ಹುಬ್ಬಳ್ಳಿ: ಅವರಿಬ್ಬರು ಒಂದೇ ಬಡಾವಣೆಯವರು. ಹೀಗಾಗಿ ಇಬ್ಬರು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರು, ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆದರೆ ಅಂತರ್ಜಾತಿ ವಿವಾಹಕ್ಕೆ ಯುವತಿ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದು, ಹೀಗಾಗಿ ತಮಗೆ ರಕ್ಷಣೆಬೇಕು ಅಂತ ಪ್ರೇಮಿಗಳು ಕೊಪ್ಪಳದಿಂದ ಹುಬ್ಬಳ್ಳಿಗೆ ಓಡಿ ಬಂದಿದ್ದಾರೆ. ನಾಗರಾಜ್ ಮತ್ತು ಶೈಲಜಾ ಕೊಪ್ಪಳ ನಗರದ ಮಿಟ್ಟಿಗೇರಿ ಬಡಾವಣೆ ನಿವಾಸಿಗಳು. ಕಳೆದ ರಾತ್ರಿ ಬಸ್ ಹತ್ತಿಕೊಂಡು …
Read More »Daily Archives: ಏಪ್ರಿಲ್ 14, 2026
ಬೆಳಗಾವಿಯಲ್ಲಿ ಏಪ್ರಿಲ್ 14 ರಂದು ಮದ್ಯ ಮಾರಾಟ ನಿಷೇಧ: ಪೊಲೀಸ್ ಆಯುಕ್ತರ ಆದೇಶ
ವಿಶ್ವರತ್ನ ಡಾ . ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಾದ್ಯಂತ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು …
Read More »ಸಂಸತ್ತು,ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ
ಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪದಿಂದಾಗಿ ಕೇಂದ್ರ ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಮಯ ಜಾರಿಗೊಳಿಸುವ ಮೂಲಕ ಗತಕಾಲದ ಕನಸುಗಳನ್ನು ಸಾಕಾರಗೊಳ್ಳಿಸುವುದು ಅಲ್ಲದೆ, ಭವಿಷ್ಯದ ಸಂಕಲ್ಪ ಈಡೇರಲಿವೆ ಎಂದರು. 2023ರಲ್ಲಿ …
Read More »ಸುವರ್ಣ ಘಳಿಗೆಯಲ್ಲಿ ಜೀವ ಉಳಿಸುವುದು ಮಹತ್ಕಾರ್ಯ
ಬೆಳಗಾವಿ: ಅಫಘಾತದ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗುವುದರಿಂದ ಸುವರ್ಣ ಘಳಿಗೆಯಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ. ವೈಜ್ಞಾನಿಕವಾಗಿ ವೈದ್ಯಕೀಯ ಸೇವೆಯೊಂದಿಗೆ, ಜೀವ ಉಳಿಸುವ ಮಹತ್ಕಾರ್ಯವನ್ನೂ ಅತ್ಯಂತ ಶೀಘ್ರದಲ್ಲಿ ನೆರವೇರಿಸಬೇಕು ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್‌ಎಜ್ಯುಕೇಶನ ಆ್ಯಂಡ್ ರಿಸರ್ಚ್ ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ಹೇಳಿದರು. ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ್ ರಿಸರ್ಚ್‌ನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸೈಂಟಿಫಿಕ್ ಸೊಸೈಟಿಯ 44ನೇ ವಾರ್ಷಿಕ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ …
Read More »ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಳಗಾವಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಎ.ಬಿ. ರಜಪೂತ ನಿವಾಸ, ಕಚೇರಿ ಸೇರಿ 7 ಸ್ಥಳದ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಶುಕ್ರವಾರ ಮೂರನೇ 14ಕೋಟಿ ರೂ.ಗಿಂತ ಆಸ್ತಿ ಪತ್ತೆಯಾಗಿದೆ. ಬೆಳಗಾವಿ ಮಹಾನಗರದಲ್ಲಿ 3ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರದಲ್ಲಿ ಐದು ನಿವೇಶನ, 5.960 ಕೆಜಿ ಚಿನ್ನ ಹಾಗೂ ವಜ್ರದ …
Read More »ಮೆಸೇಜ್, ಕಾಲ್ ಮಾಡಿ ಅನುಚಿತ ವರ್ತನೆ – ಖಾಸಗಿ ಆಸ್ಪತ್ರೆಯ ವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯನ ವಿರುದ್ಧ ಸಹೋದ್ಯೋಗಿಯೊಬ್ಬರು ಮೆಸೇಜ್ ಹಾಗೂ ಕಾಲ್ ಮಾಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ 9 ತಿಂಗಳಿಂದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆ ಮುಖ್ಯಸ್ಥ ರಾಕೇಶ್ ಜಯಪ್ರಕಾಶ್ ಸಂತ್ರಸ್ತೆಯನ್ನ ನೋಡಿ, ಅವರೊಂದಿಗೆ ಅನುಚಿತವಾಗಿ ಮಾತಾಡಿದ್ದಾರೆ. ಅಲ್ಲದೇ ಮಿಸ್ ಯು ಅಂತ ಅನುಚಿತವಾಗಿ ಮೆಸೇಜ್ …
Read More »ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು
ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಲೇಖನಾ (10) ಮೃತ ದುರ್ದೈವಿ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ದುರ್ಘಟನೆ ನಡೆದಿದೆ. ಮನೆಯಲ್ಲಿ ಜೋಕಾಲಿ ಆಡುವಾಗ ಸೀರೆ ಉರುಳಾಗಿ ಬಾಲಕಿ ಸಾವನ್ನಪ್ಪಿದ್ದಾಳೆ. ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Read More »ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್ ರಾಜೀನಾಮೆ
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹ್ಮದ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಪತ್ರವನ್ನು ಸಿಎಂ ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ. ಸೋಮವಾರ (ಏ.13) ರಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್‌ಗೆ ಡೆಡ್‌ಲೈನ್ ನೀಡಿದ್ದರು. ಜೊತೆಗೆ ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದರು. ಒಂದು ವೇಳೆ …
Read More »ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು
ಕೋಲಾರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿ ನಡೆದಿದೆ. ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ ಸಲ್ಮಾ (26) ಎಂದು ಗುರುತಿಸಲಾಗಿದೆ. ಮಕ್ಕಳೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಮಹಿಳೆಯರು ಬಂದಿದ್ದರು. ಈ ವೇಳೆ ಆಟವಾಡುತ್ತಾ ಮಕ್ಕಳು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ತಕ್ಷಣ ನೀರಿಗಿಳಿದ ಮೊಹಮದಿ ಮಕ್ಕಳನ್ನು ರಕ್ಷಿಸಿದ್ದಾಳೆ. ಮಕ್ಕಳನ್ನು ರಕ್ಷಿಸಿದ ಬಳಿಕ ಆಕೆ …
Read More »ಭಾರತೀಯ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ: ಇರಾನ್ ಸ್ಪಷ್ಟನೆ
ನವದೆಹಲಿ: ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಿರುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಇರಾನ್ ಯಾವುದೇ ಶುಲ್ಕವನ್ನು ವಿಧಿಸಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಭಾರತೀಯ ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ, ಈ ಬಗ್ಗೆ ನೀವು ಭಾರತ ಸರ್ಕಾರವನ್ನೇ ವಿಚಾರಿಸಬಹುದು ಎಂದು ಹೇಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಟೋಲ್ ಪಾವತಿಸುವ ಹಡಗುಗಳನ್ನು …
Read More »
Laxmi News 24×7