ಬೆಂಗಳೂರು: ರಾಜ್ಯ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿನ 3 ಹಾಗೂ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಮಾದರಿಗಳ ಪರಿಶೀಲನೆಯನ್ನು ಮುಂದುವರಿಸಿದ್ದು, ಕೆಜಿಗಟ್ಟಲೇ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿವೆ. ಅದುವೆ ಐಷಾರಾಮಿ ಹೋಟೆಲ್ಗಳಲ್ಲಿ ಎಂಬುದು ಆಘಾತಕಾರಿ ಸಂಗತಿ. ಈಗಾಗಲೇ ನಿಯಮ ಉಲ್ಲಂಘನೆಯ ಮೇರೆಗೆ ವಶಪಡಿಸಿಕೊಂಡಿರುವ ಪದಾರ್ಥಗಳು ಟೆಸ್ಟಿಂಗ್ ಸಲುವಾಗಿ ಲ್ಯಾಬ್ಗೆ ರವಾನೆಗೊಂಡಿದೆ. 3 ಹಾಗೂ ಫೈವ್ ಸ್ಟಾರ್ನಂತಹ ಲಕ್ಸುರಿ ಹೋಟೆಲ್ಗಳಲ್ಲಿ ಶುಚಿ-ರುಚಿ ಜೊತೆಗೆ ಶುದ್ಧವಾದ ಆಹಾರಗಳನ್ನು ಉಣಬಡಿಸುತ್ತಾರೆ ಎಂಬ ಜನರ ನಂಬಿಕೆಗೆ ಮಣ್ಣೆರಚುತ್ತಿರುವ ರೆಸ್ಟೋರೆಂಟ್‌ಗಳ ನಿಯಮ ಉಲ್ಲಂಘನೆ ವಿರುದ್ಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗರಂ ಆಗಿದ್ದು, ಸಚಿವ ಯುಟಿ ಖಾದರ್ ಅವರ ಸೂಚನೆಯ ಮೇರೆಗೆ ಮಹತ್ವದ ಆಹಾರ ಪರಿಶೀಲನೆ ಡ್ರೈವ್ನಡಿ ಹೆಸರಾಂತ ಸ್ಟಾರ್ ಹೋಟೆಲ್ಗಳಲ್ಲಿ ಕೊಳೆತ ಮಾಂಸ, ತರಕಾರಿ, ಅವಧಿ ಮೀರಿದ ಹಾಲು ಸೇರಿದಂತೆ ಒಂದಷ್ಟು ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
5 ಸ್ಟಾರ್ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ದಿಢೀರ್ ದಾಳಿಗಿಳಿದ ಆಹಾರ ಇಲಾಖೆ, 30 ವಿಶೇಷ ತಂಡಗಳ ಮೂಲಕ ಕಳಪೆ ಆಹಾರದ ಗುಣಮಟ್ಟ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದ ಕಾರಣ, ವಶಪಡಿಸಿಕೊಂಡ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಇದೀಗ ನೇರವಾಗಿ ಟೆಸ್ಟಿಂಗ್ ಲ್ಯಾಬ್ಗೆ ರವಾನೆ ಮಾಡಲಾಗಿದೆ. ಇದರಲ್ಲಿ, ಯಾವುದೆಲ್ಲ ತಿನ್ನಲು ಯೋಗ್ಯವಲ್ಲ ಎಂದು ಸಾಬೀತಾದ ಬಳಿಕವೇ ವರದಿಯನ್ನು ಮುಂದಿಟ್ಟು ಆಯಾ ಹೋಟೆಲ್ಗೆ ನೋಟಿಸ್ ಮತ್ತು ಲೈಸನ್ಸ್ ರದ್ದು ಮಾಡುವ ಮುಂದಿನ ಕ್ರಮಗಳನ್ನು ಜರುಗಿಸುವುದಾಗಿ ಇಲಾಖೆ ಸಷ್ಟಪಡಿಸಿದೆ.
ಸಚಿವರ ಮಾತು
ಈ ಬಗ್ಗೆ ಮಾತನಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, “ಅನೈರ್ಮಲ್ಯ ಮತ್ತು ಗುಣಮಟ್ಟವಿಲ್ಲದ ಆಹಾರದ ಮಾರಾಟ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರಿಂದ ಹರಿದುಬಂದ ಹಲವಾರು ದೂರುಗಳನ್ನು ಗಮನಿಸಿದ ಬೆನ್ನಲ್ಲೇ ಹೋಟೆಲ್ಗಳ ಮೇಲಿನ ದಾಳಿಗೆ ಸೂಚಿಸಲಾಯಿತು. ಉನ್ನತ ಮಟ್ಟದ ಸಂಸ್ಥೆಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ನಿರ್ಣಯಿಸುವುದು ಆರೋಗ್ಯ ಇಲಾಖೆಯ ಮಹತ್ವದ ಉದ್ದೇಶ” ಎಂದರು.
Laxmi News 24×7