Breaking News
Home / ರಾಜಕೀಯ / ನಗು ತರಿಸುತ್ತೆ ಪಲ್ಟಿಯಾದ ಲಾರಿ ಚಾಲಕನ ವರ್ತನೆ

ನಗು ತರಿಸುತ್ತೆ ಪಲ್ಟಿಯಾದ ಲಾರಿ ಚಾಲಕನ ವರ್ತನೆ

Spread the love

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫನ್ನಿ ಫೋಟೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಮತ್ತೊಂದು ಫೋಟೋ ಇಂಟರ್ನೆಟ್​ನಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ಬಳಿಕ ನಿಮಗೆ ನಿಮ್ಮ ಲವ್​ ಲೈಫ್​ ನೆನಪಾಗೋದಂತು ಫಿಕ್ಸ್.

ಮನುಷ್ಯ ಪ್ರೀತಿಯಲ್ಲಿ ಬಿದ್ದ ಅಂದರೆ ಸಾಕು ಆತನಿಗೆ ಹಸಿವು – ನಿದ್ದೆಯ ಅರಿವು ಇರೋದಿಲ್ಲ ಅಂತಾರೆ. ಅಕ್ಕಪಕ್ಕದಲ್ಲಿ ಏನು ನಡೀತಾ ಇದೆ ಅನ್ನೋದೇ ಅವರ ಗಮನಕ್ಕೆ ಬರೋದಿಲ್ಲ. ಇಂಟರ್ನೆಟ್​ನಲ್ಲಿ ವೈರಲ್​ ಆದ ಫೋಟೋ ಕೂಡ ಈ ಮಾತಿಗೆ ಕೈಗನ್ನಡಿಯಂತಿದೆ. ಹಿಂದೆ ಈರುಳ್ಳಿ ತುಂಬಿದ ಲಾರಿ ಪಲ್ಟಿಯಾಗಿ ಬಿದ್ದಿದ್ದರೂ ಸಹ ಈ ಗಂಭೀರತೆ ಅರ್ಥವೇ ಆಗದ ರೀತಿಯಲ್ಲಿ ಡ್ರೈವರ್​ ಫೋನ್​​ ಕಾಲ್​ನಲ್ಲಿ ಮಗ್ನನಾಗಿದ್ದಾನೆ.

ಈ ಫೋಟೋವನ್ನ ಐಪಿಎಸ್​ ಅಧಿಕಾರಿ ಅರುಣ್​ ಬೇಥರಾ ಶೇರ್​ ಮಾಡಿದ್ದಾರೆ. ಈ ಫೋಟೋ ನೋಡ್ತಿದ್ರೆ ಆ ಕಡೆ ಲೈನ್​ನಲ್ಲಿ ಯಾರಿದ್ದಾರೆ ಅನ್ನೋದನ್ನ ಸುಲಭವಾಗಿ ಊಹಿಸಬಹುದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗಿದ್ದು ಟ್ರೋಲಿಗರ ಬಾಯಿಗೆ ಬಾಡೂಟದಂತಾಗಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ