Breaking News
Home / ರಾಷ್ಟ್ರೀಯ (page 776)

ರಾಷ್ಟ್ರೀಯ

ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ: ಅಶ್ವತ್ಥ ನಾರಾಯಣ

ಶಿವಮೊಗ್ಗ: ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ. ಉದ್ದೇಶಪೂರ್ವಕವಾಗಿ ಹಗರಣದಲ್ಲಿ ಸಿಲುಕಿಸಿರುವ ಶಂಕೆ ಇದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.   ಮೂರನೇ ವ್ಯಕ್ತಿ ದೂರು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸತ್ಯ ತಿಳಿಯಲು ಕಾಲವಕಾಶಬೇಕಿದೆ. ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.  

Read More »

ತಾಜ್‍ಮಹಲ್‍ಗೆ ಬಾಂಬ್ ಬೆದರಿಕೆ ಕರೆ..!

ನವದೆಹಲಿ/ಆಗ್ರಾ, ಮಾ.4 (ಪಿಟಿಐ)- ವಿಶ್ವ ಪ್ರಸಿದ್ಧ ತಾಜ್‍ಮಹಲ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆಗೆ ಹೆದರಿ, ಮುನ್ನೆಚ್ಚರಿಕೆ ಕ್ರಮವಾಗಿ ಸಂಕೀರ್ಣವನ್ನು ಖಾಲಿ ಮಾಡಲಾಗಿದೆ.ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಪೊಲೀಸರ ತುರ್ತು ಪ್ರತಿಕ್ರಿಯೆ ಸಂಖ್ಯೆ 112ಕ್ಕೆ ಕರೆ ಮಾಡಿ, ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಹೇಳಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಕ್ಷಣ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಸಿಬ್ಬಂದಿಗೆ ತಿಳಿಸಿದರು. ಕೇಂದ್ರ ಪುರಾತತ್ವ …

Read More »

ನಗು ತರಿಸುತ್ತೆ ಪಲ್ಟಿಯಾದ ಲಾರಿ ಚಾಲಕನ ವರ್ತನೆ

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫನ್ನಿ ಫೋಟೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಮತ್ತೊಂದು ಫೋಟೋ ಇಂಟರ್ನೆಟ್​ನಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ಬಳಿಕ ನಿಮಗೆ ನಿಮ್ಮ ಲವ್​ ಲೈಫ್​ ನೆನಪಾಗೋದಂತು ಫಿಕ್ಸ್. ಮನುಷ್ಯ ಪ್ರೀತಿಯಲ್ಲಿ ಬಿದ್ದ ಅಂದರೆ ಸಾಕು ಆತನಿಗೆ ಹಸಿವು – ನಿದ್ದೆಯ ಅರಿವು ಇರೋದಿಲ್ಲ ಅಂತಾರೆ. ಅಕ್ಕಪಕ್ಕದಲ್ಲಿ ಏನು ನಡೀತಾ ಇದೆ ಅನ್ನೋದೇ ಅವರ ಗಮನಕ್ಕೆ ಬರೋದಿಲ್ಲ. ಇಂಟರ್ನೆಟ್​ನಲ್ಲಿ ವೈರಲ್​ ಆದ ಫೋಟೋ ಕೂಡ …

Read More »

ಉದ್ಯೋಗಿಗಳಿಗೆ ಮಹತ್ವದ ಮಾಹಿತಿ : ಏಪ್ರಿಲ್ 1ರಿಂದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ?

ನವದೆಹಲಿ: ಕಚೇರಿಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಬಹುದು ಎನ್ನಲಾಗಿದ್ದು, ಅಂದ ಹಾಗೇ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಜಾರಿಗೆ ತರುತ್ತಿದ್ದು, ಇದರಿಂದ ದುಡಿಯುವ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಿದ ವೇತನ ಸಂಹಿತೆ ಮಸೂದೆಯಲ್ಲಿ ಮಂಡಿಸಲಾದ ಬದಲಾವಣೆಗಳ ಭಾಗವೇ ಇದಾಗಿದೆ. ಅಂದ ಹಾಗೇ ಹೊಸ ಕಾನೂನಿನ ಪ್ರಕಾರ, 15-30 ನಿಮಿಷಗಳ ಹೆಚ್ಚುವರಿ …

Read More »

ಮತ್ಸ್ಯೋದ್ಯಮಕ್ಕೆ ಬೇಕಿದೆ ನೆರವಿನ ಟಾನಿಕ್‌

ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ ಮೇಲೆ ಮೀನುಗಾರರು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರೇ ಇರುವುದರಿಂದ ಸಹಜವಾಗಿ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಕೊಡುಗೆಗಳು ಸಿಗುವ ನಿರೀಕ್ಷೆಗಳಿವೆ. ಕೋವಿಡ್‌ನಿಂದ ನಲುಗಿರುವ ಪ್ರವಾಸೋದ್ಯಮಕ್ಕೆ ಚೇತರಿಕೆ, ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಮೀನುಗಾರರಿಗೆ ನೆರವು, ಸಣ್ಣ ಉದ್ಯಮಗಳಿಗೆ ಆರ್ಥಿಕ ಪುನಶ್ಚೇತನ, ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಅಸ್ತು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ, …

Read More »

ಚೀನದಿಂದ ಸೈಬರ್‌ ದಾಳಿ ಯತ್ನ: ನಿಗಾ ಅನಿವಾರ್ಯ

ಭಾರತದ ನಿರಂತರ ಒತ್ತಡ ಮತ್ತು ಪರಿಣಾಮಕಾರಿ ರಾಜತಾಂತ್ರಿಕ ನಡೆಗಳಿಗೆ ಮಣಿದಿದ್ದ ಚೀನ ಸರಕಾರ ಲಡಾಖ್‌ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಿದ್ದ ತನ್ನ ಸೇನಾ ತುಕಡಿಗಳನ್ನು ವಾಪಸು ಕರೆಸಿ ಕೊಳ್ಳುವ ಮೂಲಕ ಗಡಿಯಲ್ಲಿ ಸೃಷ್ಟಿಯಾಗಿದ್ದ ಸಂಘರ್ಷದ ವಾತಾವರ ಣವನ್ನು ತಿಳಿಗೊಳಿಸಿತ್ತು. ಇದರಿಂದಾಗಿ ಗಡಿಯಲ್ಲಿ 10 ತಿಂಗಳುಗಳಿಂದ ಇದ್ದ ಸಮರ ಭೀತಿ ದೂರವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಇದರ ನಡುವೆ ಚೀನ ಹ್ಯಾಕರ್‌ಗಳು ದೇಶದ ವಿದ್ಯುತ್‌ ವಿತರಣ ಜಾಲದ ಮೇಲೆ ಸೈಬರ್‌ …

Read More »

ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಯುವ ಮುಖಂಡ ಆನಂದ ಪಾಟೀಲ

ಮಹಾಲಿಂಗಪುರ : ಸಮೀಪದ ರನ್ನಬೆಳಗಲಿ ಪಟ್ಟಣದ ಯುವ ಕಾಂಗ್ರೆಸ್ ಮುಖಂಡ ತಮ್ಮ 26ನೇ ವರ್ಷದ ಹುಟ್ಟು ಹಬ್ಬವನ್ನು ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂಬ ಒಂದು ಸಣ್ಣ ಪ್ರಯತ್ನವಾಗಿ ಸ್ಮಶಾನದಲ್ಲಿ (ರುದ್ರ ಭೂಮಿ) ಸರಳವಾಗಿ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಅವರ ಮೂಢನಂಬಿಕೆ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ನೋಡಿ ತಾವು ಸಹ ತಮ್ಮ ಹುಟ್ಟುಹಬ್ಬ ಆಚರಣೆಯ ಮೂಲಕ ಮೂಢನಂಬಿಕೆಗೆ ಕಡಿವಾಣ ಹಾಕಬಹುದೆಂದು ತಿಳಿದು ತಮ್ಮ 26 ನೇ ವರ್ಷದ …

Read More »

ಆರ್ಡರ್ ಮಾಡಿದ್ದು ಆಯಪಲ್‌ ಐಫೋನ್, ಬಂದಿದ್ದು ಆಯಪಲ್‌ ಜ್ಯೂಸ್!; ಬುಕ್ ಮಾಡಿದ ಮಹಿಳೆಗೆ ಶಾಕ್..!

ಈಗ ಆಫ್‌ಲೈನ್‌ಗಿಂತ ಆನ್‌ಲೈನ್ ನೆಚ್ಚಿಕೊಂಡವರೇ ಹೆಚ್ಚು. ಏಕೆಂದು ಇದು ಬಹಳ ಸುಲಭ ಹಾಗೂ ಕುಳಿತಲ್ಲೇ ಎಲ್ಲ ಕೆಲಸವೂ ಆಗುತ್ತದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಫೋನಿಗೆ ಬದಲಾಗಿ ಕಲ್ಲು, ಇಟ್ಟಿಗೆ ಹಾಗೂ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್‌ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ. ಚೀನಾದ ಮಹಿಳೆಯೊಬ್ಬಳು ಆನ್‌ಲೈನ್ನಲ್ಲಿ ಲಕ್ಷಾಂತರ ರೂ. ಕೊಟ್ಟು ಆರ್ಡರ್ ಮಾಡಿದ ವಸ್ತುವಿನ ಬದಲು …

Read More »

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಖಾತೆಯಿಂದ ಗೊತ್ತೇ ಆಗದೆ ಹಣ ಕಡಿತ -ಪರೋಕ್ಷ ಸುಲಿಗೆ ಎಂದು ಆಕ್ರೋಶ

ಬ್ಯಾಂಕುಗಳು ಗ್ರಾಹಕರಿಗೆ ಪರೋಕ್ಷವಾಗಿ ಸುಲಿಗೆ ಮಾಡುತ್ತಿವೆ. ಸದ್ದೇ ಇಲ್ಲದೆ ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ನಿಯಮಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ಈ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರಲ್ಲ. ಅನೇಕ ರೀತಿಯ ಶುಲ್ಕ ಮತ್ತು ಫೈನ್ ಗಳನ್ನು ಬ್ಯಾಂಕುಗಳು ವಿಧಿಸುತ್ತಿವೆ. ಬಹುತೇಕ ಗ್ರಾಹಕರಿಗೆ ಇದರ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಖಾತೆಯಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಅಥವಾ ನಿಗದಿತ ಮೊತ್ತ ಇಲ್ಲದಿದ್ದಾಗ ನೀವು ಹಣ ಪಾವತಿಗೆ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದರೆ …

Read More »

BPL, APL ಕಾರ್ಡ್ ಬೇಕಾದವರಿಗೆ ಗುಡ್ ನ್ಯೂಸ್: ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ

ಯಾದಗಿರಿ: ಸ್ಥಗಿತಗೊಂಡಿರುವ ಹೊಸ ಆನ್‌ಲೈನ್ ಪಡಿತರ ಚೀಟಿಗಳ ಸ್ವೀಕಾರ ಕಾರ್ಯವನ್ನು ಪುನರಾಂಭಿಸಿದ್ದು, ಆಹಾರ ಇಲಾಖೆ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಹೊಸ ಆದ್ಯತಾ( ಬಿ.ಪಿ.ಎಲ್ ) ಮತ್ತು ಆದ್ಯತೇತರ(ಎ.ಪಿ.ಎಲ್) ಪಡಿತರ ಚೀಟಿಗಳಿಗೆ ಆಹಾರ ಇಲಾಖೆಯ ತಂತ್ರಾಂಶದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದ್ದಾರೆ.

Read More »