ಕುರಿತು ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …

Read More »

ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಹದಿನಾರನೇ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈಗ ಎಲ್ಲರ ಕಣ್ಣು ಇಂದಿನ ಮತದಾನದ ಮೇಲೆ ನೆಟ್ಟಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಚಾರದ ಅಂತಿಮ ದಿನದಂದು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಗೆಲುವಿನ ಬಗ್ಗೆ ಅಚಲ …

Read More »

ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಮಾನತು ಶಿಫಾರಸು: ಮೇಲ್ದರ್ಜೆಯ ‘ಪ್ರಭಾವ’ ಉಳಿಸಬಹುದೇ?

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿರುವ ಮ್ಯಾಪಿಂಗ್ ಕಾರ್ಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ (ಬಿಎಂಸಿ) ರಾಜಸ್ವ ವಿಭಾಗದ ಅಧಿಕಾರಿಗಳಿಗೆ ಮಹತ್ವದ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಆದರೆ, ನಿಗದಿತ ಶೇಕಡಾವಾರು ಗುರಿಯನ್ನು ಸಾಧಿಸಲು ವಿಫಲವಾದ ಹಿನ್ನೆಲೆ, ರಾಜಸ್ವ ವಿಭಾಗದ ಮೂವರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮ್ಯಾಪಿಂಗ್ ಕಾರ್ಯದ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಬಿಎಂಸಿ ರಾಜಸ್ವ ವಿಭಾಗದ ಕೆಲ ಅಧಿಕಾರಿಗಳ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂಬುದು ಗಮನಕ್ಕೆ …

Read More »

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

ಚಿತ್ರದುರ್ಗ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಸುಧಾಕರ್ (D.Sudhakar)‌ ಅವರ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರ ವಿರುದ್ಧ ಸುಹಾಸ್ ಸುಧಾಕರ್ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ, ಹೆಬ್ಬೆಟ್ಟು ಬಳಕೆ ಬಗ್ಗೆ ಹೆಚ್‌ಡಿಕೆ ಹೇಳಿಕೆಯಿಂದ ನೋವಾಗಿದೆ. ನಮ್ಮ ತಂದೆಯ ಅನಾರೋಗ್ಯ ವಿಚಾರ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡಿದ್ದು ತುಂಬಾ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ತಂದೆ ಈಗ …

Read More »

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

ಬೆಂಗಳೂರು: ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ ಅಂತ ವಿಪಕ್ಷ ನಾಯಕ ಆರ್.ಅಶೋಕ್  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಂಡಿ ಮುಚ್ಚಲು ಕೋಟಿ ಕೋಟಿ ಹಣ ಖರ್ಚು ಮಾಡಿದ ವಿಚಾರವಾಗಿ ʻಪಬ್ಲಿಕ್ ಟಿವಿʼ ಸುದ್ದಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗುಂಡಿ ಮುಚ್ಚಿದ ಹಣ ಗುಂಡಿಗೆ ಹೋಗಿದೆ. ಗುಂಡಿ ಮುಚ್ಚೋಕೆ ಎಲ್ಲಾದ್ರೂ ಒಂದು ಲಕ್ಷ ಖರ್ಚಾಗುತ್ತದೆಯಾ? ಬೆಂಗಳೂರು ಜನ ಶಾಪ ಹಾಕುತ್ತಿದ್ದಾರೆ. ಎಲ್ಲಾ ಬೆಲೆ ಜಾಸ್ತಿ ಮಾಡಿದ್ದಾರೆ. ಗುಂಡಿ …

Read More »

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

ಬೆಂಗಳೂರು: SSLC ಪರೀಕ್ಷೆ 1 ರಲ್ಲಿ ಫೇಲ್ ಆಗಿರೋ ವಿದ್ಯಾರ್ಥಿಗಳು ಪರೀಕ್ಷೆ 2ನ್ನು ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ಪರೀಕ್ಷೆ 2ನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಶುಲ್ಕ ಸರ್ಕಾರವೇ ಭರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದಲ್ಲದೆ ವಿಷಯವಾರು ವಿದ್ಯಾರ್ಥಿಗಳು ಫೇಲ್ ಆಗಿರೋ ಅಂಕಿಅಂಶಗಳನ್ನು ಸಚಿವರು ಪ್ರಕಟ ಮಾಡಿದ್ದಾರೆ.  ಪರೀಕ್ಷೆ 1 ರಲ್ಲಿ ‌45,415 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. 1 ವಿಷಯದಲ್ಲಿ 20,691 ವಿದ್ಯಾರ್ಥಿಗಳು, 2 ವಿಷಯದಲ್ಲಿ …

Read More »

ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

ಧಾರವಾಡ: ಮರ್ಯಾದೆಗೆ ಅಂಜಿ ಮನನೊಂದು ವಿದ್ಯಾರ್ಥಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಆದಿತ್ಯ ಮಗ್ಯಾಗೇರಿ ಎಂದು ಗುರುತಿಸಲಾಗಿದ್ದು, ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಶನಿವಾರದಂದು ಗಾಂಜಾ ಸೇವನೆ ಸಂಶಯದಲ್ಲಿ ಆದಿತ್ಯ ಹಾಗೂ ಇತರೆ 40ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಪೊಲೀಸರು …

Read More »

ಜಮೀರ್ ದರ್ಗಾವಾಲೆ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೇರಿ ಐವರು ಬಂಧನ; ಮೀಟರ್ ಬಡ್ಡಿ ದಂಧೆಯೇ ಹತ್ಯೆಗೆ ಕಾರಣ?

ಮುಂಡಗೋಡ ಪಟ್ಟಣದಲ್ಲಿ ನಡೆದ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಂಧಿತರಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.ಬಂಧಿತರನ್ನು ಮಂಜುನಾಥ ನಾಗೇಂದ್ರ ಕಾಜಗಾರ (35), ಶ್ರೀಕಾಂತ್ ಕಿರಣ್ಣನವರ್ (22), ಮಲ್ಲಿಕಾರ್ಜುನ ಬಡಶೆಟ್ಟಿ (22), ಮಂಜುನಾಥ ವಿಷ್ಣು ಬೆಳಗಾಂವ (20) ಹಾಗೂ …

Read More »

ಪತ್ನಿಯನ್ನು ಹತ್ಯೆ ಮಾಡಿ ಮರದ ಬಾಕ್ಸ್‌ಗೆ ಶವ ತುಂಬಿ ಸಿಮೆಂಟ್‌ನಲ್ಲಿ ಸೀಲ್‌ ಮಾಡಿದ ಪತಿ , ಪೊಲೀಸರ ಮುಂದೆ ಹೈಡ್ರಾಮಾ

ಗುಜರಾತ್‌: ಪತ್ನಿ ಯನ್ನು ಕ್ರೂರವಾಗಿ ಕೊಂದು ಕಟ್ಟಿಗೆಯ ಬಾಕ್ಸ್ ನಲ್ಲಿ ತುಂಬಿ ಅದನ್ನು ಸಂಪೂರ್ಣವಾಗಿ ಸಿಮೆಂಟ್ ನಿಂದ ಪ್ಯಾಕ್ ಮಾಡಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿಯ ಖತರ್ನಾಕ್‌ ಕೃತ್ಯ ಪೊಲೀಸರು ಬಯಲು ಮಾಡಿದ್ದಾರೆ. ಈ ಘಟನೆ ಗುಜರಾತ್ ನಲ್ಲಿ ನಡೆದಿದ್ದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ ಮರದ ಬಾಕ್ಸ್‌ಗೆ ಶವ ತುಂಬಿ ಸಿಮೆಂಟ್‌ನಲ್ಲಿ ಸೀಲ್‌ ಮಾಡಿ, ನಂತರ ಠಾಣೆಗೆ ತೆರಳಿ ನಾಪತ್ತೆ ನಾಟಕವಾಡಿದ್ದಾನೆ , ಪೊಲೀಸರಿಗೆ ಅದೇಕೋ ಆತನ …

Read More »