Breaking News

ರಾಜ್ಯ

ಮಕ್ಕಳಲ್ಲಿ ರಾಷ್ಟ್ರಪ್ರೀತಿ ಬೆಳೆಸಿದಾಗ ಶಿಕ್ಷಣ ಸಾರ್ಥಕವೆನಿಸುತ್ತದೆ: ಲೀಲಾವತಿ ಹಿರೇಮಠ

ಬೆಳಗಾವಿ : ಮಕ್ಕಳಲ್ಲಿ ಓದಿನ ಜೊತೆಗೆ ರಾಷ್ಟ್ರಪ್ರೀತಿಯನ್ನೂ ಬೆಳೆಸಿದಾಗ ಅಂತಹ ಶಿಕ್ಷಣ ಸಾರ್ಥಕವೆನಿಸುತ್ತದೆ. ಸಂತಮೀರಾ ಶಾಲೆಯ ಶಿಕ್ಷಣದಲ್ಲಿ ಭಾರತೀಯತೆ, ಸಂಸ್ಕೃತಿ, ಕಲೆಗಳನ್ನು ಕಾಣಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹೇಳಿದ್ದಾರೆ. ಆನಗೋಳದ ಜನಕಲ್ಯಾಣ ಟ್ರಸ್ಟ್‌ನ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಕೇವಲ ಓದಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸದೆ ಸರ್ವಾಂಗೀಣ ವಿಕಸನದ ಕಡೆಗೆ …

Read More »

ಬೆಂಗಳೂರು -ವಿಜಯಪುರ ರೈಲು ಸಂಚಾರಕ್ಕೆ ಹೊಸ ದಿಕ್ಕು! : ಸಚಿವ ಎಂ.ಬಿ.ಪಾಟೀಲ

ಬೆಂಗಳೂರು -ವಿಜಯಪುರ ರೈಲು ಸಂಚಾರಕ್ಕೆ ಹೊಸ ದಿಕ್ಕು! : ಸಚಿವ ಎಂ.ಬಿ.ಪಾಟೀಲ ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಸಚಿವರು ಬೆಂಗಳೂರು– ವಿಜಯಪುರ ರೈಲುಗಳನ್ನು ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ …

Read More »

ಬೆಳಗಾವಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ; ಶಾಂತಿ ಮತ್ತು ನಮ್ರತೆಯ ಸಂದೇಶ ನೀಡಿದ ಬಿಷಪ್ ಡೆರೆಕ್ ಫೆರ್ನಾಂಡಿಸ್

ಬೆಳಗಾವಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ; ಶಾಂತಿ ಮತ್ತು ನಮ್ರತೆಯ ಸಂದೇಶ ನೀಡಿದ ಬಿಷಪ್ ಡೆರೆಕ್ ಫೆರ್ನಾಂಡಿಸ್ ಬೆಳಗಾವಿಯಲ್ಲಿ ಅದ್ಧೂರಿ ಕ್ರಿಸ್‌ಮಸ್ ಹಬ್ಬದ ಆಚರಣೆ ಫಾತಿಮಾ ಕ್ಯಾಥೆಡ್ರಲ್‌ನಲ್ಲಿ ವಿಶೇಷ ಮಧ್ಯರಾತ್ರಿ ಪ್ರಾರ್ಥನೆ ಮಾನವಕುಲದ ಉದ್ಧಾರಕ್ಕಾಗಿ ಯೇಸುಕ್ರಿಸ್ತನ ಜನನ ಗಣ್ಯರ ಉಪಸ್ಥಿತಿಯಲ್ಲಿ ಶಾಂತಿ ಸೌಹಾರ್ದತೆಯ ಸಂದೇಶ ಶಾಂತಿ ಮತ್ತು ನಮ್ರತೆಯ ದೂತ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಯಿತು. ಚಳಿಯನ್ನೂ ಲೆಕ್ಕಿಸದೆ ಕ್ರೈಸ್ತ ಬಾಂಧವರು …

Read More »

ಕಾರವಾರ ಕರಾವಳಿ ಉತ್ಸವದಲ್ಲಿ ಮಾನವೀಯತೆ ಮೆರುಗು: ಗಣ್ಯರಿಗಲ್ಲ, ವಿಶೇಷಚೇತನ ಮಕ್ಕಳಿಗೆ ಸಿಕ್ಕಿತು ‘ಹಾರುವ’ ಭಾಗ್ಯ!

ಕಾರವಾರ: ಏಳು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅರಬ್ಬಿ ಸಮುದ್ರತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ವು ಈ ಬಾರಿ ಕೇವಲ ಮನರಂಜನೆಗೆ ಸೀಮಿತವಾಗದೆ, ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ವಿವಿಐಪಿಗಳಿಗೆ ಮಾತ್ರ ಸೀಮಿತ ಎನಿಸುವ ಹೆಲಿಕಾಪ್ಟರ್ ಹಾರಾಟವನ್ನು ಈ ಬಾರಿ ಕಿವುಡ ಮತ್ತು ಮೂಗ ಮಕ್ಕಳು ಉದ್ಘಾಟಿಸಿದ್ದಲ್ಲದೇ, ಹಾರಾಟ ನಡೆಸುವ ಮೂಲಕ ಸಂಭ್ರಮದ ಅಲೆ ಎಬ್ಬಿಸಿದ್ದಾರೆ. ​ಗಣ್ಯರ ಬದಲಿಗೆ ಮಕ್ಕಳಿಂದಲೇ ಉದ್ಘಾಟನೆ: ​ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ‘ಹೆಲಿಕಾಪ್ಟರ್ ಜಾಯ್ ರೈಡ್’ಗೆ ಮಂಗಳವಾರ …

Read More »

ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣ ‘ವಿಶ್ವ ವಿಕಲಚೇತನರ ದಿನಾಚರಣೆ’

ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣ ‘ವಿಶ್ವ ವಿಕಲಚೇತನರ ದಿನಾಚರಣೆ’ ವಿಕಲಚೇತನರು ಮನಸ್ಸು ಮಾಡಿದರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು; ಬಸಪ್ಪ ಸುಣಧೋಳಿ ಬೆಳಗಾವಿ: ನಗರದ ಕಿಲ್ಲಾ ಪ್ರದೇಶದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ (ಹಿಂದ್ವಾಡಿ) ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ‘ವಿಶ್ವಾಸ್’ ಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಬಸಪ್ಪ ಸುಣಧೋಳಿ ಅವರು …

Read More »

ವಿಕಸಿತ್ ಭಾರತ್ – ಜಿ.ಆರ್.ಎ.ಎಮ್.ಜಿ ಬಿಲ್ 2025″ನ್ನು ರದ್ಧುಗೊಳಿಸಿ ನರೇಗಾ ಕೂಲಿ ಕಾರ್ಮಿಕರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ವಿಕಸಿತ್ ಭಾರತ್ – ಜಿ.ಆರ್.ಎ.ಎಮ್.ಜಿ ಬಿಲ್ 2025″ನ್ನು ರದ್ಧುಗೊಳಿಸಿ ನರೇಗಾ ಕೂಲಿ ಕಾರ್ಮಿಕರಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಹಳೆಯ ನರೇಗಾ ಕಾನೂನನ್ನು ಜಾರಿಗೆ ತನ್ನಿ ಜಿಲ್ಲಾಧಿಕಾರಿಗಳ ಮೂಲಕ ಪಿಎಂಗೆ ಮನವಿ ಉದ್ಯೋಗ ಖಾತ್ರಿ ಹೊಸ ಕಾನೂನುನನ್ನು ವಿರೋಧಿಸಿ ಇಂದು ಖಾನಾಪೂರದ ಜಾಗೃತ ಮಹಿಳಾ ಒಕ್ಕೂಟ, ಗ್ರಾಮೀಣ-ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನಾಡಿಯಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ …

Read More »

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ ಅಸುನೀಗಿದೆ. ಮೃಗಾಲಯದ ಸುಮಾರು 4 ವರ್ಷ 10 ತಿಂಗಳು ವಯಸ್ಸಿನ ತಾಯಮ್ಮ ಎಂಬ ಹೆಸರಿನ ಹೆಣ್ಣು ಹುಲಿಯನ್ನು 2014 ಮಾರ್ಚ್ 28ರಂದು ಬಂಡೀಪುರದಿಂದ ರಕ್ಷಿಸಿ ತರಲಾಗಿತ್ತು. ತಾಯಮ್ಮ ಹುಲಿಯು ಇತ್ತೀಚೆಗೆ ಆಹಾರವನ್ನು ತ್ಯಜಿಸಿ ರಕ್ತಕಣ (haemoprotozoa) ನಿಂದ ಬಳಲುತ್ತಿತ್ತು. ಹುಲಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಡಿ.17, 20 ಮತ್ತು 23ರಂದು ಮೃಗಾಲಯವು …

Read More »

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ; ಅರ್ಧ ಗಂಟೆಯಲ್ಲೇ ಆರೋಪಿಗಳ ಬಂಧನ

ಹುಬ್ಬಳ್ಳಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿಠ್ಠಲ ಕರಾಡೆ(29) ಕೊಲೆಯಾದ ಯುವಕ. ಕೊಲೆ ಮಾಡಿದ ಆರೋಪಿಗಳನ್ನು ಘಟನೆ ನಡೆದ ಅರ್ಧ ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗಿದ್ದೇನು? ಮೂಲತಃ ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿಯಾದ ವಿಠ್ಠಲನನ್ನು, ಹುಣಸಿಕಟ್ಟಿ ಗ್ರಾಮಕ್ಕೆ ಪತ್ನಿ ಮನೆಗೆ ಬಂದಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಿಸಾಕಿದ್ದರು. ಹುಬ್ಬಳ್ಳಿ, ಕಲಘಟಗಿ, ತಡಸ ಸೇರಿದಂತೆ ಧಾರವಾಡ ಸುತ್ತಮುತ್ತಲು ಬೈಕ್ …

Read More »

ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ 10 ಮಂದಿ ಸಜೀವ ದಹನ?

ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 10 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್​ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಎಂಬಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್​ ಎರಡೂ ಬೆಂಕಿ …

Read More »

ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ

ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ ಬೆಳಗಾವಿ :ಗ್ರಾಮೀಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನ ವಿರುದ್ಧ ಪೋ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಆರೋಪಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ ಸಂತ್ರಸ್ತೆ ವಿದ್ಯಾರ್ಥಿನಿಗೆ …

Read More »