Breaking News
Home / ರಾಜ್ಯ (page 450)

ರಾಜ್ಯ

ಬಂದ್​, ಗ್ರಾಮದಲ್ಲೇ ಬಸಿಯುತ್ತಿರುವ ಮಳೆ ನೀರು..

ದಾವಣಗೆರೆ: ಜಿಲ್ಲೆಯ ಬಲ್ಲೂರು ಗ್ರಾಮದಲ್ಲಿ ಹಾದು ಹೋಗಿರುವ ಕಾಲುವೆಯನ್ನು ಬಂದ್ ಮಾಡಿದ್ದರಿಂದ ಮಳೆಗಾಲದಲ್ಲಿ ಇಡೀ ಗ್ರಾಮದಲ್ಲಿ ನೀರು ಹೊರಹೋಗದೆ ಬಸಿಯುತ್ತಿದೆ. ಇದರಿಂದ ಗ್ರಾಮಸ್ಥರು ಮನೆ ಶಾಲೆ ಎಲ್ಲಿ ಬೀಳುತ್ತೋ ಎಂಬ ಆತಂಕದಲ್ಲಿ‌ ಕಾಲ ಕಳೆಯುತ್ತಿದ್ದಾರೆ. ಮಳೆ ಹೆಚ್ಚು ಆಗುತ್ತಿರುವ ಕಾರಣ ಕೆಲ ಮನೆಗಳು ನೆಲಕ್ಕುರುಳಿವೆ. ಬಲ್ಲೂರು,‌ ಜಡಗನಹಳ್ಳಿ, ಶಿರಗಾನಹಳ್ಳಿ ಗ್ರಾಮದಲ್ಲಿ ಮಳೆ‌ನೀರು ಬಸಿಯುತ್ತಿರುವುದರಿಂದ‌ ನಮ್ಮ ಕಟ್ಟಡಗಳನ್ನು ಉಳಿಸಿಕೊಡಿ‌ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.‌ ಈ ಗ್ರಾಮಗಳು ನೀರಾವರಿ ಪ್ರದೇಶದಿಂದ 9 ರಿಂದ‌ 10 …

Read More »

ಕಾಗವಾಡ ತಾಲೂಕಿನ ಕೂಸನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಅವಿರೋಧ.

ಶುಕ್ರವಾರ ರಂದು ಕೂಸನಾಳ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಜರಗಿತು. ಚುನಾವಣಾಧಿಕಾರಿಗಳಾಗಿ ಕಾಗವಾಡ ಬಿ ಯು ಓ, ಎಂ ಆರ್ ಮುಂಜೆ ಇವರ ನೇತೃತ್ವದಲ್ಲಿ ನೆರವೇರಿತು. ಅಧ್ಯಕ್ಷರಾಗಿ ಅಶೋಕ್ ನಾದನಿ, ಉಪಾಧ್ಯಕ್ಷರಾಗಿ ದೀಪಾ ವಿಜಯಕುಮಾರ್ ಖನ್ನಿಕುಡೆ ಆಯ್ಕೆಗೊಂಡರು, ಮುಳವಾಡ-ಕುಸನಾಳ ಗ್ರಾಮಗಳ 14 ಪಂಚಾಯಿತಿ ಸದಸ್ಯರು ಇದ್ದಾರೆ. ಚುನಾವಣೆ ಜರುಗಿದ ಬಳಿಕ ನೂತನ ಅಧ್ಯಕ್ಷ ಅಶೋಕ ನಾಂದನಿ ಮಾತನಾಡಿ ಎಲ್ಲ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ …

Read More »

ರಮೇಶ ಜಾರಕಿಹೊಳಿ ಬೆಂಬಲದಿಂದ ಸಂತಿಬಸ್ತವಾಡ ಗ್ರಾಮ ಪಂಚಾಯತ ಬಿಜೆಪಿಯ ತೆಕ್ಕೆಗೆ

ಸಂತಿಬಸ್ತವಾಡ ಗ್ರಾಮ ಪಂಚಾಯತ್ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸುಭಾಷ ನಾಯಕ ಮಾನ್ಯ ಲೋಕೊಪಯೋಗಿ ಇಲಾಖೆಯ ಇಂಜಿನಿಯರ ಕಾರ್ಯ ನಿರ್ವಹಿಸಿದರು. ಅಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿ ಮತ್ತು ಶ್ರೀಮತಿ ಮಲ್ಪೂರಿ ಕಲ್ಲಪ್ಪಾ ಜಿಡ್ಡಿಮನಿರವರು ಉಪಾಧ್ಯಕ್ಷರಾಗಿ ಜಯ ಗಳಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯ ಪ್ಯಾನಲರವರು ಆಯ್ಕೆ ಆದರು. ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿರವರ ಬೆಂಬಲದಿಂದ ಸಂತಿಬಸ್ತವಾಡ ಗ್ರಾಮ ಪಂಚಾಯತ …

Read More »

ಶಿವಶರಣ ಹಡಪದ ಅಪ್ಪಣ್ಣ ನವರ 889 ನೇ ಜಯಂತಿ

ಶ್ರೀ ಶಿವಶರಣ ಹಡಪದ ಅಪ್ಪಣ್ಣವರ 889 ನೇ ಜಯಂತಿ ಮಹೋತ್ಸವ ನಿಮಿತ್ಯ ಕಾಗವಾಡ ತಾಲೂಕಿನ ಉಗಾರದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನೆರವೇರಿತು. ಶುಕ್ರವಾರ ರಂದು ಪರಮಪೂಜ್ಯ ಜಗದ್ಗುರು ಅನ್ನದಾನ ಭಾರತೀ ಅಪ್ಪನ ಮಹಾಸ್ವಾಮೀಜಿ ಸುಕ್ಷೇತ್ರ ತಂಗಡಗಿ ಇವರ ದಿವ್ಯ ಸಾನಿಧ್ಯದಲ್ಲಿ ಸಮಾಜದ ಎಲ್ ಸುಮಂಗಲೆರು ಒಂದುಗೂಡಿ ಜಲ ಕುಂಬ ತೆಗೆದುಕೊಂಡು ಬಸವೇಶ್ವರ ವೃತ್ತದಿಂದ ಹನುಮಾನ ಮಂದಿರದ ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡು ಹನುಮಾನ ಮಂದಿರ ಸಭಾಭವನದಲ್ಲಿ ಬೃಹತ್ ಸಮಾವೇಶ ನೆರವೇರಿಸಿದರು. …

Read More »

ಕಳೆದುಕೊಂಡ 82 ಮೊಬೈಲ್​ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಿದ ಎಸ್ಪಿ

ಗದಗ: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಎಸ್ಪಿ ಬಿ.ಎಸ್. ನೇಮಗೌಡ ಅವರು ಮೊಬೈಲ್​ಗಳನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಕಳೆದುಕೊಂಡ ಮೊಬೈಲ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ. ಈ ಮೂಲಕ ಶನಿವಾರ ಒಟ್ಟು 82 ಮೊಬೈಲ್​ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಲಾಗಿದೆ. ನಗರದ ಟೌನ್ ಪಿಎಸ್​ನಿಂದ 3, ರೂರಲ್ ಪಿಎಸ್​ನಿಂದ- 5, ಬೆಟಿಗೇರಿ ಪಿಎಸ್​ನಿಂದ- 2, ಲಕ್ಷ್ಮೇಶ್ವರ ಪಿಎಸ್- 3, ಶಿರಹಟ್ಟಿ …

Read More »

ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ:R.B. ತಿಮ್ಮಾಪೂರ

ಬಾಗಲಕೋಟೆ: ”ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ” ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಕೆಪಿಡಿ ಸಭೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಸಿಂಗಪುರದಲ್ಲಿ ಆಪರೇಷನ್‌ ಸರ್ಕಾರ ಕೆಡವಲು ಯೋಚನೆ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ”ಬಿಜೆಪಿಯವರಿಗೆ ಜನರ ಆಶೀರ್ವಾದ ದೊರೆತಿಲ್ಲ. ಜನ ತಿರಸ್ಕರಿಸಿದರೂ ಬಿಜೆಪಿಯವರು ಅಧಿಕಾರದ ದಾಹದಿಂದ ಈ ಪ್ರಯತ್ನ ನಡೆದಿರಬಹುದು” ಎಂದು ಹೇಳಿದರು. …

Read More »

ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಜೀವ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಾಗಲಕೋಟೆ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಅಪಾರಾಧಿಗೆ ಅಜೀವ ಜೀವಾವಧಿ ಶಿಕ್ಷೆ ಜೊತೆಗ 42 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಹನಮಂತ ಮಾಗುಂಡಪ್ಪ ಹುಲಸಗೇರಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವನಾದ ಈತ 2019ರ ಮೇ.17 ರಂದು ಗ್ರಾಮದಲ್ಲಿ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮ ಇತ್ತು, ಗ್ರಾಮದ ಮನೆಯೊಂದರಲ್ಲಿ ಬುದ್ಧಿಮಾಂದ್ಯ ಮಹಿಳೆ ಒಬ್ಬಳೇ ಇದ್ದಾಗ ಮಧ್ಯಾಹ್ನ …

Read More »

ವಿದೇಶಿ ರಾಜಕೀಯಕ್ಕೆ ಹೊಸ ತಿರುವು ಯುರೋಪ್​ ಪ್ರವಾಸದಲ್ಲಿ ಹೆಚ್​ಡಿಕೆ ಕುಟುಂಬ

ಬೆಂಗಳೂರು: ಸರ್ಕಾರ ಕೆಡವಲು ಸಿಂಗಪುರ್​ನಲ್ಲಿ ಕುಳಿತು ತಂತ್ರ ಹೆಣೆಯಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಫೋಟೋಗಳ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಯೂರೋಪ್ ಪ್ರವಾಸದಲ್ಲಿರುವ ಫೋಟೋಗಳನ್ನು ಜೆಡಿಎಸ್‌ ನಾಯಕರು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಯುರೋಪ್‌ನ ಫಿನ್‌ಲ್ಯಾಂಡ್​​ನಲ್ಲಿ ಹೆಚ್​ಡಿಕೆ ಹಾಗೂ ಕುಟುಂಬ ಸದಸ್ಯರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಅಧಿವೇಶನ ಮುಗಿದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಬಾಲಕೃಷ್ಣ …

Read More »

ಧಾರಾಕಾರ ಮಳೆ ರಭಸಕ್ಕೆ ಭೂತರಾಮನಹಟ್ಟಿಯಲ್ಲಿ ಮನೆಯ ಗೋಡೆ, ಛಾವಣಿ ಕುಸಿದು ಬಿದ್ದಿದೆ.

ಬೆಳಗಾವಿ ಭಾಗದಲ್ಲಿ ಕಳೆದ 10-12 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಅವಾಂತರ ಸೃಷ್ಟಿಸಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳ ಕುಸಿತ ಮುಂದುವರಿದಿದೆ. ತಾಲೂಕಿನ ಭೂತರಾಮನಹಟ್ಟಿಯಲ್ಲಿ ಮಳೆಯ ರಭಸಕ್ಕೆ ಮನೆಯ ಗೋಡೆ, ಛಾವಣಿ ಕುಸಿದು ಬಿದ್ದಿದೆ.   ಬೆಳಗಾವಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಮಳೆಯಿಂದ ಮರಗಳು ಮತ್ತು ಮನೆಗಳ ನೆಲಕೆ ಉರುಳುತ್ತಿವೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ. ಶಬ್ಧ ಕೇಳಿದ …

Read More »

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಎರಡನೇ ಮಹಡಿಯಲ್ಲಿ ಮೇಲ್ಛಾವಣಿ ಸೋರುತ್ತಿದೆ.

ನಿರಂತರ ಮಳೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಸೋರುತ್ತಿರುವ ಘಟನೆ ನಡೆದಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಎರಡನೇ ಮಹಡಿಯಲ್ಲಿ ಮೇಲ್ಛಾವಣಿ ಸೋರುತ್ತಿದೆ. ಆಸ್ಪತ್ರೆ ಕಟ್ಟಡ ಸೋರುತ್ತಿರುವ ಹಿನ್ನೆಲೆ ಅಲ್ಲಿಯ ಸಿಬ್ಬಂದಿಗಳು ಬಕೆಟ್, ಬುಟ್ಟಿಗಳನ್ನು ಇಟ್ಟಿದ್ದಾರೆ.   ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಇರುವ ಮಹಡಿಯಲ್ಲಿ ಮೇಲ್ಛಾವಣಿ ಸೋರುತ್ತಿದೆ.ಗರ್ಭಿಣಿ, ಬಾಣಂತಿಯರು ಬೆಚ್ಚಗಿನ ವಾತಾವರಣದಲ್ಲಿ ಇರಬೇಕು. ಈ ರೀತಿ ತಂಪಾದ ವಾತಾವರಣದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಕಷ್ಟ ಆಗುತ್ತೆ. ಸಂಬಂಧ ಪಟ್ಟ ಅಧಿಕಾರಿಗಳು …

Read More »