Breaking News

40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ ಆರಂಭ

Spread the love

40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ ಆರಂಭ
40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ಕೊನೆಗೂ ನನಸಾಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದನೆ ಸಿಕ್ಕಿದ್ದು, ಸಚಿವ ಎಂ.ಬಿ. ಪಾಟೀಲ್ ಅವರ ಪ್ರಯತ್ನದಿಂದ ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ.
ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮದ ಜನರ 40 ವರ್ಷಗಳ ಕನಸಿಗೆ ಇದೀಗ ಮುಕ್ತಿ ಸಿಕ್ಕಿದೆ.
ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ್ ಅವರು, ಸಂಬಂಧಿಸಿದ ಬಸ್ ಡಿಪೋ ಡಿಸಿ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ದಾಸ್ಯಾಳ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಇದರ ಜೊತೆಗೆ ತಮ್ಮ ಆಪ್ತ ಸಹಾಯಕ ಸಂತೋಷ ಲೋಕುರಿ ಅವರಿಗೆ ಬಸ್ ಸಂಚಾರ ಆರಂಭವಾಗುವವರೆಗೂ ಈ ಕಾರ್ಯದ ಜವಾಬ್ದಾರಿ ವಹಿಸುವಂತೆ ಸೂಚಿಸಿದ್ದರು.
ಸಚಿವರ ಸೂಚನೆಯಂತೆ ಸಂತೋಷ ಲೋಕುರಿ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗ್ರಾಮಕ್ಕೆ ಬಸ್ ಬರುವವರೆಗೂ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಇದೀಗ ದಾಸ್ಯಾಳ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದ್ದು, 40 ವರ್ಷಗಳ ಗ್ರಾಮಸ್ಥರ ಕನಸು ನನಸಾಗಿದೆ.
ಬಸ್ ಸೌಲಭ್ಯದಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ತಮ್ಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಸಚಿವ ಎಂ.ಬಿ. ಪಾಟೀಲ್ ಹಾಗೂ ಕಾರ್ಯಕ್ಕೆ ಸಹಕರಿಸಿದ ಸಂತೋಷ ಲೋಕುರಿ ಅವರಿಗೆ ದಾಸ್ಯಾಳ ಗ್ರಾಮದ ಯುವಕರು ಮತ್ತು ಹಿರಿಯರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

Spread the love

About Laxminews 24x7

Check Also

ಖಾನಾಪುರ ತಾಲೂಕಿನ ಗರ್ಲಗುಂಜಿ, ಸಿಂಗಿನಕೊಪ್ಪ ಶಾಲೆಯಲ್ಲಿ ಶೈಕ್ಷಣಿಕ ಸಾಮಗ್ರಿ ವಿತರಣೆ

Spread the love ಖಾನಾಪುರ ತಾಲೂಕಿನ ಗರ್ಲಗುಂಜಿ, ಸಿಂಗಿನಕೊಪ್ಪ ಶಾಲೆಯಲ್ಲಿ ಶೈಕ್ಷಣಿಕ ಸಾಮಗ್ರಿ ವಿತರಣೆ ಖಾನಾಪುರ ತಾಲೂಕಿನ ಗರ್ಲಗುಂಜಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ